ಯೇನ ಕೇನ ಪ್ರಕಾರೇಣ… : ಬೆಳಗಿನ ಹೊಳಹು

ಘಟಂ ಭಿಂದ್ಯಾತ್ ಪಟಂ ಛಿಂದ್ಯಾತ್ ಕುರ್ಯಾದ್ವಾ ಗಾರ್ಧಭಸ್ವನಂ|
ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವೇತ್ ||

ಅರ್ಥ : ಗಡಿಗೆಯನ್ನಾದರೂ ಒಡೆಯಬೇಕು. ಬಟ್ಟೆಯನ್ನಾದರೂ ಹರಿಯಬೇಕು. ಕತ್ತೆಯಂತಾದರೂ ಕಿರುಚಬೇಕು. ಹೇಗಾದರೂ ಸರಿ… ಪ್ರಸಿದ್ಧಿಗೆ ಬರಬೇಕು. ಇದೇ ಗುರಿಯಾಗಬೇಕು.

ತಾತ್ಪರ್ಯ : “ಯೇನಕೇನ ಪ್ರಕಾರೇಣ” ಎಂಬುದು ಒಂದು ನುಡಿಗಟ್ಟಾಗಿ ನಮ್ಮ ನಡುವೆ ಚಾಲ್ತಿಯಲ್ಲಿದೆ ಅಲ್ಲವೆ? ಅದರ ಸಂಪೂರ್ಣ ಸುಭಾಷಿತ ಈ ಮೇಲಿನದು.
ಈ ಕಾಲದ ನಮಗೆ ಈ ಸುಭಾಷಿತದ ತಾತ್ಪರ್ಯವನ್ನು ಹೆಚ್ಚು ವಿವರಿಸಬೇಕಿಲ್ಲ. ರಾಜಕಾರಣಿಗಳು, ಭಾಷಣಕಾರರು, ಪ್ರಚಾರದ ಹುಚ್ಚಿನ ವಿವಿಧ ಕ್ಷೇತ್ರಗಳ ಜನರು, ಟಿವಿ ಪ್ಯನೆಲ್’ನಲ್ಲಿ ಕುಳಿತು ಚರ್ಚೆ ಮಾಡುವ ಬಹುತೇಕರು ನಮಗೆ ಈ ಶ್ಲೋಕವನ್ನು ಚೆನ್ನಾಗಿ ಅರ್ಥ ಮಾಡಿಸಿದ್ದಾರೆ.

ನಾವು ಏನು ಮಾಡಬಾರದು, ಹೇಗೆ ಇರಬಾರದು ಎಂಬುದನ್ನು ಈ ಸುಭಾಷಿತದಿಂದ ತಿಳಿದುಕೊಳ್ಳೋಣ. ಹಾಗೂ ನಮಗೆ ಈ ಸುಭಾಷಿತದ ಅರ್ಥವನ್ನು ಚೆನ್ನಾಗಿ ಮನವರಿಕೆ ಮಾಡಿಸುತ್ತಿರುವ ಜನರಿಗೆ ಆಭಾರಿಯೂ ಆಗಿರೋಣ, ಆಗದೇ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.