ಪ್ರೇಮ ಪಯಣದಲಿ ಜ್ಞಾನವಿದೆ, ಹೆಡ್ಡತನವೂ! ~ ಸೂಫಿ ಅತ್ತಾರ್ ನಿಶಾಪುರಿ ಪದ್ಯ

attar

ಮೂಲ: ಫರೀದುದ್ದೀನ್ ಅತ್ತಾರ್ (ಅತ್ತಾರ್ ನಿಶಾಪುರಿ) | ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಳೆದು ನನ್ನೊಳಗೆ,
ಮತ್ತೆ ಮೂಡಿದೆ,
ಎಲ್ಲೆಂದು ಅರಿವಿಲ್ಲ ನನಗೆ.

ಕಡಲಿಂದ ಸಿಡಿದು,
ಮರಳಿ ಕರಗಿದ
ಚಿಕ್ಕ ಹನಿ ನಾನು.

ಹಗಲಲ್ಲಿ ಹುಟ್ಟಿ ಬೆಳೆದೆ,
ಬಿಸಿಲಲ್ಲಿ ಕುಬ್ಜವಾದೆ,
ದಿನಾಂತದಲಿ ತೀರಿ ಹೋದೆ;
ಬರಿಯದೊಂದು ನೆರಳು ನಾನು.

ತಿಳಿದಿಲ್ಲ ನನಗೆ
ನಾನು ಬಂದ, ಇದ್ದ, ಹೊರಟುಹೋದ
ಯಾವುದೇ ಸುದ್ದಿ.
ನಡೆಯಿತೆಲ್ಲ, ಒಂದುಸಿರಿನ ಘಳಿಗೆಯಲಿ!

ಮುಂಬತ್ತಿಯ ಬೆಳಕಲ್ಲಿ
ಉತ್ತರಗಳ ಮರೆತಿರುವೆ;
ಕೇಳಬೇಡಿರೇನೂ ನನ್ನ,
ಚಿಟ್ಟೆಗಳ ಕುರಿತು.

ಪ್ರೇಮ ಪಯಣದಲಿ
ಜ್ಞಾನವಿದೆ,
ಹೆಡ್ಡತನವೂ!
ಒಂದೇ ಯಾನದಲಿ ನಾನು
ಜ್ಞಾನಿಯಾದೆ, ಹೆಡ್ಡ ಕೂಡಾ!!

ಕಣ್ಣಾಗಬೇಕು,
ಕಾಣಬಾರದು ಏನನ್ನೂ
ನೋಟ ನಿಲುಕುವುದು
ಕಣ್ಮುಚ್ಚಿದರೆ ಮಾತ್ರ.

ಉನ್ಮತ್ತ ಅಲೆದಾಟದಲಿ ದಣಿದಿರುವನು
ಅತ್ತಾರ್;
ಎರಡು ಲೋಕಗಳ ಮೀರಿ
ಬೆಳೆದ ಹೃದಯ ವೃಕ್ಷದಡಿ
ಪ್ರೇಮದ ಅಮಲೇರಿ ಕುಳಿತಿಹನು.

ಇಲ್ಲವೆಂದರೆ ಲೋಕ ಹುಡಿ ಬೀಳಲಿ
ಅವನ ತಲೆಯ ಮೇಲೆ!!

2 Comments

  1. Reblogged this on ಮೌನದೊಳಗಣ ಮಾತು and commented:
    ಪ್ರೇಮ ಪಯಣದಲಿ
    ಜ್ಞಾನವಿದೆ, 
    ಹೆಡ್ಡತನವೂ!
    ಒಂದೇ ಯಾನದಲಿ ನಾನು
    ಜ್ಞಾನಿಯಾದೆ, ಹೆಡ್ಡ ಕೂಡಾ

    ಫರೀದುದ್ದೀನ್ ಅತ್ತಾರ್ ಪದ್ಯ – ಚೇತನಾ ತೀರ್ಥಹಳ್ಳಿ ಅನುವಾದದಲ್ಲಿ

  2. ಅರಳೀಮರದ ಹಲವಾರು ಪದ್ಯ, ಬರಹಗಳಂತೆ ಇದು ಕೂಡ ಬೆಳಗಿಸಿತು ಎನ್ನೊಡಲನು. ಒಂದೇ ಯಾನದಲಿ ನಾನು ಜ್ಞಾನಿಯಾದೆ; ಹೆಡ್ಡ ಕೂಡ. Thank you verymuch ಚೇತನಾ.

Leave a Reply