ಶ್ರೀ ಯಂತ್ರದ ಒಂಬತ್ತು ಚಕ್ರಗಳು

shri-yantra

೧. ತೈಲೋಕ್ಯ ಮೋಹನ ಚಕ್ರ : ಮೊದಲನೆಯ ಭೂಪುರದ ಪಶ್ಚಿಮ ದಿಕ್ಕಿನಲ್ಲಿ ಸರ್ವಸಂಕ್ಷೋಭಿಣಿ , ಉತ್ತರದಲ್ಲಿ ವಿಧಾರಿಣಿ , ಪೂರ್ವದಲ್ಲಿ ಸರ್ವಾಕರ್ಷಿಣಿ , ದಕ್ಷಿಣದಲ್ಲಿ ಸರ್ವ ಶಂಕರಿ , ವಾಯುವ್ಯದಲ್ಲಿ ಸರ್ವೋನ್ಮಾದಿನಿ , ಈಶಾನ್ಯದಲ್ಲಿ ಸರ್ವ ಮಹಾಂಕುಶಾ , ಆಗ್ನೇಯದಲ್ಲಿ ಖೇಚರಿ , ನಿಋಋತಿಯಲ್ಲಿ ಸರ್ವಬೀಜಾ, ಅದೋಭಾಗದಲ್ಲಿ ಸರ್ವಯೋನಿ , ಊರ್ಧ್ವದಲ್ಲಿ ಸರ್ವೇಶ್ವರಿ ಎಂಬ ಮುದ್ರಾಶಕ್ತಿಗಳಿರುವರು.

೨. ಸರ್ವಾಶಾಪರಿಪೂರಕ ಚಕ್ರ : ಎರಡನೆಯ ಷೋಡಶದಳಪದ್ಮದಲ್ಲಿ ಪೂರ್ವದಿಂದ ಅಪ್ರದಕ್ಷಿಣವಾಗಿ – ಕಾಮಾಕರ್ಷಿಣಿ , ಸರ್ವಾಕರ್ಷಿಣೀ , ಬುದ್ದಾಕರ್ಷಿಣೀ, ಅಹಂಕಾರಾಕರ್ಷಿಣೀ, ಶಬ್ದಾಕರ್ಷಿಣೀ , ಸ್ಪರ್ಶಾಕರ್ಷಿಣೀ, ರೂಪಾಕರ್ಷಿಣೀ, ರಸಾಕರ್ಷಿಣೀ, ಗಂಧಾಕರ್ಷಿಣೀ, ಚಿತ್ತಾಕರ್ಷಿಣೀ, ಧೈರ್ಯಾಕರ್ಷೀಣೀ, ಸ್ಮೃತ್ಯಾಕರ್ಷಿಣೀ‌, ನಾಮಾಕರ್ಷಿಣೀ, ಬೀಜಾಕರ್ಷೀಣೀ, ಆತ್ಮಾಕರ್ಷಿಣೀ, ಅಮೃತಾಕರ್ಷಿಣೀ, ಶರೀರಾಕರ್ಷಿಣೀ ಎಂಬ ಗುಪ್ತ ಯೋಗಿನಿಯರಿರುವರು.

೩. ಸರ್ವ ಸಂಕ್ಷೋಭಣ ಚಕ್ರ : ಮೂರನೆಯ ಅಷ್ಟದಳಪದ್ಮದಲ್ಲಿ ಪೂರ್ವದಲ್ಲಿ ಅನಂಗಕುಸುಮಾ , ದಕ್ಷಿಣದಲ್ಲಿ ಅನಂಗಮೇಖಲಾ, ಪಶ್ಚಿಮದಲ್ಲಿ ಅನಂಗಮದನಾ , ಉತ್ತರದಲ್ಲಿ ಮದನಾತುರಾ , ಆಗ್ನೇಯದಲ್ಲಿ ಅನಂಗರೇಖಾ , ನಿಋಋತಿಯಲ್ಲಿ ಅನಂಗವೇಗಿನೀ, ವಾಯುವ್ಯದಲ್ಲಿ ಅನಂಗಾಂಕುಶಾ, ಈಶಾನ್ಯದಲ್ಲಿ ಅನಂಗಮಾಲಿನಿ ಎಂಬ ಸರ್ವಾಭಿಷ್ಟಪ್ರದ ಯೋಗಿನಿಯರಿರುವರು.

೪. ಸರ್ವಸೌಭಾಗ್ಯದಾಯಕ ಚಕ್ರ : ಚತುರ್ದಶಾರದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣೀ, ಸರ್ವಾಕರ್ಷಿಣೀ, ಸರ್ವಾಹ್ಲಾದಕಾರಿಣೀ, ಸರ್ವಸಂಮೋಹಿನೀ, ಸರ್ವಸ್ತಂಭನರೂಪಿಣಿ, ಸರ್ವಜೃಂಭಿಣೀ, ಸರ್ವಾಕರ್ಷಾಣಕಾರಿಣೀ, ಸರ್ವರಂಜಿನಿ , ಸರ್ವೊನ್ಮಾದಿನಿ, ಸರ್ವಾರ್ಥಸಾಧಿನೀ, ಸರ್ವಸಂಪತ್ತಿಪೂರಿಣೀ, ಸರ್ವಮಂತ್ರಮಯಿ, ಸರ್ವದ್ವಂದ್ವಮಯಿ, ಎಂಬ ಸಂಪ್ರದಾಯ ಯೋಗಿನಿಯರಿರುವರು.

