ಮೀನಿನ ಯೋಗ್ಯತೆಯನ್ನು ಮರಹತ್ತುವ ಪರೀಕ್ಷೆಯೊಡ್ಡಿ ಅಳೆಯಲಾದೀತೇ?

ಕಳೆದ ಎರಡು ದಿನಗಳಿಂದ ಸುದ್ದಿ ಪತ್ರಿಕೆಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದ ಎರಡು ಬಗೆಯ ಸುದ್ದಿಗಳನ್ನು ನಾವು ನೋಡುತ್ತಿದ್ದೇವೆ. ಒಂದು, ಸೆಕೆಂಡ್ ಪಿಯು  ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪರಿಶ್ರಮ, ಸಾಧನೆ, ಅಂಕಪಟ್ಟಿ ಮತ್ತು ಭಾವಚಿತ್ರಗಳು; ಇನ್ನೊಂದು, ಅಂಕ ಕಡಿಮೆ ಬಂದಿತೆಂದು, ಫೇಲ್ ಆದೆನೆಂದು, ಮನೆಯಲ್ಲಿ ಫಲಿತಾಂಶ ಕಡಿಮೆ ಬಂದುದಕ್ಕೆ ಮೂದಲಿಸಿದರೆಂದು, ಬೈದರೆಂದು, ಉತ್ತಮ ಕಾಲೇಜ್’ನಲ್ಲಿ ಸೀಟ್ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ/ನಿಯರ ಸುದ್ದಿಗಳು. 

 

Genius2

ಶಿಕ್ಷಣ ಕಲಿಕೆಯ ಶಿಸ್ತುಬದ್ಧ ಕ್ರಮವಷ್ಟೇ. ಪರೀಕ್ಷೆ ಬರೆಯದೆಯೂ ನಾವು ಶಿಕ್ಷಣ ಪಡಿಯಬಹುದು, ಅರಿವನ್ನು ಹೊಂದಬಹುದು. ಯಾವುದೇ ವಿಷಯದ ಆಳವಾದ ಅಧ್ಯಯನ ನಡೆಸಬಹುದು. ಅಂಕಪಟ್ಟಿ ನಮ್ಮ ಕಲಿಕೆಯ ಶಿಸ್ತಿಗೊಂದು ಮಾನದಂಡವಷ್ಟೇ. ಆದರೆ ಬಹುತೇಕವಾಗಿ ಪೋಷಕರು ಇದನ್ನು ತಮ್ಮ ಮಕ್ಕಳ ಹಣೆಬರಹ ಎಂದೇ ಭಾವಿಸುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಮಕ್ಕಳ ಜೀವನವೇ ಮುಗಿದುಹೋಯಿತು ಅನ್ನುವ ಮಟ್ಟಕ್ಕೆ ಪ್ರತಿಕ್ರಿಯಿಸುತ್ತಾರೆ. ಪೋಷಕರ ಈ ವರ್ತನೆ ಮಕ್ಕಳ ಮೇಲೂ ಪ್ರಭಾವ ಬೀರಿ ಅವರು ಕೂಡಾ ಅದನ್ನೇ ನಂಬಿಕೊಳ್ಳತೊಡಗುತ್ತಾರೆ. ಅದರ ಪರಿಣಾಮವೇ ಖಿನ್ನತೆ ಮತ್ತು ಅದು ಮಿತಿಮೀರಿದರೆ ಆತ್ಮಹತ್ಯೆಯ ಯೋಚನೆ. 

ವಾಸ್ತವದಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ ಅದು ನಮ್ಮ ಮಿತಿ. ನಮಗೆ ಬೇರೆ ಜ್ಞಾನಗಳ ಕುರಿತು, ಸಾಧನೆಗಳ ಕುರಿತು ತಿಳಿವಳಿಕೆಯೇ ಇರುವುದಿಲ್ಲ. 

ಮಕ್ಕಳ ವಿಷಯದಲ್ಲೂ ಅಷ್ಟೇ. ಅಂಕ ಗಳಿಕೆಯೊಂದೇ ಸಾಧನೆ ಎಂಬ ನಮ್ಮ ಸೀಮಿತ ತಿಳಿವಳಿಕೆಯೇ ಮಕ್ಕಳ ಯೋಗ್ಯತೆ – ಅಯೋಗ್ಯತೆಗಳನ್ನು ಅಳೆಯುವ ಸಾಧನವಾಗಿ ಬಳಸುತ್ತೇವೆ. ಬೇರೆ ಕ್ಷೇತ್ರಗಳ ಪರಿಚಯವೇ ನಮಗೆ ಇಲ್ಲದೆ ಇರುವುದರಿಂದ ಹೀಗೆ ವರ್ತಿಸುತ್ತೇವೆ. 

ಮೊದಲು ಪೋಷಕರು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಬೇಕು. ಸುಖಸವಲತ್ತುಗಳನ್ನು ಹೊಂದಲು ಬೇಕಾದಷ್ಟು ದುಡಿಯುವುದೇ ಬದುಕು ಎನ್ನುವ ಸಂಕುಚಿತತೆಯಿಂದ ಹೊರಗೆ ಬರಬೇಕು. ಆಗ ಮಕ್ಕಳು ಹಾಗೂ ಪೋಷಕರಿಬ್ಬರಲ್ಲೂ ಸಮಾಧಾನ ನೆಲೆಸುವುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s