ವಿವೇಕ ವಿಚಾರ : ವಿದ್ಯಾಭ್ಯಾಸದ ಮಹತ್ವ

vivi

ನರಿಗೆ ವಿದ್ಯಾಭ್ಯಾಸ ಅತ್ಯಗತ್ಯವಾಗಿ ಬೇಕು. ಈ ದಿನಗಳಲ್ಲಿ ಡೆಮಾಕ್ರಸಿಯ ಮಾತನಾಡುತ್ತಿರುವರು. ಡೆಮಾಕ್ರಸಿ ಎಂದರೆ ಜನರೆಲ್ಲ ಒಂದೇ ಸಮಾನವಾಗಿರುವ ವ್ಯವಸ್ಥೆ. ಯಾವುದೇ ವ್ಯಕ್ತಿ ತಾನು ಇತರರಿಗೆ ಸರಿಸಮಾನ ಎಂದು ತಿಳಿಯುವುದು ಹೇಗೆ? ಅವರ ಬುದ್ಧಿ ಚುರುಕಾಗಿರಬೇಕು, ಮೂಢನಂಬಿಕೆಗಳಿಂದ ಮುಕ್ತವಾಗಿರಬೇಕು. ತನ್ನ ಸತ್ಯವನ್ನು, ತನ್ನ ಶಕ್ತಿಯನ್ನು ಅರಿತಿರಬೇಕು. ಮತ್ತು ತನ್ನೊಳಗಿನ ಶಕ್ತಿಯನ್ನು ಹೊರಗಿನವರಾರೋ ಕೊಟ್ಟಿರುವುದಲ್ಲ, ಅದನ್ನು ತಾನೇ ಗಳಿಸಿರುವುದು ಎಂಬ ಅರಿವಿರಬೇಕು. ಈ ಅರಿವನ್ನು ಹೊಂದುವ ಕ್ಷಣವೇ ವ್ಯಕ್ತಿಯು ಸ್ವತಂತ್ರರಾಗುವರು. ಮತ್ತು ಈ ಸ್ವಾತಂತ್ರ್ಯ ಅವರಿಗೆ ಸಮಾನತೆಯ ಅರಿವನ್ನು ತಂದುಕೊಡುವುದು.

ನಾನು ಎಲ್ಲರಿಗೂ ಸರಿಸಮಾನವಾಗಿದ್ದೇನೆ, ಎಲ್ಲರೂ ನನಗೆ ಸರಿಸಮಾನವಾಗಿದ್ದಾರೆ ಎಂಬುದು ಸಮಾಜದೊಳಗಿನ ಪ್ರತಿ ವ್ಯಕ್ತಿಗೂ ಮನದಟ್ಟಾಗದ ಹೊರತು ಸಮಾನತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಸಮಾನತೆಯ ಅರಿವನ್ನು ಪಡೆದ ವ್ಯಕ್ತಿಯು ಯಾರ ಮೇಲೂ ತನ್ನ ಅಭಿಪ್ರಾಯಗಳನ್ನು ಹೇರಲುಹೋಗುವುದಿಲ್ಲ. ದಬ್ಬಾಳಿಕೆ ಮಾಡುವುದಿಲ್ಲ. ತಾರತಮ್ಯ ತೋರುವುದಿಲ್ಲ.

ಕೆಲವರು ಸುಮ್ಮನೆ ಸಮಾನತೆಯ ಮಾತನ್ನಾಡುತ್ತಾರೆ. ಆದರೆ ಅವರು ಅದನ್ನು ಆಚರಿಸುವುದು ಕಷ್ಟ. ಯಾವ ವ್ಯಕ್ತಿಯು “ತನಗಿಂತ ಕೀಳಾದವರು ಎಂದಾದರೂ ಯಾರಾದರೂ ಇದ್ದರು” ಎಂಬ ಭಾವನೆಯನ್ನು ತೊರೆಯುತ್ತಾರೋ ಅವರು ಮಾತ್ರ ಸಮಾನತೆಯ ಮಾತನ್ನಾಡಬಲ್ಲರು.

ಈ ಅರಿವು ಸಾಧ್ಯವಾಗುವುದು ವಿದ್ಯಾಭ್ಯಾಸದಿಂದ. ಜನಸಾಮಾನ್ಯರನ್ನು ವಿದ್ಯಾವಂತರನ್ನಾಗಿ ಮಾಡುವುದರಿಂದ ತಾರತಮ್ಯ ಭಾವನೆ ತೊಲಗುವುದು. ಆದರೆ ಆ ವಿದ್ಯಾಭ್ಯಾಸವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂಥ ವಿದ್ಯಾಭ್ಯಾಸವಾಗಿರಬೇಕು.

ಹಾಗೆಯೇ ಸ್ತ್ರೀಯರು ಸ್ವತಂತ್ರರಾಗದೆ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. “ಸಮಾಜದ ಪ್ರತಿಯೊಬ್ಬರೂ” ಎಂಉ ಹೇಳುವಾಗ ಅದರಲ್ಲಿ ಸ್ತ್ರೀಯರೂ ಸೇರುತ್ತಾರೆ. ಹೆಣ್ಣುಮಕ್ಕಳಿಗೆ ಸೂಕ್ತ ಶಿಕ್ಷಣ ಪಡೆಯುವ ಅವಕಾಶ ಇರಬೇಕು. ವಿದ್ಯಾಭ್ಯಾಸದಿಂದ ಅವರು ಸ್ವತಂತ್ರ ಆಲೋಚನೆ ನಡೆಸಬಲ್ಲರು. ಸ್ವತಂತ್ರವಾಗಿ ನಿರ್ಧಾರ ತಳೆಯಬಲ್ಲರು.

ವಾಸ್ತವದಲ್ಲಿ ಈ ಎಲ್ಲ ಜ್ಞಾನವೂ ನಮ್ಮೊಳಗೇ ಇದೆ. ಅದನ್ನು ಜಾಗೃತಗೊಳಿಸುವುದು ಅವಶ್ಯಕ. ವಿದ್ಯಾಭ್ಯಾಸವು ಈ ಜಾಗೃತಿಯನ್ನು ಉಂಟುಮಾಡುತ್ತದೆ. ಹಾಗೊಮ್ಮೆ ನಾವು ಪಾಠಶಾಲೆಗೆ ಹೋಗಿ ಕಲಿಕೆ ನಡೆಸಿಯೂ ನಮ್ಮಲ್ಲಿ ಜ್ಞಾನ ಜಾಗೃತಿಯಾಗದೆ ಹೋದರೆ, ನಾವು ಸ್ವತಂತ್ರಗೊಳ್ಳದೆ ಹೋದರೆ, ಸಮಾನತೆಯನ್ನು ಅರಿಯದೆ ಹೋದರೆ, ನಾವು ಸರಿಯಾದ ವಿದ್ಯಾಭ್ಯಾಸ ಪಡೆಯುತ್ತಿಲ್ಲ ಎಂದರ್ಥ. ಅಥವಾ, ಸರಿಯಾಗಿ ವಿದ್ಯಾಭ್ಯಾಸ ನಡೆಸುತ್ತಿಲ್ಲ ಎಂದರ್ಥ.

(ಆಧಾರ: ವಿವೇಕಾನಂದ ಕೃತಿಶ್ರೇಣಿ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.