ಮಾಧವ ಲಾಲನ ಷಾ ಹುಸೇನ : ಸೂಫೀ ಸೌಹಾರ್ದದ ಕನ್ನಡಿ

ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಅವನು ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ ಆತನನ್ನು ‘ಪೀರ್’ (ಗುರು) ಎಂದು ಕರೆದರೆ ಅದನ್ನು ನಿರಾಕರಿಸುತ್ತಾ, ‘ಫಕೀರನನ್ನು ಪೀರನೆನ್ನುವೆ ಏಕೆ?’ ಎಂದು ಗದರುತ್ತಿದ್ದ! ~ ಅಲಾವಿಕಾ

s6
ಷಾ ಹುಸೇನ – ಮಾಧವ ಲಾಲರ ಸಮಾಧಿ | ಇಂಟರ್’ನೆಟ್ ಚಿತ್ರ

ಷಾ ಹುಸೇನ, ಲಾಹೋರಿನಲ್ಲಿ (ಈಗಿನ ಪಾಕಿಸ್ತಾನ) ಜೀವಿಸಿದ್ದ ಒಬ್ಬ ಸೂಫಿ ಸಂತಕವಿ. ಮುಘಲ್ ದೊರೆ ಜಹಾಂಗೀರನ ಅವಧಿಯಲ್ಲಿ ಷಾ ಹುಸೇನ ಜೀವಿಸಿದ್ದ. ಬಹಳ ಜನಪ್ರಿಯನೂ ಆಗಿದ್ದ ಈತನ ಶಿಷ್ಯತ್ವ ಬಯಸಿ ದೂರದೂರದಿಂದ ಜನರು ಬರುತ್ತಿದ್ದರು. ಅವರಿಗೆಲ್ಲ ಹುಸೇನ,’ತಲೆ ಬೋಳಿಸಿಕೊಂಡು ನನ್ನೊಡನೆ ಮದ್ಯ ಕುಡಿಯಲು ಬಾ’ ಎಂದು ಹೇಳಿಬಿಡುತ್ತಿದ್ದ! ಆತನ ಈ ಕರಾರನ್ನು ಯಾರು ನಡೆಸುತ್ತಿದ್ದರೋ ಅವರನ್ನು ಮಾತ್ರ ತನ್ನ ಶಿಷ್ಯರನ್ನಾಗಿ ಸ್ವೀಕರಿಸುತ್ತಿದ್ದ.

ಒಮ್ಮೆ ಹುಸೇನನ ಬಳಿ ಶಾಗಿರ್ದನಾಗಲು ಒಬ್ಬ ಮುಲ್ಲಾ ಬಂದ. ಆದರೆ ಆತನನ್ನು ಬಳಿ ಬಿಟ್ಟುಕೊಳ್ಳದ ಹುಸೇನ, ‘ನಿನಗೆ ಬೋಧಿಸಬಹುದಾದದ್ದು ನನ್ನಲ್ಲಿ ಏನೂ ಇಲ್ಲ. ಸುಮ್ಮನೆ ನನ್ನ ಹಿರಿಮೆ ಹಾಳುಗೆಡವಬೇಡ ನಡಿ!’ ಎಂದುಬಿಟ್ಟ.

ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಆತನ ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ ಆತನನ್ನು ‘ಪೀರ್’ (ಗುರು) ಎಂದು ಕರೆದರೆ ಅದನ್ನು ನಿರಾಕರಿಸುತ್ತಾ, ‘ಫಕೀರನನ್ನು ಪೀರನೆನ್ನುವೆ ಏಕೆ?’ ಎಂದು ಗದರುತ್ತಿದ್ದ!

ಮಾಧವ ಲಾಲ ಎಂಬ ಬ್ರಾಹ್ಮಣರ ಯುವಕ ಇವನ ಆಪ್ತ ಶಿಷ್ಯನಾಗುತ್ತಾನೆ. ಅಂತರಂಗದ ಗೆಳೆಯನೂ ಆಗುತ್ತಾನೆ. ಇವರದ್ದು ಎಂಥಾ ಗೆಳೆತನವೆಂದರೆ, ತನ್ನ ಕಫೀಗಳಲ್ಲಿ ಗೆಳೆಯನನ್ನು ಉಲ್ಲೇಖಿಸಿ, ತನ್ನೊಂದಿಗೆ ಸದಾ ಸ್ಮರಿಸಲ್ಪಡುವಂತೆ ಮಾಡಿದ್ದಾನೆ ಷಾ ಹುಸೇನ. ಈತ ತಾನು ತೀರಿಕೊಂಡಮೇಲೆ ಅವನ ಸಮಾಧಿಯ ಪಕ್ಕದಲ್ಲೇ ದಫನ್ ಮಾಡಬೇಕೆಂದು ತಾಕೀತು ಮಾಡಿದ್ದ. ಅಂತೆಯೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಾಗ್’ಬಾನ್ ಪುರದಲ್ಲಿ ಇವರಿಬ್ಬರ ಸಮಾಧಿ ಮಾಡಲಾಗಿದ್ದು, ಇಂದಿಗೂ ಶ್ರದ್ಧಾವಂತರು ಪೂಜಿಸುವ ತಾಣವಾಗಿದೆ. ಇಲ್ಲಿ ಷಾ ಹುಸೇನನ ಜೊತೆ ಮಾಧವ ಲಾಲನಿಗೂ ಪೂಜೆ ನಡೆಯುತ್ತದೆ. ಹುಸೇನ – ಮಾಧವ ಲಾಲರ ಗೆಳೆತನ ಸೂಫೀಯತೆಗೊಂದು ನಿದರ್ಶನ. ಸೌಹಾರ್ದದ ಉನ್ನತ ಮಾದರಿಗಳಲ್ಲೊಂದು.

ಗೆಳೆಯ ‘ಮಾಧವಲಾಲ’ (ಮಾಧೋ)ನ ಉಲ್ಲೇಖವಿರುವ ಷಾ ಹುಸೇನನ ಒಂದು ಪದ್ಯ ಇಲ್ಲಿದೆ:

ನನ್ನ ಮಾನ ಹರಾಜಾಯಿತು ಮಾಧೋ!
ಜನ ನನ್ನ ನೋವನ್ನು
ನಶೆ ಅನ್ನುತ್ತಿದ್ದಾರೆ…

ಕಣ್ಣೀರನ್ನು ಮದಿರೆ ಅನ್ನುತ್ತಿದ್ದಾರೆ ಮಾಧೋ!
ನಾನು ಕುಡುಕನೆಂದು
ದೂರು ತಂದಿದ್ದಾರೆ!!

ಮತಿಗೆಟ್ಟು ಅಲೆಮಾರಿಯಾದವನ
ಹುಡುಕಿ ತಂದರು ಮಾಧೋ!
ಈಗ ಮುಖ ತಿರುಗಿಸಿ ನಿಂದಿಸುತಿದ್ದಾರೆ… 

ಮಾಧವಲಾಲ ಹುಸೇನನ ಪಾಲಿಗೆ
ಪ್ರಾರ್ಥನೆಯೊಂದೇ ಈಗ;
ಜನರ ಜಾತ್ರೆಯಲಿ ಕಳೆದೋಗಿರುವೆ,
ಕೈ ಹಿಡಿದು ನಡೆಸು; ಬಾ, ಬೇಗ!

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.