ಶಿವೋsಹಮ್ ಸರಣಿ ~ 2 : ಚಿಂತನ ಮನನ ಧ್ಯಾನ ವಿಧಿ

photoವ್ಯಕ್ತ ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಎರಡು ಮಗ್ಗಲುಗಳಿರುತ್ತವೆ. ಆಂತರ್ಯ ಮತ್ತು ಬಾಹ್ಯ, ಸೂಕ್ಷ್ಮ ಮತ್ತು ಸ್ಥೂಲ. ಮನೋಬುದ್ಧಿ ಚಿತ್ತಾಹಂಕಾರಗಳು ಶರೀರದೊಳಗಿನ ಸೂಕ್ಷ್ಮ ಸಂಗತಿಗಳು. ಎಲ್ಲ ಬಗೆಯ ಮಾಹಿತಿ, ಜ್ಞಾನ ಹಾಗೂ ಅನುಭವಗಳ ಮೇಲೆ ಇವುಗಳ ಆಧಿಪತ್ಯ. ಮತ್ತು ಕಿವಿ, ನಾಲಗೆ, ಮೂಗು ಮತ್ತು ಕಣ್ಣುಗಳು – ಇವು ಶರೀರದ ಬಾಹ್ಯ ಅಥವಾ ಸ್ಥೂಲ ಸಂಗತಿಗಳು. ಇವುಗಳಿಂದ ಧ್ವನಿ, ಸ್ವಾದ, ಗಂಧ ಹಾಗೂ ದೃಶ್ಯಗಳನ್ನು ಗ್ರಹಿಸಬಹುದು. ಶಂಕರರು ಹೇಳುತ್ತಾರೆ, “ನಾನು ಈ ಎರಡೂ ಮಗ್ಗಲುಗಳಿಗೂ ಅತೀತನಾದವನು. ಮನೋಬುದ್ಧಿ ಚಿತ್ತಾಹಂಕಾರಗಳಿಗೆ ಅತೀತನಾಗಿರುವಂತೆಯೇ ಕಿವಿ, ನಾಲಗೆ, ಕಣ್ಣು, ಮೂಗುಗಳಿಗೂ ಅತೀತನಾದವನು” ಎಂದು. ~ Whosoever Ji

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ

ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣ ನೇತ್ರೇ….

ಅಂದರೆ – “ನಾನು ಕಿವಿಯೂ ಅಲ್ಲ, ನಾಲಗೆಯೂ ಅಲ್ಲ, ಮೂಗು ಕೂಡ ಅಲ್ಲ, ಕಣ್ಣುಗಳೂ ಅಲ್ಲ”. ಇಲ್ಲಿ ಶಂಕರರು ಮೊದಲು ಆಂತರ್ಯದ ಮಾತುಗಳನ್ನಾಡಿದರು, ಈಗ ಬಾಹ್ಯದ ಮಾತುಗಳನ್ನು ಆಡುತ್ತಿದ್ದಾರೆ. ಅಭಿವ್ಯಕ್ತಗೊಂಡ ಈ ಜಗತ್ತು ದ್ವೈತವನ್ನು ಪ್ರತಿನಿಧಿಸುತ್ತದೆ. ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣ ನೇತ್ರೇ…. ಅಂದರೆ- ನಾನು ಕಿವಿಯೂ ಅಲ್ಲ, ನಾಲಗೆಯೂ ಅಲ್ಲ, ಮೂಗು ಕೂಡ ಅಲ್ಲ, ಕಣ್ಣುಗಳೂ ಅಲ್ಲ.

