ಅಷ್ಟಾವಕ್ರ ಗೀತಾ : ಈವರೆಗಿನ ಸಂಚಿಕೆಗಳು

ಈವರೆಗೆ ಅಷ್ಟಾವಕ್ರ ಗೀತೆಯ 14 ಶ್ಲೋಕಗಳ ಅರ್ಥ ಮತ್ತು ತಾತ್ಪರ್ಯ ಪ್ರಕಟವಾಗಿದ್ದು, ಅವುಗಳ ಕೊಂಡಿಯನ್ನು ಒಟ್ಟಿಗೆ ನೀಡಲಾಗಿದೆ. ಬರುವ ದಿನಗಳಲ್ಲಿ ಅಷ್ಟಾವಕ್ರ ಗೀತೆಯ ಸರಣಿ ನಿರಂತರವಾಗಿ ಮುಂದುವರಿಯಲಿದೆ ~ ಸಾ.ಹಿರಣ್ಮಯಿ

ಒಂದು ನಡು ಮಧ್ಯಾಹ್ನ ಜನಕ ಮಹಾರಾಜ ಆಸ್ಥಾನದಲ್ಲಿ ಕುಳಿತಿದ್ದ. ಹಾಗೇ ನಿದ್ರೆಯ ಜೊಂಪು ಹತ್ತಿತು. ಆ ನಿದ್ರೆಯಲ್ಲಿ ಸಣ್ಣದೊಂದು ಕನಸು. ಆ ಕನಸಿನಲ್ಲಿ ಜನಕ ಮಹಾರಾಜ ಊಟಕ್ಕಾಗಿ ಯಾರ ಬಳಿಯೋ ಯಾಚಿಸುತ್ತಿದ್ದಾನೆ. ಆದರೆ ಅವರು ಕೈಯಾಡಿಸಿ ಹೊರಟುಹೋಗುತ್ತಿದ್ದಾರೆ. ಒಂದೆಡೆ ಹಸಿವು, ಮತ್ತೊಂದೆಡೆ ನಿರಾಕರಣೆಯ ಸಂಕಟ. ಈ ನೋವು ಕಾಡುತ್ತಲೇ ಜನಕ ರಾಜನಿಗೆ ಎಚ್ಚರವಾಗಿಬಿಡುತ್ತದೆ. 

ಈ ಕನಸು, ಅದರ ನೋವು ಜನಕ ರಾಜನನ್ನು ಕಾಡತೊಡಗುತ್ತದೆ. ಅದೇ ಸಮಯಕ್ಕೆ ಮಹಾ ಜ್ಞಾನಿ ಅಷ್ಟಾವಕ್ರ ಮುನಿ ಅಲ್ಲಿಗೆ ಬರುತ್ತಾನೆ. ತನ್ನ ಕನಸಿನ ಅರ್ಥ ತಿಳಿಸಲು ಈತನೇ ಸೂಕ್ತ ವ್ಯಕ್ತಿ ಎಂದು ಮನಗಂಡ ಜನಕ, ಅಷ್ಟಾವಕ್ರನ ಬಳಿ ತನ್ನ ಕನಸಿನ ಕುರಿತು ಚರ್ಚಿಸುತ್ತಾನೆ. ಆಗ ನಡೆಯುವ ಸಂವಾದವೇ ‘ಅಷ್ಟಾವಕ್ರ ಗೀತಾ’. ಇದು ಜ್ಞಾನ ಪ್ರಧಾನ ಸಂಭಾಷಣೆ. ಅದ್ವೈತ ಅನುಭವದ ಉತ್ತುಂಗ ಶಿಖರದ ದರ್ಶನ ಮಾಡಿಸುವಂಥದ್ದು. ವ್ಯಕ್ತಿಯ ಅಹಂಕಾರ ಕಳೆದು ಸತ್ಯ ದರ್ಶನ ಮಾಡಿಸುವಂಥದ್ದು.

