ಯಾರು ಯಾರಿಗೆ ಕನ್ನಡಿ…!? : ಅರಳಿಮರ POSTER

“ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ” ಅನ್ನುತ್ತದೆ ಸೂಫಿ ಚಿಂತನೆ.

mirror

ಧ್ಯಾತ್ಮ ಯಾನಿಯು ಭಗವಂತನನ್ನು ಅರಿಯಬೇಕೆಂದರೆ ತನ್ನ ಹೃದಯದೊಳಕ್ಕೇ ಅವನನ್ನು ಅರಸಬೇಕು. ಬೆಳಕನ್ನು ಪಡೆಯಬೇಕೆಂದರೆ ತನ್ನ ಹೃದಯದಾಳಕ್ಕೆ ಧುಮುಕಬೇಕು. ಏಕೆಂದರೆ ನಮ್ಮ ಹೃದಯ ಜಗತ್ತಿನ ಕನ್ನಡಿಯಾಗಿದೆ; ಮತ್ತು ಜಗತ್ತು ಭಗವಂತನ ಕನ್ನಡಿಯಾಗಿದೆ. ನಮ್ಮೊಳಗೆ ಹೊಕ್ಕು ಹುಡುಕಿದರೆ ನಾವು ಯಾವತ್ತೂ ನಂದದ ಬೆಳಕನ್ನು ಹೊಂದುತ್ತೇವೆ, ಭಗವಂತನನ್ನು ಪಡೆಯುತ್ತೇವೆ – ಇದು ಮೇಲಿನ ಸೂಫಿ ಚಿಂತನೆಯ ವಿಸ್ತೃತಾರ್ಥ. 

ಸೃಷ್ಟಿ ಮತ್ತು ಭಗವಂತ ಪರಸ್ಪರ ಎದುರುಬದುರಿಟ್ಟ ಕನ್ನಡಿಗಳಂತೆ. ಒಬ್ಬರೊಬ್ಬರ ಬಿಂಬ ಒಬ್ಬರೊಬ್ಬರೊಳಗೆ! ಇರುವುದು ಎರಡೇ ಆದರೂ ಅನಂತ ಪ್ರತಿಬಿಂಬಗಳು! ಹೀಗಿದೆ ಸೃಷ್ಟಿಯ ಜಡಚೇತನಗಳು ಮತ್ತು ಸೃಷ್ಟಿಕರ್ತನ ಸಂಬಂಧ.  

Leave a Reply