ಅರಣ್ಯ ನಾಶ ಮಾಡಬಾರದು : ಬೆಳಗಿನ ಹೊಳಹು

“ವನಾನಿ ನ ಪ್ರಜಹಿತಾನಿ”… ಅರ್ಥಾತ್, ಅರಣ್ಯ ನಾಶ ಮಾಡಬಾರದು – ಎನ್ನುತ್ತದೆ ಋಗ್ವೇದದ ಒಂದು ಮಂತ್ರ  ~ ಅಪ್ರಮೇಯ

anve

ನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಕಾಡನ್ನು ನಾಶಮಾಡುತ್ತಿದ್ದಾನೆ, ಮರಗಳನ್ನು ಕಡೆದು ಭೂಮಿಯನ್ನು ಬೆಟ್ಟ, ಗುಡ್ಡಗಳನ್ನು ಸತ್ವಹೀನವಾಗಿಸುತ್ತಿದ್ದಾನೆ. ಇದರ ಫಲವನ್ನು ನಾವು ಈಗಾಗಲೇ ಅನುಭವಿಸುತ್ತಿರುವುದನ್ನು ಕಾಣಬಹುದು. ಮನುಷ್ಯನು ಮಿಥ್ಯಾ ಅಭಿವೃದ್ಧಿಯ ಹೆಸರಿನಲ್ಲಿ, ದುರಾಸೆಯಿಂದ ಮಾಡುತ್ತಿರುವ ಪ್ರಕೃತಿ ನಾಶವು ಮನುಷ್ಯನಿಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಮಾರಕವಾಗಿದೆ. ಇದು ಮೂರ್ಖನು ತಾನು ಕೂತ ಕೊಂಬೆಯನ್ನೇ ಕತ್ತರಿಸುತ್ತಿರುವಂತಿದೆ.
ನಮ್ಮ ಪೂರ್ವಜರು ಪ್ರಕೃತಿಯನ್ನೇ ದೇವರೆಂದು ಆರಾಧಿಸಿ, ಅದಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದ್ದರು. ಈ ಮೂಲಕ ಪ್ರಕೃತಿ ಸಮತೋಲನವನ್ನು ಕಾಯ್ದುಕೊಂಡಿದ್ದರು. 
ಭೂಮಿ ಇನ್ನೂ ಪ್ರಕೃತಿ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಕಾಲದಲ್ಲಿಯೇ ಋಗ್ವೇದದ ಋಷಿಗಳು “ಅರಣ್ಯ ನಾಶ ಮಾಡಬಾರದು” ಎಂದು ತಿಳಿ ಹೇಳಿದ್ದರು. ಈ ತಿಳಿವು ಇಂದಿನ ನಮಗೆ ಹೆಚ್ಚು ಅವಶ್ಯಕವೂ ಅನಿವಾರ್ಯವೂ ಆಗಿದೆ. 

 

Leave a Reply