ಮಹಾ ಮೌನಿ ಗುರು ಮತ್ತು ಮಾತುಗಾರ ಸನ್ಯಾಸಿ : ಝೆನ್ ಕಥೆ

ಚೀನಾ ದೇಶದಲ್ಲಿ ಒಬ್ಬ ಝೆನ್ ಗುರುವಿದ್ದ. ಅವನು ಮಿತಭಾಷಿ, ಮಹಾಮೌನಿ. ಮಾತೇ ಆಡದೇ ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದ.
ಎಷ್ಟೋ ಸಲ ಆತುರಗಾರ ಶಿಷ್ಯರು ಮಾತೇ ಆಡದ ಗುರುವಿನ ವರಸೆಗೆ ಬೇಸತ್ತು ಆಶ್ರಮ ತೊರೆಯುತ್ತಿದ್ದರು.

ಇಂಥಲ್ಲಿಗೆ ಒಬ್ಬ ಮಾತುಗಾರ ಸನ್ಯಾಸಿ ಬಂದ. ಬಂದು ಕೆಲವೇ ಗಂಟೆಗಳಲ್ಲಿ ಆಶ್ರಮದ ಶಿಷ್ಯರನ್ನೆಲ್ಲ ಗುಡ್ಡೆ ಹಾಕಿಕೊಂಡ. ಅವನ ಮಾತಿನ ಮೋಡಿಗೆ ಅವರೆಲ್ಲ ಬೆರಗಾದರು. ತಮ್ಮ ಗುರುವಿನ ಜೊತೆ ಹೋಲಿಕೆ ಮಾಡಿ ಇವನನ್ನು ಹೊಗಳಿದರು.

ಆ ಮಾತುಗಾರ ಗುರುವಿನ ಬಳಿ ಬಂದು “ನನ್ನ ಉಪನ್ಯಾಸ ನಿಮಗೆ ಹೇಗನ್ನಿಸಿತು?” ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಗುರು, “ವಾಂತಿ ಮಾಡಿದ್ದನ್ನು ಉಣ್ಣುವವರೇ ಅದರ ರುಚಿ ಹೇಳಬೇಕು?” ಎಂದು ಕೇಳಿ ಸುಮ್ಮನಾದ.

Leave a Reply