ಕೃಷ್ಣನ ತಲೆನೋವಿಗೆ ಪಾದ ದೂಳಿನ ಮದ್ದು! : ಒಂದು ಪ್ರಕ್ಷೇಪ ಕಥೆ

ದೂತರು ವೃಂದಾವನಕ್ಕೆ ಓಡಿದರು. ಊರಹೊಲದಲ್ಲಿ ನಾಟಿ ಮಾಡುತ್ತಿದ್ದ ಗೋಪಿಕೆಯರಿಗೆ ವಿಷಯ ತಿಳಿಯಿತು. ಕೃಷ್ಣನಿಗೆ ತಲೆನೋವೆಂದು ಗಾಬರಿಯಾದರು. ಪ್ರೀತಿಸುವವರ ಪಾದದೂಳಿಯೇ ಮದ್ದು ಎಂದಾಗ ಸಮಾಧಾನಗೊಂಡರು…. ~ ಸಾ.ಹಿರಣ್ಮಯೀ

ಒಮ್ಮೆ ಹೀಗಾಯ್ತು:

ದ್ವಾರಕೆಯಲ್ಲಿ ಅಣ್ಣನೊಡನೆ, ಅಷ್ಟ ಮಹಿಷಿಯರೊಡನೆ ರಾಜ್ಯಭಾರ ಮಾಡಿಕೊಂಡಿದ್ದ ಕೃಷ್ಣನಿಗೆ ವಿಪರೀತ ತಲೆನೋವು ಉಂಟಾಯ್ತು. ಮನುಷ್ಯರೂ ಮುಗಿದು ದೇವ ವೈದ್ಯ ಧನ್ವಂತರಿಯನ್ನೆ ಕರೆಸಿದರೂ ತಲೆನೋವು ಕಳೆಯಲಿಲ್ಲ. ಆತಂಕಗೊಂಡು ಕೃಷ್ಣನನ್ನ ನೋಡಲು ಬಂದ ನಾರದರು ಒಂದು ಉಪಾಯ ಹೇಳಿದರು. ಹೇಳಿಕೇಳಿ ಕೃಷ್ಣ ಪ್ರೀತಿಸುವವರ ಕಣ್ಮಣಿ. ಯಾರು ಈತನ ಮೇಲೆ ಅತ್ಯುನ್ನತ ಪ್ರೇಮಭಾವ ಹೊಂದಿದ್ದಾರೋ ಅವರ ಪಾದದೂಳಿಯನ್ನು ಕೃಷ್ಣನ ತಲೆಗೆ ