ಗೆಳೆತನ ನೋಯಿಸುವುದಿಲ್ಲ, ನೋಯಲು ಬಿಡುವುದೂ ಇಲ್ಲ : ಸಾಮವೇದ

ಸೃಷ್ಟಿಯಲ್ಲಿ ಸಾಧ್ಯವಿರುವ ಯಾವುದೇ ಸಂಬಂಧವನ್ನು ಯಾವುದಾದರೂ ಮತ್ತೊಂದು ಸಂಬಂಧಕ್ಕೆ ಹೋಲಿಸಿ ‘ಅದರಂತೆ ಇರಬೇಕು’ ಅನ್ನುವುದಾದರೆ, ಅದು ‘ಗೆಳೆತನಕ್ಕೆ’ ಮಾತ್ರ. ಇದರಿಂದಲೇ ನಮಗೆ ಅದರ ಮಹತ್ವ ಎಷ್ಟೆಂಬುದು ಅರ್ಥವಾಗುತ್ತದೆ. 

saama2

ಯಾವುದೇ ಸಂಬಂಧದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮೈತ್ರಿ ಇರಬೇಕಾಗುತ್ತದೆ, ಮೈತ್ರಿ ಇಲ್ಲದ ಸಂಬಂಧ ಅರ್ಥಹೀನವೂ ವ್ಯರ್ಥವೂ ಆಗುತ್ತದೆ ಎನ್ನುವ ಮಾತು ವೇದಕಾಲದಿಂದಲೂ ಚಾಲ್ತಿಯಲ್ಲಿದೆ. ಗೆಳೆತನವೊಂದು ಅತ್ಯುನ್ನತ ಸಂಬಂಧ. ಇದು ಯಾವುದೇ ಲಾಭದ, ಅನಿವಾರ್ಯದ ಅಥವಾ ಜವಾಬ್ದಾರಿಯ ಭಾರವನ್ನು ಹೊತ್ತುಕೊಂಡಿರುವುದಿಲ್ಲ. ಆದರೆ ಗೆಳೆಯರು ಯಾವ ನಿಯಮವಾಗಲೀ ನಿರೀಕ್ಷೆಯಾಗಲೀ ಇಲ್ಲದೆ ಇದ್ದರೂ ಪರಸ್ಪರ ಹೆಗಲಾಗುತ್ತಾರೆ, ಅಗತ್ಯವಿದ್ದಾಗಲೆಲ್ಲ ಜೊತೆಯಾಗುತ್ತಾರೆ. 

ವೇದೋಪನಿಷತ್ತುಗಳು ಈ ‘ಮೈತ್ರಿ’ ಅಥವಾ ‘ಗೆಳೆತನ’ಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಹಾಗೆಂದೇ ಅವು “ಗಂಡ ಹೆಂಡತಿ ಪರಸ್ಪರ ಗೆಳೆಯರಂತೆ ಇರಬೇಕು” ಎಂದು ಸೂಚಿಸುತ್ತವೆ. ತಂದೆ – ಮಕ್ಕಳು ಕೂಡಾ ಗೆಳೆಯರಂತಿರಬೇಕು ಎಂದೂ ಹೇಳುತ್ತವೆ. ಅಷ್ಟೇ ಏಕೆ, ಭಕ್ತ ಮತ್ತು ಭಗವಂತನ ನಡುವೆ ಕೂಡಾ ಸಖ್ಯ ಸಾಧ್ಯ ಎನ್ನಲಾಗಿದ್ದು, ಭಗವಂತನನ್ನು ೊಲಿಸಿಕೊಳ್ಳುವ ನವವಿಧ ಭಕ್ತಿಯಲ್ಲಿ ಗೆಳೆತನ ‘ಸಖ್ಯ ಭಕ್ತಿ’ಗೂ ಸ್ಥಾನ ನೀಡಲಾಗಿದೆ. 

ಸೃಷ್ಟಿಯಲ್ಲಿ ಸಾಧ್ಯವಿರುವ ಯಾವುದೇ ಸಂಬಂಧವನ್ನು ಯಾವುದಾದರೂ ಮತ್ತೊಂದು ಸಂಬಂಧಕ್ಕೆ ಹೋಲಿಸಿ ‘ಅದರಂತೆ ಇರಬೇಕು’ ಅನ್ನುವುದಾದರೆ, ಅದು ‘ಗೆಳೆತನಕ್ಕೆ’ ಮಾತ್ರ. ಇದರಿಂದಲೇ ನಮಗೆ ಅದರ ಮಹತ್ವ ಎಷ್ಟೆಂಬುದು ಅರ್ಥವಾಗುತ್ತದೆ. 

ಸಾಮವೇದ ಕೂಡಾ ಗೆಳೆತನದ ಬಗ್ಗೆ ಹೇಳಿದ್ದು, ಗೆಳೆಯರ ಹೊಣೆಗಾರಿಕೆಯನ್ನು ಅದು ಸ್ಪಷ್ಟಪಡಿಸುತ್ತದೆ. “ಗೆಳೆಯರು ಪರಸ್ಪರರನ್ನು ನೋಯಿಸುವುದಿಲ್ಲ; ಪರಸ್ಪರರರು ನೊಂದಿದ್ದರೆ ಸಹಿಸುವುದೂ ಇಲ್ಲ” ಎಂದು ಅದು ಹೇಳುತ್ತದೆ. ಗೆಳೆಯರನ್ನು ನೋಯಿಸದೆ ಇರುವುದು ಮಾತ್ರವಲ್ಲ, ಗೆಳೆಯರು ನೊಂದಿದ್ದರೆ ಅವರನ್ನು ಸಮಾಧಾನಪಡಿಸಿ ಸಾಂತ್ವನ ನೀಡುವುದು ಕೂಡಾ ಗೆಳೆತನದ ಕರ್ತವ್ಯ ಎಂದು ಅದು ಸೂಚಿಸುತ್ತದೆ. 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s