ಈ ವ್ಯಕ್ತ ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಎರಡು ಮಗ್ಗಲುಗಳಿರುತ್ತವೆ. ಆಂತರ್ಯ ಮತ್ತು ಬಾಹ್ಯ, ಸೂಕ್ಷ್ಮ ಮತ್ತು ಸ್ಥೂಲ. ಮನೋಬುದ್ಧಿ ಚಿತ್ತಾಹಂಕಾರಗಳು ಶರೀರದೊಳಗಿನ ಸೂಕ್ಷ್ಮ ಸಂಗತಿಗಳು. ಎಲ್ಲ ಬಗೆಯ ಮಾಹಿತಿ, ಜ್ಞಾನ ಹಾಗೂ ಅನುಭವಗಳ ಮೇಲೆ ಇವುಗಳ ಆಧಿಪತ್ಯ. ಮತ್ತು ಕಿವಿ, ನಾಲಗೆ, ಮೂಗು ಮತ್ತು ಕಣ್ಣುಗಳು – ಇವು ಶರೀರದ ಬಾಹ್ಯ ಅಥವಾ ಸ್ಥೂಲ ಸಂಗತಿಗಳು. ಇವುಗಳಿಂದ ಧ್ವನಿ, ಸ್ವಾದ, ಗಂಧ ಹಾಗೂ ದೃಶ್ಯಗಳನ್ನು ಗ್ರಹಿಸಬಹುದು. ಶಂಕರರು ಹೇಳುತ್ತಾರೆ, “ನಾನು ಈ ಎರಡೂ ಮಗ್ಗಲುಗಳಿಗೂ ಅತೀತನಾದವನು. ಮನೋಬುದ್ಧಿ ಚಿತ್ತಾಹಂಕಾರಗಳಿಗೆ ಅತೀತನಾಗಿರುವಂತೆಯೇ ಕಿವಿ, ನಾಲಗೆ, ಕಣ್ಣು, ಮೂಗುಗಳಿಗೂ ಅತೀತನಾದವನು” ಎಂದು. 

ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ…… “ನಾನು ಆಕಾಶವೂ ಅಲ್ಲ, ಭೂಮಿಯೂ ಅಲ್ಲ, ಬೆಂಕಿಯಲ್ಲ, ಗಾಳಿಯೂ ಅಲ್ಲ”. ಈ ದೇಹದ ಹೊರಗೆ ಹರಡಿಕೊಂಡಿರುವ ಈ ಅನಂತ – ಅಸೀಮ ವಿಸ್ತಾರವೇನಿದೆ, ಯಾವುದನ್ನು ‘ಸೈಕೋ ಸೊಮ್ಯಾಟಿಕ್ ಎಪರೇಟಸ್’ ಎಂದು ಕರೀತೇವೋ ಆ ಮನೋದೈಹಿಕ ಉಪಕರಣದ ಮೂಲಕ ಅನುಭವ ಪಡೆಯಬಹುದೋ ಶಂಕರರು ಅದನ್ನು ಮನಸಿನಲ್ಲಿಟ್ಟುಕೊಂಡು ಹೇಳುತ್ತಿದ್ದಾರೆ – “ಈ ಮನೋದೈಹಿಕ ಉಪಕರಣದ ಮೂಲಕ ಯಾವುದೆಲ್ಲವನ್ನು ನೋಡಲು, ಅನುಭವಿಸಲು ಸಾಧ್ಯವಾಗುತ್ತದೆಯೋ ಅವುಗಳಲ್ಲಿ ಕೂಡ ನಾನಿಲ್ಲ. ನಾನು ಆಕಾಶವಲ್ಲ, ಭೂಮಿಯಲ್ಲ, ಬೆಂಕಿಯಲ್ಲ, ಗಾಳಿಯೂ ಅಲ್ಲ.”

ಶಂಕರರು ಹೀಗೇಕೆ ಹೇಳುತ್ತಿದ್ದಾರೆ? ಏಕೆಂದರೆ – ಯಾವುದನ್ನು ನಾನು ನೋಡಲು, ತಿಳಿಯಲು ಅಥವಾ ಅನುಭವಿಸಲು ಸಾಧ್ಯವಾಗುತ್ತದೆಯೋ ನಾನು ಅದು ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಯಾವುದು ನನ್ನ ನೋಟಕ್ಕೆ ನಿಲುಕುವುದೋ, ತಿಳಿವಿಗೆ ದಕ್ಕುವುದೋ, ಅನುಭವಿಸಲು ಸಾಧ್ಯವಾಗುತ್ತದೆಯೋ ಅದು ನಾನಲ್ಲದ ಮತ್ತೊಂದು ಆಗಿರುತ್ತದೆ. ನನ್ನಿಂದ ಭಿನ್ನವಾಗಿರುತ್ತದೆ. ಆ ಆಬ್ಜೆಕ್ಟ್… ಆ ದೃಶ್ಯವು ವಸ್ತುವಾಗಿರುತ್ತದೆ; ಮತ್ತು, ನಾನು… ನೋಡುವವನು… `ದ್ರಷ್ಟಾ’ ಎಂದು ಕರೆಯಲ್ಪಡುತ್ತೇನೆ; ತಿಳಿಯುವವನಾಗಿ `ಜ್ಞಾತಾ’ ಎನ್ನಿಸಿಕೊಳ್ಳುತ್ತೇನೆ; ಅನುಭವಿಸುವವನಾಗಿ `ಅನುಭೋಕ್ತ’ನಾಗುತ್ತೇನೆ. ಆದ್ದರಿಂದ ನಾನು `ಆಬ್ಜೆಕ್’ ಅಲ್ಲ, `ಸಬ್ಜೆಕ್ಟ್’ ಆಗಿರುತ್ತೇನೆ. ದೃಶ್ಯ – ವಸ್ತು ನಾನಾಗಿರುವುದಿಲ್ಲ. ಬದಲಿಗೆ ದ್ರಷ್ಟಾ ಆಗಿರುತ್ತೇನೆ. ಹೀಗೆ ದ್ರಷ್ಟಾ ಯಾವಾಗಲೂ ದೃಶ್ಯ – ವಸ್ತುವಿಗಿಂತ ಮೊದಲೇ ಇರುತ್ತಾನೆ. ಅದಕ್ಕಿಂತ ಭಿನ್ನವಾಗಿಯೂ ಅತೀತವಾಗಿಯೂ ಇರುತ್ತಾನೆ. 

