ನಮ್ಮ ಲೇಖಕರು

Whosoever 

ಓಶೋ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಹರೀಶ್ ಚಂದರ್, 1970ರಲ್ಲಿ ದೀಕ್ಷೆ ಪಡೆದು ಸ್ವಾಮಿ ಚೈತನ್ಯ ಭಾರತಿ ಎಂಬ ಹೆಸರನ್ನು ಪಡೆದರು. 1970ರಿಂದ 1990ರವರೆಗೆ ಓಶೋ ರಜನೀಶರ ನಿಕಟ ಸಂಪರ್ಕದಲ್ಲಿದ್ದವರು. 2010ರಿಂದ ತಮ್ಮೆಲ್ಲ ಗುರುತು ಮತ್ತು ಹೆಸರನ್ನು ತ್ಯಜಿಸಿದ ಚೈತನ್ಯ ಭಾರತಿಯವರು, Whosoever ಎಂದು ತಮ್ಮನ್ನು ಕರೆದುಕೊಂಡರು. ನಾಲ್ಕು ದಶಕಗಳ ಕಾಲ ಧ್ಯಾನ, ಆಧ್ಯಾತ್ಮಿಕ ಶಿಬಿರಗಳನ್ನೂ ಮಾರ್ಗದರ್ಶನವನ್ನೂ ನೀಡುತ್ತಾ ಬಂದಿರುವ Whosoever ಹಲವು ಕೃತಿಗಳನ್ನು ರಚಿಸಿದ್ದು, ಕನ್ನಡಕ್ಕೂ ಅನುವಾದಗೊಂಡಿವೆ. ಪ್ರಸ್ತುತ ಇವರು ಶ್ರೀರಂಗ ಪಟ್ಟಣದ ಕಾವೇರಿ ತೀರದಲ್ಲಿ ‘ಓಶೋ ದೇವಲೋಕ್ – ಓಶೋ ಮಿಸ್ಟರಿ ಸ್ಕೂಲ್’ನಲ್ಲಿ  ನೆಲೆಸಿದ್ದಾರೆ. 

ಅಚಿಂತ್ಯ ಚೈತನ್ಯ

ಅಚಿಂತ ಚೈತನ್ಯ ಮೂಲತಃ ಕರ್ನಾಟಕದ ಬೀರೂರಿನವರು. ತಂದೆಯ ಉದ್ಯೋಗದ ದೆಸೆಯಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಶಿಕ್ಷಣ ಪಡೆದವರು. ಎಂಜಿನಿಯರಿಂಗ್ ಮತ್ತು ವ್ಯವಹಾರಾಡಳಿತದ ಹಿನ್ನೆಲೆಯ ಈ ಲೇಖಕ ತತ್ವಶಾಸ್ತ್ರದ ಆಕರ್ಷಿತರಾಗಿ ವರ್ಷಗಳುರುಳಿದವು. ಚೆನ್ನೈನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಅಚಿಂತ್ಯ ಮಾತೃಮುಖದಿಂದ ಕಲಿತ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬರೆಯುವ ಪ್ರಯತ್ನ ಮಾಡುತ್ತಿದ್ದಾರೆ.

 

ವಿದ್ಯಾಧರ

ವಿದ್ಯಾಧರ ಮೂಲ ಹೆಸರು ವೇಣುಗೋಪಾಲ, ವೃತ್ತಿಯಿಂದ ವಕೀಲರಾಗಿದ್ದವರು. ಊರು ಮೈಸೂರು. ಓಶೋ ಪರಂಪರೆಯಲ್ಲಿ ಅಧ್ಯಾತ್ಮ ಸಾಧನೆ ನಡೆಸಿ, ಇದೀಗ ವಿದ್ಯಾಧರ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ‘ಓಶೋ ಅಲ್ಲಮ ಇನ್ ಸೈ ಟ್ ಫೌಂಡೇಷನ್’ ಗೆ ಸೇರಿದ ಮೈಸೂರಿನ ‘ಓಶೋ ಸನ್ನಿಧಿ’ ಕೇಂದ್ರದಲ್ಲಿ ಅಧ್ಯಾತ್ಮ ಕೇಂದ್ರವನ್ನು ನಡೆಸುತ್ತಿದ್ದಾರೆ. ಓಶೋ ಚಿಂತನೆಗಳ ಜೊತೆಗೆ ಕನ್ನಡ ನೆಲಮೂಲದ ಶರಣ ಶರಣೆಯ ವಚನಗಳ ಮೂಲಕ ಅಧ್ಯಾತ್ಮ ಚಿಂತನೆಯನ್ನು ವಿತರಿಸುವುದು ಇವರ ವೈಶಿಷ್ಟ್ಯ. ಇವರು Whosoever ಅವರ ಶಿಷ್ಯರು. 

ಆನಂದಪೂರ್ಣ

ತಮ್ಮನ್ನು ಪೌರಸ್ತ್ಯ ಹಾಗೂ ಪಾಶ್ಚಾತ್ಯ ತತ್ತ್ವಶಾಸ್ತ್ರ, ಅಧ್ಯಾತ್ಮ ವಿಧಾನಗಳ ವಿದ್ಯಾರ್ಥಿ ಎಂದು ಕರೆದುಕೊಳ್ಳುವ ಆನಂದಪೂರ್ಣ ರಾಮಕೃಷ್ಣ ಪರಂಪರೆಯ ಅನುಯಾಯಿ.

 

ಚಿದಂಬರ ನರೇಂದ್ರ

ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

ಚೇತನಾ ತೀರ್ಥಹಳ್ಳಿ

ಅರಳಿಮರ ಬಳಗದ ಲೇಖಕಿ