ಮೌನ ಎಲ್ಲಿಗೆ ಕರೆದೊಯ್ಯುತ್ತದೆ? ಧ್ಯಾನ ಎಲ್ಲಿಗೆ ಮುಟ್ಟಿಸುತ್ತದೆ? ~ ಒಂದು ಝೆನ್ ಸಂಭಾಷಣೆ

“ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?” ಎಂದು ರಾಜ ಕೇಳಿದ ಪ್ರಶ್ನೆಗೆ ಲಾವೋ ತ್ಸು ಸೂಚಿಸಿದ ಪರಿಹಾರವೇನು ಗೊತ್ತೆ?

ಒಂದು ದಿನ ಪ್ರಾಂತದ ದೊರೆ ತನ್ನ ಯಾತ್ರಾ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ, ಲಾವೋ ತ್ಸು ನ ಆಶ್ರಮಕ್ಕೆ ಬಂದ.
ಲಾವೋ ತ್ಸು ನನ್ನು ಭೇಟಿ ಮಾಡಿ ಅವನಿಗೆ ತನ್ನ ವಂದನೆ ಸಲ್ಲಿಸಿ ಅವನಿಂದ ಜ್ಞಾನಮಾರ್ಗದ ಬಗ್ಗೆ ತಿಳಿದುಕೊಳ್ಳುವ ಆಸೆ ರಾಜನಿಗೆ.

“ರಾಜ್ಯವನ್ನು ನೋಡಿಕೊಳ್ಳುವಲ್ಲಿ ನನ್ನ ಪೂರ್ತಿ ಸಮಯ ಹೋಗಿಬಿಡುತ್ತದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ…. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?” ರಾಜ, ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ.

“ಆಗಬಹುದು ರಾಜ. ಒಂದು ಶಬ್ದ ಸಾಕು.” 
“ಹೌದಾ? ಯಾವುದು ಆ ಶಬ್ದ?”
“ಮೌನ”
“ಮೌನ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ?”
“ಧ್ಯಾನ”
“ಮತ್ತೆ ಧ್ಯಾನ ನಮ್ಮನ್ನು ಎಲ್ಲಿ ಮುಟ್ಟಿಸುತ್ತದೆ?”
“ಮೌನ”

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply