ಪ್ರತಿಫಲ

ಸಂತ ಊರ ದಾರಿಯಲ್ಲಿ ನಡೆಯುತ್ತಿದ್ದ. 

ದಾರಿಯ ಮಧ್ಯೆ ಸಿಕ್ಕಿದ ಅಪರಿಚಿತ ವ್ಯಕ್ತಿಯೊಬ್ಬ ಸಂತನನ್ನು ನಿಲ್ಲಿಸಿ, ‘ ನಿನ್ನೆ ಪಕ್ಕದ ಊರಿನಲ್ಲಿ ನಿನ್ನ ಧರ್ಮದವನೊಬ್ಬ ನನ್ನ ಧರ್ಮದವನಿಗೆ ಹಲ್ಲೆ ನಡೆಸಿದ್ದಾನೆ’ ಎನ್ನುತ್ತಾ ಸಂತನಿಗೆ ಹೊಡೆಯಲು ಕೈಯೆತ್ತಿದ. 

ಸಂತ ನಗುತ್ತಾ ಆ ವ್ಯಕ್ತಿಯ ಕೈಯಲ್ಲಿ ಎರಡು ಹಣ್ಣುಗಳನ್ನಿಟ್ಟು, ಹೇಳಿದ, ” ಅದೇ ಊರಿನಲ್ಲಿ ನಿನ್ನ ಧರ್ಮದವನೊಬ್ಬ ನನಗೆ ಊಟ ಹಾಕಿದ್ದ !” 

~ ಪುನೀತ್ ಅಪ್ಪು

Leave a Reply