ಪ್ರೇಮಿಗಳ ಬೆಸೆದ ಸಂತ : ವ್ಯಾಲೆಂಟೈನ್

stvalentinepicಕಳೆದೆರಡು ದಶಕಗಳಿಂದ `ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ `ಪ್ರೇಮಿಗಳ ದಿನ’ವನ್ನು ಆಚರಿಸಲಾಗುತ್ತಿದೆಯಷ್ಟೆ? ಈ ಆಚರಣೆಗೆ ಹಿನ್ನೆಲೆಯಾಗಿ ಇಂಥದ್ದೇ ಎನ್ನುವ ನಿರ್ದಿಷ್ಟ ಕಾರಣವಿಲ್ಲ. ರೋಮ್‍ನ ಪೇಗನ್ ಧರ್ಮೀಯರನ್ನು ಪರಿವರ್ತಿಸುವ ಕೆಲಸದಲ್ಲಿ ನಿರತರಾಗಿದ್ದು ಹುತಾತ್ಮರಾದ ಪಾದ್ರಿಗಳನ್ನು ವ್ಯಾಲೆಂಟೈನ್‍ಗಳೆಂದು ಕರೆಯಲಾಗುತ್ತಿತ್ತು ಎನ್ನುತ್ತವೆ ದಾಖಲೆಗಳು.  ರೋಮ್ ಚಕ್ರವರ್ತಿ ಕ್ಲಾಡಿಯಸ್‍ನ ಕಾಲದ ಅಂತಹ ಒಬ್ಬ ವ್ಯಾಲೆಂಟೈನ್ ಇದ್ದ. ಕ್ಲಾಡಿಯಸ್, ಮದುವೆಯಾಗದ, ಮಕ್ಕಳು ಮರಿಗಳಿಲ್ಲದ ಗಂಡಸರನ್ನು ಸೈನ್ಯಕ್ಕೆ ತೆಗೆದುಕೊಂಡರೆ ಬಲಶಾಲಿ ಸೈನ್ಯ ಕಟ್ಟಬಹುದೆಂಬ ನಂಬಿಕೆ ಇಟ್ಟುಕೊಂಡಿದ್ದವನು. ಆದ್ದರಿಂದಲೇ ಶಕ್ತಿಶಾಲಿ ಯುವಕರು ಮದುವೆ ಮಾಡಿಕೊಳ್ಳಬಾರದೆಂಬ ಕಾನೂನನ್ನೂ ಮಾಡಿಬಿಟ್ಟಿದ್ದ.

ಆದರೆ ಪ್ರೀತಿ  ಕೇಳಬೇಕಲ್ಲ! ಸೈನ್ಯಕ್ಕೆ ಸೇರಲಿದ್ದ ಯುವಕರು ತಾವು ಪ್ರೀತಿಸಿದವರೊಡನೆ ಮದುವೆಯಾಗಲು ಈ ವ್ಯಾಲೆಂಟೈನ್ ಹೆಸರಿನ ಪಾದ್ರಿಯಲ್ಲಿಗೆ ಬರುತ್ತಿದ್ದರು. ಆತ ರಹಸ್ಯವಾಗಿ ಪೌರೋಹಿತ್ಯವಹಿಸಿ ಅವರ ಮದುವೆಗಳನ್ನು ನಡೆಸಿಕೊಡುತ್ತಿದ್ದ. ಇದು ಕಾಲಕ್ರಮೇಣ ಕ್ಲಾಡಿಯಸ್ ಗೆ ಗೊತ್ತಾಗಿ ಆತ ವ್ಯಾಲೆಂಟೈನ್ ಗೆ ಮರಣೆದಂಡನೆ ವಿಧಿಸಿದ. ಪ್ರೇಮಿಗಳಿಗೆ ಬೆಲೆಕೊಟ್ಟ ಈ ಪಾದ್ರಿಯ ನೆನಪಿಗೆ ಫೆಬ್ರವರಿ 14ರಂದು ವ್ಯಾಲೆಂಟೈನ್ ದಿನದ ಆಚರಣೆ ಶುರುವಾಯಿತು ಎನ್ನಲಾಗುತ್ತದೆ.

1 Comment

Leave a Reply