ನೇತಿ ಮಾರ್ಗಾನುಯಾಯಿಗಳು ಎಲ್ಲ ವಿಷಯ ವಸ್ತುಗಳನ್ನು, ಆಬ್ಜೆಕ್ಟ್’ಗಳನ್ನು “ನೇತಿ… ನೇತಿ… ಇದೂ ಕೂಡ ನಾನಲ್ಲ, ನಾನು ಇದೂ ಆಗಿಲ್ಲ” – ಎನ್ನುತ್ತಲೇ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತ ಸಾಗುತ್ತಾರೆ. ಈ ಪ್ರಕ್ರಿಯೆಯು ಎಲ್ಲ ವಸ್ತುಗಳು, ಪ್ರತ್ಯೇಕತೆಗಳು ಕಳೆದು ‘ವಿಶುದ್ಧ ದ್ರಷ್ಟಾ’ ಒಬ್ಬನೇ ಉಳಿಯುವವರೆಗೆ ಮುಂದುವರೆಯುತ್ತದೆ. ಏಕೆಂದರೆ ಆತ್ಯಂತಿಕ ತಿಳಿಯಲು ಹೊರಟಿರುವುದೇ ಅದನ್ನು- ನಾನು ನನ್ನ ನೈಜತೆಯಲ್ಲಿ, ಸ್ವಯಮಿಕೆಯಲ್ಲಿ ಇದ್ದೇನೆಯೇ ಎನ್ನುವುದನ್ನು. ಯಾವಾಗ ತಿಳಿಯಲು, ಅನುಭವಿಸಲು ಏನು ಕೂಡ ಉಳಿದಿರುವುದಿಲ್ಲವೋ, ಅಂತ್ಯದಲ್ಲಿ ಯಾವುದು ತಾನೊಂದೇ ಆಗಿ ಉಳಿದುಕೊಂಡಿರುತ್ತದೆಯೋ, ಅದೇ ನನ್ನ ಪರಿಶುದ್ಧ ಅಸ್ತಿತ್ವ, ಅದೇ ನನ್ನ ನೈಜತೆ, ಅದೇ ನನ್ನ ಸ್ವಯಮಿಕೆ.

ಯಾವಾಗ ಶಂಕರರು ತಮ್ಮ ‘ಸ್ವಯ’ವನ್ನು ಅರಿತುಕೊಂಡರೋ ಆಗಲೇ ಅವರು ಘೋಷಿಸಿದ್ದು – ಚಿದಾನಂದರೂಪಶ್ಶಿವೋಹಮ್ ಶಿವೋಹಮ್…. “ನಾನು ಚಿದಾನಂದ ರೂಪಿಯಾದ ಶಿವನಾಗಿದ್ದೇನೆ – ಸತ್, ಚಿತ್, ಆನಂದ ರೂಪ ಸಾರ್ವಭೌಮನಾಗಿದ್ದೇನೆ” ಎಂದು.

