ಭ್ರಷ್ಟರಿಗೆ ಮುಕ್ತಿಯಿಲ್ಲ : ಮೈತ್ರೇಯಿ ಉಪನಿಷತ್

ದ್ರವ್ಯಾರ್ಥಮ್ ಅನ್ನವಸ್ತ್ರಾರ್ಥಮ್ ಯಃ ಪ್ರತಿಷ್ಠಾರ್ಥಮ್ ಏವ ವಾ | ಸಂನ್ಯಸೇತ್ ಉಭಯಭ್ರಷ್ಟಃ ಸಃ ಮುಕ್ತಿ ನ ಆಪ್ತುಮ್ ಅರ್ಹತಿ || ಮೈತ್ರೇಯಿ ಉಪನಿಷತ್ | 20 ||

ಅರ್ಥ: ಯಾರು ಧನ, ಅನ್ನ, ವಸ್ತ್ರ ಅಥವಾ ಪ್ರಸಿದ್ಧಿಗಾಗಿ ಸಂನ್ಯಾಸವನ್ನು ಹೊಂದುತ್ತಾನೋ , ಅವನು ಉಭಯಭ್ರಷ್ಠನಾಗಿ ಮುಕ್ತಿಯನ್ನು ಹೊಂದುವುದಿಲ್ಲ

aprameya

ತಾತ್ಪರ್ಯ : ಬ್ರಹ್ಮವಾದಿನಿ ಮೈತ್ರೇಯಿ ಮಾತೆಯ ಶ್ರುತಿವಾಕ್ಯ ಇಂದಿಗೂ ಪ್ರಸ್ತುತವಾಗಿದೆ. ಸಂನ್ಯಾಸ ಒಂದು ವ್ಯಾಪಾರವಾಗಿಬಿಟ್ಟಿದೆ. ಕಳ್ಳರು, ಸುಳ್ಳರು, ಮೋಸ,ವಂಚನೆ,ದ್ರೋಹ ಗಳನ್ನೇ ಪುರುಷಾರ್ಥವನ್ನಾಗಿಸಿಕೊಂಡವರು ಸಂನ್ಯಾಸಿಯ ವೇಷಧರಿಸಿದ್ದಾರೆ. ಇದು ಸಮಾಜಕ್ಕೆ ಅತ್ಯಂತ ಅಪಾಯಕಾರಿ.

ಜಾತಿಗೊಂದು ಮಠ, ಮತಕ್ಕೊಬ್ಬ ಗುರು ಹುಟ್ಟಿಕೊಳ್ಳುತ್ತಿದ್ದಾರೆ.
ಸಮಾಜದಲ್ಲಿ ಭೇದಗಳನ್ನು, ಅಸಮಾನತೆಯನ್ನು ಸೃಷ್ಟಿಸಿ ಜಾತಿ,ಮತ,ಪಂಥಗಳ ನಡುವಿನ ವೈಷಮ್ಯವನ್ನು ಹೆಚ್ಚಿಸುತ್ತಿದ್ದಾರೆ.

(ಸಂಗ್ರಹ ಮತ್ತು ತಾತ್ಪರ್ಯ : ಅಪ್ರಮೇಯ )

2 Comments

  1. ಸರ್, ಮೈತ್ರೇಯಿ ಉಪನಿಷತ್ ಸರಣಿಯನ್ನು ಮುಂದುವರೆಸಲು ಸಾಧ್ಯವೇ? ಅಥವಾ ಯಾವುದೇ ಉಪನಿಷತ್. ಧನ್ಯವಾದಗಳು 🙏🙏🙏

Leave a Reply