ನಡೆಯುತ್ತಲೂ ನಿಂತವರು ಮತ್ತು ನಿಂತಿದ್ದೂ ನಡೆಯುವವರು

meditateಮ್ಮೆ ಹೀಗಾಗುತ್ತೆ;
ಬುದ್ಧ ಅಂಗುಲೀಮಾಲನ್ನ ನೋಡೋಕೆ ಹೋಗ್ತಾನೆ. 
ಅಂಗುಲೀಮಾಲ ನಿಂತಲ್ಲೇ ಕಣ್ಣು ಕೀಲಿಸಿ ನೋಡ್ತಾನೆ; ಎಲಾಎಲಾ! ನನ್ನಂಥ ನನ್ನ ಹತ್ತಿರ ಬರ್ತಿರುವ ಇಂವ ಯಾರಪ್ಪಾ!? 
‘ಏಯ್! ನಿಲ್ಲು ಅಲ್ಲೇ…’ ಅವನ ಅಬ್ಬರ.
ಬುದ್ಧನಿಗೆ ನಗು. 
‘ನಾನು ನಿಂತು ಯಾವುದೋ ಕಾಲವಾಗಿದೆ… ನಡೀತಾ ಇರೋನು ನೀನು!’

ಅಂಗುಲೀಮಾಲನಿಗೀಗ ಖಾತ್ರಿ. ‘ತಲೆ ನೆಟ್ಟಗಿರುವ ಯಾವನೂ ಇತ್ತ ಬರಲಾರ. ಇವನ ಮಾತು ಕೇಳಿದರೆ ಇಂವ ಹುಚ್ಚ ಅನ್ನೋದು ನಿಜ!’

ಬುದ್ಧ ನಡೀತಲೇ ಇದ್ದ. ನಡೆದು ನಡೆದು ಹತ್ತಿರ ಬಂದ.
ಬುದ್ಧನ ಹೊರಗು ನಡೀತಿತ್ತು. ತಾನು ಹುಟ್ಟು ಸಾವಿನ ನಡುವೆ ನಿಂತವನು ಅನ್ನೋ ಅರಿವು ಬುದ್ಧನ ಒಳಗಿಗಿತ್ತು.
ಅಂಗುಲೀಮಾಲನ ದೇಹ ನಿಂತಲ್ಲೇ ಇತ್ತು. ಅವನ ಒಳಗಿಗೆ ಸಾವಿರ ಕಾಲಿನ ಚಲನೆ, ಸಂಚಲನೆ!

ವಿಷಯ ಇಷ್ಟೇ…
ನಡೆಯುತ್ತಲೂ ನಿಲ್ಲಬಲ್ಲವನು ಬುದ್ಧ, ನಿಂತಿದ್ದೂ ನಡೆಯುತ್ತಲೇ ಇರುವವನು ಅಂಗುಲೀಮಾಲ.

Leave a Reply