ನ ಚ ಪ್ರಾಣ ಸಂಜ್ಞೋ ನ ವೈ ಪಂಚ ವಾಯುಃ ನ ವಾ ಸಪ್ತಧಾತುರ್ನ ಪಂಚಕೋಶಾಃ.. ಇದರರ್ಥ – “ನಾನು ಪ್ರಾಣ ವಾಯುವಲ್ಲ, ಪಂಚ ಪ್ರಾಣಗಳಲ್ಲ, ಶರೀರದ ಸಪ್ತ ಧಾತುಗಳು ನಾನಲ್ಲ, ಪಂಚ ಕೋಶಗಳೂ ಅಲ್ಲ. ಜೀವದ ಶಕ್ತಿಯಾದ ಪ್ರಾಣ ವಾಯುವೂ ನಾನಲ್ಲ. ಹಾಗೆಯೇ ಶರೀರದಲ್ಲಿ ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುವ ಪ್ರಾಣದ ಪಂಚ ಪ್ರಕಾರಗಳಾದ ಪ್ರಾಣಾಪಾನ ಸಮಾನ ಉದಾನ ವ್ಯಾನಗಳೂ ಅಲ್ಲ.”

ಅನ್ನ ನೀರುಗಳನ್ನು ಸೇವಿಸುವ ಶರೀರವು ಅವನ್ನು- ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಹಾಗೂ ಶುಕ್ರಗಳೆಂಬ ಸಪ್ತಧಾತುಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಶಂಕರರು ತಾವು ಈ ಯಾವುವೂ ಕೂಡ ಅಲ್ಲವೆಂದು ಹೇಳುತ್ತಾರೆ. ನಾವು ಅನ್ನಾಹಾರಗಳಿಂದ ಸುಸ್ಥಿತಿಯಲ್ಲಿರುವ ಈ ಭೌತಿಕ ಶರೀರ ಮಾತ್ರರಾಗಿಲ್ಲ. ಈ ಶರೀರದ ಹಿಂದೆ ಇನ್ನೂ ನಾಲ್ಕು ಶರೀರಗಳಿವೆ. ಪ್ರಾಣಮಯ ಶರೀರ, ಮನೋಮಯ ಶರೀರ, ವಿಜ್ಞಾನಮಯ ಶರೀರ ಮತ್ತು ಆನಂದಮಯ ಶರೀರ- ಇವನ್ನು ಅನ್ನಮಯ ಕೋಶ, ಪ್ರಾಣಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ ಎಂದೂ ಕರೆಯಲಾಗುತ್ತದೆ. ಶಂಕರರು ಹೇಳುತ್ತಾರೆ, ತಾವು ಈ ಪಂಚಕೋಶಗಳೂ ಅಲ್ಲವೆಂದು. ಗಮನಿಸಿ… ಒಂದೊಂದಾಗಿಯೇ ಅವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುತ್ತ ಸಾಗುತ್ತಿದ್ದಾರೆ. 

ನ ವಾಕ್ ಪಾಣಿಪಾದೌ ನ ಚೋಪಸ್ಥಪಾಯು: ….. ಶಂಕರರು ತಾವು ಮಾತು (ಸಂಭಾಷಣೆ), ಕೈ ಕಾಲು, ಜನನೇಂದ್ರಿಯ, ಮಲದ್ವಾರಗಳೂ ಅಲ್ಲವೆನ್ನುತ್ತಿದ್ದಾರೆ. ನಮ್ಮ ಗಂಟಲಲ್ಲಿ ಶಬ್ದ ಹೊರಡಿಸುವ ಧ್ವನಿ ಪೆಟ್ಟಿಗೆಯಿಂದ ಸಂಭಾಷಣೆ ಸಾಧ್ಯವಾಗುತ್ತದೆ.  ಶಂಕರರು ತಾವು ಅದೂ ಅಲ್ಲವೆಂದು ಹೇಳುತ್ತಾರೆ. ಜೊತೆಗೇ ಅವರು ಹೇಳುತ್ತಾರೆ, “ಕೈ ಕಾಲುಗಳು, ಜನನೇಂದ್ರಿಯ, ಮಲದ್ವಾರಗಳು ಸೇರಿದಂತೆ ಪಂಚ ಕರ್ಮೇಂದ್ರಿಯಗಳೂ ನಾನಲ್ಲ” ಎಂದು. 

(ಮುಂದುವರಿಯುವುವುದು….)

2 Comments

Leave a Reply