ದೇವರನ್ನು ಒಲಿಸಿಕೊಳ್ಳುವುದು ಎಷ್ಟೊಂದು ಸುಲಭ! : ಬಸವ ತತ್ವ

b1

ಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನೇನೂ ಹಾಕಬೇಕಿಲ್ಲ. ಸಹಜವಾಗಿದ್ದರೆ ಸಾಕು. ಪ್ರಾಮಾಣಿಕವಾಗಿದ್ದರೆ ಸಾಕು. ಬಸವಣ್ಣನವರು ಇದನ್ನು ಬಹಳ ಸರಳವಾಗಿ ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ. 

ಕಳಬೇಡ – ಕಳ್ಳತನ ಮಾಡಬೇಡ; ಕೊಲಬೇಡ – ಕೊಲೆಯಂಥ ದುಷ್ಕೃತ್ಯಗಳನ್ನು ಮಾಡುವುದಿರಲಿ, ಚಿಂತಿಸಲೂಬೇಡ; ಹುಸಿಯ ನುಡಿಯಲು ಬೇಡ – ಸುಳ್ಳು ಹೇಳಬೇಡ; ಮುನಿಯಬೇಡ – ಕೋಪ ಬಹಳ ಕೆಟ್ಟದ್ದು, ಅದನ್ನು ಬಿಟ್ಟುಬಿಡು; ಅನ್ಯರಿಗೆ ಅಸಹ್ಯ ಪಡಬೇಡ – ಅಸಹಿಷ್ಣುವಾಗಬೇಡ, ಹೊಟಟೆಕಿಚ್ಚು ಮಾಡಬೇಡ; ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ – ನಿಮ್ಮ ಬಗ್ಗೆ ನೀವೇ ಜಂಭ ಕೊಚ್ಚಿಕೊಳ್ಳುವುದನ್ನಾಗಲೀ, ಇತರರನ್ನು ನಿಕೃಷ್ಟರೆಂದು ತೆಗಳಿ ಹಳಿಯುವುದಾಗಲೀ ಮಾಡಬೇಡ; ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ – ಒಳಹೊರಗಿನ ಶುದ್ಧಿಗಲೆಂದರೆ ಇವೇ ಆಗಿವೆ (ಸ್ನಾನಾಚಮನಗಳು ಮಾತ್ರವೇ ಶುದ್ಧಿಯಲ್ಲ). ಇಂಥಾ ಪರಿಶುದ್ಧ ಜನರಿಗೆ ಭಗವಂತನು ಒಲಿಯುತ್ತಾನೆ. 

ಈ ಮೇಲಿನವನ್ನು ಅನುಸರಿಸಲು ಆರಂಭಿಸಿ. ಕೃತಕವಾಗಿಯಾದರೂ ಸರಿ, ಶುರು ಮಾಡಿ. ಪರಿಣಾಮರೂಪಿ ಫಲವು ನಿಮ್ಮೊಳಗೆ ಶಾಂತಿಯಾಗಿ, ಸಂತಸವಾಗಿ ಹೊಮ್ಮುತ್ತದಲ್ಲ, ಅದನ್ನು ಗಮನಿಸಿ. ಆ ಶಾಂತಿಯೇ, ಆ ಸಂತಸವೇ ಭಗವಂತ. ಅವನೇ ಬಸವಣ್ಣನ ಕೂಡಲ ಸಂಗಮ ದೇವ ಮತ್ತು ನಮ್ಮನಮ್ಮ ಪಾಲಿಗೆ ನಮ್ಮನಮ್ಮ ಇಷ್ಟದೈವ. 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.