ತನಗೆ ತಾನೇ ಹೆದರಿದ ನಸ್ರುದ್ದೀನ್! : Tea time story

ಅಮ್ಮ ಕೇಳಿಕೊಂಡಿದ್ದು ತನ್ನ ಮಗನನ್ನು ಹೆದರಿಸಲು. ಆದರೆ ಮುಲ್ಲಾ ನಸ್ರುದ್ದೀನ್ ಮಾಡಿದ್ದೇನು!? ~ ಒಂದು ನಸ್ರುದ್ದೀನ್ ಕಥೆ | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

Mullaಒಮ್ಮೆ, ಒಬ್ಬ ಹೆಣ್ಣುಮಗಳು ತನ್ನ ಮಗನೊಂದಿಗೆ ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಳು.
“ ಹಿರಿಯರೇ, ಈ ನನ್ನ ಮಗ ತುಂಬಾ ಹಟಮಾರಿಯಾಗುತ್ತಿದ್ದಾನೆ, ಒರಟನಾಗುತ್ತಿದಿದ್ದಾನೆ ಏನಾದರೂ ಮಾಡಿ ಅವನೊಳಗೆ ಸ್ವಲ್ಪ ಹೆದರಿಕೆಯನ್ನು ಹುಟ್ಟಿಸಿ, ಇಲ್ಲವಾದರೆ ಅವನು ನನ್ನ ಕೈಮೀರಿ ಹೋಗುತ್ತಾನೆ”

ಮುಲ್ಲಾ ಕ್ರೂರವಾಗಿ ಆ ಮಗನ ಕಣ್ಣಲ್ಲೊಮ್ಮೆ ದಿಟ್ಟಿಸಿ ನೋಡಿ ಅಮ್ಮನ ಮಾತು ಕೇಳುವಂತೆ ಆದೇಶ ಮಾಡಿದ. ಆಮೇಲೆ ತನ್ನ ಮುಖವನ್ನು ಭಯಂಕರವಾಗಿ ಕಿವಿಚಿ, ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ ಆ ಮಗನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ಅವನು ಎಷ್ಟು ಭೀಕರವಾಗಿ ಕಾಣಿಸುತ್ತಿದ್ದನೆಂದರೆ ತಾಯಿ ಹೆದರಿ ಮೂರ್ಛೆ ಹೋಗಿಬಿಟ್ಟಳು. ಮುಲ್ಲಾ ಕೋಣೆಯಿಂದ ಹೊರಗೆ ಓಡಿ ಹೋಗಿಬಿಟ್ಟ.

ತಾಯಿ ಮೂರ್ಛೆಯಿಂದ ಹೊರಗೆ ಬಂದ ಮೇಲೆ ನಸ್ರುದ್ದೀನ್ ನನ್ನು ತರಾಟೆಗೆ ತೆಗೆದುಕೊಂಡಳು, “ನಿಮಗೆ ನನ್ನ ಮಗನಲ್ಲಿ ಹೆದರಿಕೆ ತುಂಬುವಂತೆ ಕೇಳಿಕೊಂಡಿದ್ದೆ ನನ್ನಲ್ಲಲ್ಲ”

ತಾಯಿಯ ಮಾತಿಗೆ ಮುಲ್ಲಾ ಉತ್ತರಿಸತೊಡಗಿದ “ಅಮ್ಮಾ ಒಮ್ಮೆ ಭಯವನ್ನು ಹುಟ್ಟಿಸಿದ ಮೇಲೆ ಅದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಭಯಕ್ಕೆ ವಿಶೇಷ ಪ್ರೀತಿ ಪಾತ್ರರು ಯಾರೂ ಇಲ್ಲ. ನೀವು ನೋಡಲಿಲ್ಲ ಅನಿಸತ್ತೆ ನಾನೂ ಕೋಣೆ ಬಿಟ್ಟು ಓಡಿ ಹೊಗಿದ್ದೆ!”

Leave a Reply