ಸೋಮಾರಿಗಳಿಗೆ ಗೆಲುವಿಲ್ಲ ~ ಸಾಮವೇದ : ಬೆಳಗಿನ ಹೊಳಹು

<!–more–>

“ದೇವತೆಗಳು ಕಾರ್ಯೋತ್ಸುಕ್ತರಿಗೆ ಸಹಾಯ ಮಾಡಲು ಇಚ್ಛಿಸುತ್ತಾರೆ ಹೊರತು, ಸದಾ ನಿದ್ರೆಯಲ್ಲಿರುವಂತೆ ತೋರುವ ಆಲಸಿಗರಿಗೆ ಅಲ್ಲ” ಅನ್ನುತ್ತದೆ ಸಾಮವೇದ ~ ಸ.ಹಿರಣ್ಮಯಿ

ಇಚ್ಛನ್ತಿ ದೇವಾಃ ಸುನ್ವನ್ತಮ್ ನ ನಿದ್ರಾಯಸ್ಪೃಹ್ಯನ್ತಿ | ಯಾನ್ತಿ ಪ್ರಮಾದಮತಂದ್ರಾಃ ||ಸಾಮವೇದ 721||

“ದೇವತೆಗಳು ಕಾರ್ಯೋತ್ಸುಕ್ತರಿಗೆ ಸಹಾಯ ಮಾಡಲು ಇಚ್ಛಿಸುತ್ತಾರೆ ಹೊರತು, ಸದಾ ನಿದ್ರೆಯಲ್ಲಿರುವಂತೆ ತೋರುವ ಆಲಸಿಗರಿಗೆ ಅಲ್ಲ” ಅನ್ನುತ್ತದೆ ಸಾಮವೇದ.

ಸೋಮಾರಿತನ ಮತ್ತು ಉಡಾಫೆ ಪ್ರವೃತ್ತಿಯವರಿಗೆ ಯಾವ ಕೆಲಸದಲ್ಲೂ ಗೆಲುವಾಗುವುದಿಲ್ಲ. ಮನುಷ್ಯಮಾತ್ರದವರಿರಲಿ, ದೇವತೆಗಳೂ ಇಂಥವರ ಮೇಲೆ ದಯೆ ತೋರುವುದಿಲ್ಲ” ಅನ್ನುವುದು ಇದರ ಭಾವಾರ್ಥ.
ನುಷ್ಯ ಪ್ರಯತ್ನದಿಂದ ಸಾಧಿಸಲು ಸಾಧ್ಯವಾಗದೆ ಇರುವಂಥದ್ದು ಏನಿದೆ? ದೈವ ಬಲ, ಅದೃಷ್ಟ ಬಲಗಳೆಲ್ಲ ಇದ್ದರೂ ಮನುಷ್ಯ ತನ್ನ ಪ್ರಯತ್ನವನ್ನೂ ಜೊತೆಗೆ ಹಾಕದೆ ಹೋದರೆ ಅವನಿಗೆ ಗೆಲುವು ಸಿದ್ಧಿಸುವುದೇ? ಖಂಡಿತಾ ಇಲ್ಲ. ಸಾಮವೇದ ಹೇಳುತ್ತಿರುವುದೂ ಇದನ್ನೇ; “ಸೋಮಾರಿತನ ಮತ್ತು ಉಡಾಫೆ ಪ್ರವೃತ್ತಿಯವರಿಗೆ ಅದೃಷ್ಟವೂ ಒಲಿಯುವುದಿಲ್ಲ, ದೇವತೆಗಳೂ ಒಲಿಯುವುದಿಲ್ಲ” ಎಂದು.
ಏನಾದರೊಂದು ಗುರಿಯನ್ನು ಎದುರಿಟ್ಟುಕೊಂಡರೆ, ಆ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. ಸಂಪೂರ್ಣ ಸಂಲಗ್ನತೆಯಿಂದ ಪ್ರಯತ್ನ ನಡೆಸಬೇಕಾಗುತ್ತದೆ. ಸತತ ಅಭ್ಯಾಸ ಬೇಕಾಗುತ್ತದೆ. ಈ ಯಾವುದನ್ನೂ ಮಾಡದೆ, “ಹಣೆಬರಹ ಇದ್ದಂತೆ ಆಗುತ್ತದೆ” ಎಂದುಕೊಂಡು ಕುಳಿತರೆ ಯಾವ ಕೆಲಸವೂ ಸಾಗದು. ಇನ್ನು ಗೆಲುವು ದೂರದ ಮಾತು!

ನಾವು ಪ್ರಯತ್ನ ಹಾಕದೆ ಹೋದರೆ, ಅದೃಷ್ಟವೂ ನಮ್ಮ ಕೈಹಿಡಿಯುವುದಿಲ್ಲ. ಸೋಮಾರಿಗಳನ್ನು ಕಂಡರೆ ಅದೃಷ್ಟವೂ ಮಾರುದೂರ ಆಚೆಗೆ ನಿಲ್ಲುತ್ತದೆ. ಮನುಷ್ಯರಂತೂ ಸೋಮಾರಿಗಳನ್ನು ಓಲೈಸುವುದಿಲ್ಲ, ಸರಿಯೇ. ದೇವತೆಗೂ ಅಂಥವರ ಮೇಲೆ ಕರುಣೆ ತೋರುವುದಿಲ್ಲ ಅನ್ನುವುದು ಈ ಸಾಮವೇದ

ಶ್ಲೋಕದ ವಿಸ್ತೃತಾರ್ಥ.
ಏಕೆಂದರೆ ಎಲ್ಲ ಒಳಿತುಗಳಿಗೂ ಸಕಾರಾತ್ಮಕ ಶಕ್ತಿಗೂ ಚಟುವಟಿಕೆಯಿಂದಿರುವ, ಪ್ರಾಮಾಣಿಕ ಪ್ರಯತ್ನ ಹಾಕುವವರ ಬಗ್ಗೆ ಒಲವು ಇರುತ್ತದೆಯೇ ಹೊರತು, ಸೋಮಾರಿತನವನ್ನೇ ಹಾಸುಹೊದೆಯುವ ತಾಮಸಿಕ ಪ್ರವೃತ್ತಿಯವರ ಮೇಲಲ್ಲ.

ಆದ್ದರಿಂದ, ಅದೃಷ್ಟಕ್ಕಾಗಿಯೋ ಕರುಣೆಗಾಗಿಯೋ ಕಾಯುತ್ತ ಕೂರಬೇಡಿ. “ಹೇಗೋ ನಡೆಯುತ್ತದೆ” ಅನ್ನುವ ುಡಾಫೆ ಬಿಟ್ಟು, ಸೋಮಾರಿತನ ಕೊಡವಿಕೊಂಡು ಕೆಲಸ ಶುರು ಮಾಡಿ. ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ. – ಇದು ಸಾಮವೇದ ಶ್ಲೋಕದ ಒಟ್ಟು ಬೋಧೆ.

1 Comment

Leave a Reply