ಚುವಾನ್ ಟೆಂಗ್ ಲು, ಝೆನ್’ನಿಂದ ಕಲಿತಿದ್ದೇನು?

zenಚುವಾನ್ ಟೆಂಗ್ ಲು ಎಂಬ ಝೆನ್ ಗುರುವನ್ನು ಶಿಷ್ಯ ಕೇಳಿದ,
“ಗುರುವೇ, ಝೆನ್’ನಿಂದ ನೀವು ಕಲಿತಿದ್ದೇನು?”

ಗುರು ಉತ್ತರಿಸಿದ,
“ಮೂವತ್ತು ವರ್ಷಗಳ ಹಿಂದೆ, ನಾನು ಝೆನ್ ಕಲಿಯುವ ಮೊದಲು ಬೆಟ್ಟಗಳನ್ನು ಬೆಟ್ಟಗಳ ಹಾಗೂ ನದಿಗಳನ್ನು ನದಿಗಳ ಹಾಗೂ ನೋಡುತ್ತಿದ್ದೆ.
ಮೂವತ್ತು ವರ್ಷಗಳ ಕಾಲ ಝೆನ್ ಕಲಿತೆ. ಈ ಅವಧಿಯಲ್ಲಿ ನಾನು ಬೆಟ್ಟಗಳನ್ನು ಬೆಟ್ಟಗಳಲ್ಲ ಎಂದೂ ನದಿಗಳು ನದಿಗಳಲ್ಲ ಎಂದೂ ನೋಡಲು ಕಲಿತೆ.
ಮೂವತ್ತು ವರ್ಷಗಳ ನಂತರ; ಝೆನ್ ಅಭ್ಯಾಸ ಪೂರ್ಣಗೊಂಡ ಮೇಲೆ ನಾನೀಗ ಮತ್ತೊಮ್ಮೆ
ಬೆಟ್ಟಗಳನ್ನು ಬೆಟ್ಟಗಳಂತೆಯೂ, ನದಿಗಳನ್ನು ನದಿಗಳಂತೆಯೂ ನೋಡುತ್ತಿದ್ದೇನೆ. 

Leave a Reply