ಸಮಸ್ಯೆ ಮತ್ತು ಪರಿಹಾರ : ಶಾಂತಿದೇವನ ನಿಶ್ಚಿಂತೆ ಸೂತ್ರ

“ಸಮಸ್ಯೆಗೆ ಪರಿಹಾರವಿದೆಯೇ? ಚಿಂತೆ ಬಿಡಿ. ಸಮಸ್ಯೆಗೆ ಪರಿಹಾರವಿಲ್ಲವೆ? ಚಿಂತೆ ಬಿಡಿ!” ಅನ್ನುತ್ತಾನೆ ಶಾಂತಿ ದೇವ.

ನಾವೆಷ್ಟು ತಲೆಕೆಳಗು ಮಾಡಿ ನಿಂತರೂ ವಿಷಯ ಇರುವುದಿಷ್ಟೇ. ಪರಿಹಾರವಿದ್ದರೆ, ಅದನ್ನು ಹುಡುಕಿ, ಪ್ರಯತ್ನಿಸಿ ಮತ್ತು ಪ್ರಯೋಗಿಸಿ. ಪರಿಹಾರವಿಲ್ಲವಾದರೆ ಸುಮ್ಮನಿರಿ. ಎರಡೂ ಸಂದರ್ಭಗಳಲ್ಲೂ ಚಿಂತೆಗೇನು ಕೆಲಸ? ಅದು ನಿಮ್ಮ ಮನಸ್ಸನ್ನು ಕುಗ್ಗಿಸಿ ಜೀವನೋತ್ಸಾಹವನ್ನೆ ನುಂಗಿನೊಣೆಯುತ್ತದೆ.

ಆದ್ದರಿಂದ, ಅನವಶ್ಯಕವಾದ, ನಿಷ್ಪ್ರಯೋಜಕವಾದ, ಮಾರಕವಾದ ಚಿಂತೆಯನ್ನು ದೂರವಿಡಿ. ಪ್ರಯತ್ನದಿಂದ ಸಿದ್ಧಿಸದೆ ಇರುವುದು ಯಾವುದೂ ಇಲ್ಲ. ಹಾಗೆಯೇ ಅರಿವಿನ ಮುಂದೆ ಯಾವ ಸಮಸ್ಯೆಯೂ ನಿಲ್ಲುವುದಿಲ್ಲ!

ಆದ್ದರಿಂದ; ಶಾಂತಿದೇವನ ಸೂತ್ರವನ್ನು ಮನದಟ್ಟು ಮಾಡಿಕೊಳ್ಳಿ, ಮತ್ತು ಚಿಂತೆ ಬಿಡಿ!

shanti

Leave a Reply