ಸಾರ್ವಕಾಲಿಕ ಮೌಲ್ಯ ಸಾರಿದ ದಾರ್ಶನಿಕ ಕವಿ ಸರ್ವಜ್ಞ

“ಸರ್ವಜ್ಞ ನೆಂಬುವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ”

ಎಂದು ತನ್ನನ್ನು ಅತ್ಯಂತ ಸರಳ ಮತ್ತು ಸಮಂಜಸವಾಗಿ ಪರಿಚಯಿಸಿಕೊಂಡಿರುವ ದಾರ್ಶನಿಕ ಕವಿ ಸರ್ವಜ್ಞನ ಜನ್ಮದಿನ ಇಂದು.  ಹಲವು ಅಧ್ಯಯನಗಳ ಪ್ರಕಾರ ಈತನ ಕಾಲಮಾನ 14ರಿಂದ 16ನೇ ಶತಮಾನದ ನಡುವೆ ಎಂದು ಅಂದಾಜು ಮಾಡಲಾಗಿದೆ. ಹಾವೇರಿ ಜಿಲ್ಲೆಯ ಅಬಲೂರು ಸರ್ವಜ್ಞನ ಹುಟ್ಟೂರು ಎಂದು ಹೇಳಲಾಗುತ್ತದೆ.  ಕಾಲಮಾನದ ಹಾಗೆಯೇ ಸರ್ವಜ್ಞನ ಜೀವನವೂ ನಿಗೂಢ. ಈತನ ಕುರಿತು ಹಲವು ಕಥೆಗಳಿದ್ದು, ಅವುಗಳ ಅಧಿಕೃತತೆ ಈವರೆಗೆ ಖಚಿತವಾಗಿಲ್ಲ. ಆದ್ದರಿಂದ “ಅವನ ಜಾತಿ ಮಾನವ, ಅವನ ಮತ ದೇವ ಮತ, ಅವನ ಕಾಲ ಸರ್ವಕಾಲ” ಎಂದು ಸರ್ವಜ್ಞನ ಕುರಿತು ಬೇಂದ್ರೆ ಹೇಳಿದ ಮಾತನ್ನೇ ನೆಚ್ಚಿಕೊಂಡು ಆತನನ್ನು ದೇಶಕಾಲಗಳಾಚೆಗೆ ನೋಡುವುದು ಒಳ್ಳೆಯದು. 

ಸರ್ವಜ್ಞನ ತ್ರಿಪದಿಗಳು ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ, ಆಧ್ಯಾತ್ಮಿಕ ಜಗತ್ತಿಗೂ ಅತ್ಯಮೂಲ್ಯ ಕೊಡುಗೆಯಾಗಿವೆ. ಈ ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ. ಈತ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕನೂ ಹೌದು.

sarvajna 1
ಸರ್ವಜ್ಞನನ ತ್ರಿಪದಿಗಳು

Leave a Reply