೫. ಸರ್ವಾರ್ಥಸಾಧಕ ಚಕ್ರ : ಐದನೆಯ ಬಹಿರ್ದಶಾರದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ , ಸರ್ವಸಿದ್ದಿಪ್ರದಾ, ಸರ್ವಸಂಪತ್ಪ್ರದಾ , ಸರ್ವಪ್ರಿಯಂಕರೀ, ಸರ್ವಮಂಗಳಕಾರಿಣೀ , ಸರ್ವಕಾಮಪ್ರದಾ, ಸರ್ವದುಃಖವಿಮೋಚಿನೀ, ಸರ್ವಮೃತ್ಯುಪ್ರಶಮನೀ , ಸರ್ವವಿಘ್ನನಿವಾರಿಣೀ, ಸರ್ವಾಂಗಸುಂದರಿ, ಸರ್ವಸೌಭಾಗ್ಯದಾಯಿನೀ ಎಂಬ ಹತ್ತು ಕುಲೋತ್ತೀರ್ಣ ಯೋಗಿನಿಯರಿರುವರು.

೬. ಸರ್ವರಕ್ಷಾಕರ ಚಕ್ರ : ಆರನೆಯ ಅಂತರ್ದಶಾರದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ ಸರ್ವಜ್ಞಾ , ಸರ್ವಶಕ್ತಿಃ , ಸರ್ವೈಶ್ವರ್ಯಫಲಪ್ರದಾ , ಸರ್ವಜ್ಞಾನಮಯೀ, ಸರ್ವವ್ಯಾಧಿವಿನಾಶಿನಿ , ಸರ್ವಾಧಾರಸ್ವರೂಪಾ, ಸರ್ವಪಾಪಹರ , ಸರ್ವಾನಂದಮಯೀ, ಸರ್ವರಕ್ಷಾಸ್ವರೂಪಿಣಿ, ಸರ್ವೇಪ್ಸಿತಫಲಪ್ರದಾ , ಎಂಬ ಹತ್ತು ನಿಗರ್ಭ ಯೋಗಿನಿಯರಿರುವರು.

೭. ಸರ್ವರೋಗಹರ ಚಕ್ರ : ಏಳನೆಯ ಅಷ್ಟಕೋಣದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ ವಶಿನೀ , ಕಾಮೇಶೀ, ಮೋದಿನೀ, ವಿಮಲಾ, ಅರುಣಾ, ಜಯನೀ , ಸರ್ವೇಶೀ, ಕುಲಸುಂದರಿ ಎಂಬ ಎಂಟು ರಹಸ್ಯಯೋಗಿನಿಯರಿರುವರು.

೮. ಸರ್ವಸಿದ್ದಿಪ್ರದ ಚಕ್ರ : ಎಂಟನೆಯ ತ್ರಿಕೋಣದಲ್ಲಿ – ಮೂರು ಮೂಲೆಗಳಲ್ಲಿಯೂ ಮೂರು ಪೀಠಗಳಿರುವುವು. ಅದರಲ್ಲಿ ಪೂರ್ವದಿಕ್ಕಿನ ಕಾಮರೂಪವೆಂಬ ಪೀಠದಲ್ಲಿ ವಜ್ರೇಶ್ವರಿಯೂ, ವಾಮದಲ್ಲಿರುವ ಜಾಲಂಧರ ಪೀಠದಲ್ಲಿ ಭಗಮಾಲಿನಿಯೂ ಇರುವರು.

೯. ಸರ್ವಾನಂದಮಯ ಚಕ್ರ : ತ್ರಿಕೋಣಮಧ್ಯದಲ್ಲಿರುವ ಮಹಾಬಿಂದುವೆಂಬ ಮಹಾಪೀಠದ ಮಧ್ಯದಲ್ಲಿ ಏಕಕಾಲದಲ್ಲಿ ಉದಿಸಿದ ಸಾವಿರ ಸೂರ್ಯಪ್ರಕಾಶವುಳ್ಳ ವಿಮಾನಾಕಾರವಾದ ಮಂಚವು ಕಾಣಿಸುವುದು. ಆ ಮಂಚಕ್ಕೆ ಬ್ರಹ್ಮನು ಈಶಾನ್ಯ ದಿಕ್ಕಿನ ಕಾಲಾಗಿಯೂ , ವಿಷ್ಣುವು ಅಗ್ನಿ ದಿಕ್ಕಿನ ಕಾಲಾಗಿಯೂ , ರುದ್ರನು ನೈಋತ್ಯ ದಿಕ್ಕಿನ ಕಾಲಾಗಿಯೂ , ಈಶ್ವರನು ವಾಯುವ್ಯ ದಿಕ್ಕಿನ ಕಾಲಾಗಿಯೂ , ಸದಾಶಿವನು ಮಧ್ಯೆಫಲಕವಾಗಿಯೂ ಇರುವರು. ಆ ಮಂಚದ ಮಧ್ಯದಲ್ಲಿ ಸರ್ವಕಾಮೇಶ್ವರಿ ಸಚ್ಚಿದಾನಂದರೂಪಿಣೀ ಸರ್ವಾನುಗ್ರಹಶಾಲಿನೀ ಶಿವಾಂಕನಿಲಯಾಶಿವಾಭಿನ್ನಾ ಶ್ರೀಚಕ್ರನಗರಸಾಮ್ರಾಜ್ಞಿಯೂ ಆದ ಶ್ರೀಮಹಾತ್ರಿಪುರಸುಂದರಿಯು ಸುಖವಾಗಿ ವಿರಾಜಿಸುತ್ತಿರುವಳು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.