ಈ ಗೀತೆಯ ಮೊದಲನೆ ಅಧ್ಯಾಯದ 14ನೇ ಶ್ಲೋಕಗಳವರೆಗೆ ಅರ್ಥ ಮತ್ತು ತಾತ್ಪರ್ಯ ಅರಳಿಮರದಲ್ಲಿ ಪ್ರಕಟವಾಗಿದ್ದು, ಅವುಗಳ ಕೊಂಡಿ ಇಲ್ಲಿದೆ. ಓದುಗರು ಈ ಸರಣಿಯನ್ನು ಮುಂದುವರಿಸುವಂತೆ ಆಗ್ರಹಪಡಿಸುತ್ತಿದ್ದಾರೆ. ಲೇಖಕರ ಸಮಯಾವಕಾಶ ಮಿತಿಯಿಂದಾಗಿ ಸರಣಿ ತುಂಡರಿಸಿತ್ತು. ನಾಳೆಯಿಂದ ಇದನ್ನು ಪುನಃ ಮುಂದುವರಿಸಲಾಗುವುದು. 

ಹಿಂದಿನ ಸಂಚಿಕೆಗಳಿಗಾಗಿ ಈ ಲಿಂಕ್’ಗಳನ್ನು ನೋಡಿ :

ಅಧ್ಯಾಯ 1, ಶ್ಲೋಕ 1,2 : https://aralimara.com/2019/01/04/ashtavakra/

ಅಧ್ಯಾಯ 1, ಶ್ಲೋಕ 3 : https://aralimara.com/2019/01/05/ashta/

ಅಧ್ಯಾಯ 1, ಶ್ಲೋಕ 4 : https://aralimara.com/2019/01/06/ashta-2/

ಅಧ್ಯಾಯ 1, ಶ್ಲೋಕ 5 : https://aralimara.com/2019/01/07/ashta-3/

ಅಧ್ಯಾಯ 1, ಶ್ಲೋಕ 6 : https://aralimara.com/2019/01/09/ashta-4/

ಅಧ್ಯಾಯ 1, ಶ್ಲೋಕ 7 : https://aralimara.com/2019/01/11/ashta-5/

ಅಧ್ಯಾಯ 1, ಶ್ಲೋಕ 8, 9 : https://aralimara.com/2019/01/16/ashta-6/

ಅಧ್ಯಾಯ 1, ಶ್ಲೋಕ 10, 11 : https://aralimara.com/2019/01/17/ashta-7/

ಅಧ್ಯಾಯ 1, ಶ್ಲೋಕ 12 : https://aralimara.com/2019/01/23/ashta-8/

ಅಧ್ಯಾಯ 1, ಶ್ಲೋಕ 13 : https://aralimara.com/2019/01/26/ashta-9/

ಅಧ್ಯಾಯ 1, ಶ್ಲೋಕ 14 : https://aralimara.com/2019/01/29/ashta-10/

ನಾಳೆಯಿಂದ ಅಷ್ಟಾವಕ್ರ ಗೀತಾ ನಿರಂತರವಾಗಿ ಪ್ರಕಟಿಸಲು ಪ್ರಯತ್ನಿಸುತ್ತೇವೆ. ಈ ಸರಣಿ ಹಾಗೂ ‘ಅರಳಿಮರ’ದ ಇತರ ಲೇಖನಗಳ ಕುರಿತು ನಿಮ್ಮ ಅನ್ನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ. 

ಧನ್ಯವಾದ. 

9 Comments

  1. While reading this i am loosing myself/Ego, Heart touching explanation. Thank you so much Aralimara and Hiranmayi, Great job….

  2. ಮೆಚ್ಚುಗೆ ಸೂಚಿಸಲು ಪದಗಳು ಸಿಗುತ್ತಿಲ್ಲ. ದಯವಿಟ್ಟು ಸಂಪೂರ್ಣ ಅಷ್ಟಾವಕ್ರ ಗೀತೆಯನ್ನು ಇದೇ ರೀತಿ ಪ್ರಕಟಿಸಿ. ಹಿರಣ್ಮಯಿ ಅವರಿಗೆ ನನ್ನ ಪ್ರಣಾಮಗಳು.

  3. ಅದ್ಭುತ, ಆರಿಯಾದ ವಿವರಣೆ. ದಯವಿಟ್ಟು ಮುಂದುವರೆಸಿ.

  4. ನಿಮ್ಮ ಈ ಪ್ರಯತ್ನಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು, ದಯವಿಟ್ಟು ಅಷ್ಟಾವಕ್ರ ಗೀತೆಯನ್ನು ಮುಂದುವರೆಸಿ.

Leave a Reply