ಸಮುರಾಯ್ ಸಕವಾನಿಗೆ ಜ್ಞಾನೋದಯವಾಗಿದ್ದು : Tea time story


ಒಮ್ಮೆ ಸಕವಾ ಕೊರೆಸ್ದಾ ಎಂಬ ಸಮುರಾಯ್, ಸಹಸ್ರರೂಪಗಳ ಬುದ್ಧದೇವತೆ ‘ಜಿಝೋ; ಮಂದಿರಕ್ಕೆ ಬಂದ. ಪ್ರಾರ್ಥನೆ ಸಲ್ಲಿಸಿದ ಮೇಲೆ ಅವನಲ್ಲಿ ಒಂದು ಪ್ರಶ್ನೆ ಮೂಡಿತು.
ದೇವಸ್ಥಾನದ ನಿರ್ವಾಹಕನನ್ನು ಕರೆದು ಕೇಳಿದ, “ಜಿಝೋನ ಸಹಸ್ರ ರೂಪಗಳಲ್ಲಿ ಯಾವುದು ಶ್ರೇಷ್ಠ?”
“ನನ್ನೆದುರು ನಿಂತ ಈ ಸಮುರಾಯ್’ನಲ್ಲಿ ಸಾವಿರ ಯೋಚನೆಗಳು ಹರಿದಾಡುತ್ತಿವೆ. ಅವುಗಳಲ್ಲಿ ಯಾವುದು ಶ್ರೇಷ್ಠ ?” ನಿರ್ವಾಹಕನ ಮರುಪ್ರಶ್ನೆ
ಸಮುರಾಯ್ ತಲೆಕೆರೆದುಕೊಂಡ. ನಿರ್ವಾಹಕ, “ಎಲ್ಲ ಸಹಸ್ರರೂಪಗಳಲ್ಲೂ ವ್ಯಕ್ತವಾಗುವ ಬುದ್ಧತ್ವವೇ ಶ್ರೇಷ್ಠ” ಎಂದು ವಿವರಿಸಿದ.
“ಬುದ್ಧತ್ವ ಎಂದರೇನು?” ಕೇಳಿದ ಸಮುರಾಯ್ ಸಕವಾ.
ನಿರ್ವಾಹಕ ತಕ್ಷಣವೇ ಸಕವಾನ ಮೂಗು ಹಿಂಡಿದ.
ಆ ಕೂಡಲೇ ಸಮುರಾಯ್ ಸಕವಾನಿಗೆ ಜ್ಞಾನೋದಯವಾಯಿತು.
(ಸಂಗ್ರಹ ಮತ್ತು ಅನುವಾದ: ಅಲಾವಿಕಾ)

Leave a Reply