ಭಗ್ನಪ್ರೇಮಿಗೆ ವಾ ಐನ್ ಸಾಇಲ್ ಹೇಳಿದ್ದು….

Yadira stories

ರಾ-ಉಮ್ ಆಶ್ರಮದ ವಿದ್ಯಾರ್ಥಿಗಳು ಆಶ್ರಮದಲ್ಲಿದ್ದು ಕಲಿಯುವಂತೆಯೇ ಹೊರಗೆ ಓಡಾಡಿಯೂ ಕಲಿಯುತ್ತಿದ್ದರು. ಆಶ್ರಮದಿಂದ ಪೇಟೆಗೆ ಹೋಗುವುದು ಎಂದರೆ ಅದೂ ಕಲಿಕೆಯ ಭಾಗವೇ ಆಗಿತ್ತು. ಆಶ್ರಮದ ಹತ್ತಿರವೇ ಇದ್ದ ಪೇಟೆಯಲ್ಲಿ ರಾ-ಉಮ್ ಆಶ್ರಮದ ವಿದ್ಯಾರ್ಥಿಗಳಿಗೆ ವಿಶೇಷ ಮಹತ್ವವಿತ್ತು. ಈ ವಿದ್ಯಾರ್ಥಿಗಳಿಂದ ಅತ್ಯುತ್ತಮ ಆಧ್ಯಾತ್ಮಿಕ ಸಲಹೆಗಳು ದೊರೆಯುತ್ತವೆ ಎಂಬುದು ಸ್ಥಳೀಯರ ನಂಬಿಕೆಯಾಗಿತ್ತು.

ಒಂದು ದಿನ ಸಂತೆ ಬೀದಿಯ ಮರದಡಿಯಲ್ಲಿ ಖರೀದಿ ಮುಗಿಸಿ ಕುಳಿತಿದ್ದ ವಾ-ಐನ್-ಸಾಇಲ್ ಬಳಿಗೆ ಯುವಕನೊಬ್ಬ ಬಂದ.
‘ತಾವು ಮಹಾಯೋಗಿನಿಯ ಆಶ್ರಮವಾಸಿಯೇ…?’ ಎಂದು ಕೇಳಿದ.
ವಾ-ಐನ್ ತಲೆಯಲ್ಲಾಡಿಸಿ ಹೌದು ಎಂದು ಸೂಚಿಸಿದ.
ಆ ಯುವಕ ಹೇಳಿದ ‘ನಾನೊಬ್ಬಳು ಹುಡುಗಿಯನ್ನು ಪ್ರೀತಿಸಿದ್ದೆ. ಆದರೆ ಅವಳು ಬೇರೊಬ್ಬನನ್ನು ಮದುವೆಯಾದಳು. ನನಗಿನ್ನು ಈ ಜಗತ್ತು ಬೇಡವೆನಿಸಿದೆ…!’

ವಾ-ಐನ್ ತನ್ನ ಜೋಳಿಗೆಯನ್ನು ಹೆಗಲಿಗೇರಿಸುತ್ತಾ ಎದ್ದು ನಿಂತು ಹೇಳಿದ, ‘ಹುಳುವಿಗೆ ತನ್ನ ಜಗತ್ತು ಮುಗಿಯಿತು ಅನ್ನಿಸತೊಡಗಿದರೆ ಅದು ಚಿಟ್ಟೆಯಾಗುವ ಹೊತ್ತಾಯಿತು ಎಂದರ್ಥ!’

ಆ ಯುವಕ ಕುಣಿಯುತ್ತಾ ಹೊರಟ.

( ಮರುಭೂಮಿಯ ಮಹಾಯೋಗಿನಿ ರಾ-ಉಮ್ ಮತ್ತು ಶಿಷ್ಯ ವಾ-ಐನ್-ಸಾಇಲ್’ರ ಇತರ ಕಥೆಗಳನ್ನು ಇಲ್ಲಿ ಓದಿ:  https://aralimara.com/category/ಯಾದಿರಾ-ಕತೆಗಳು/ )

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.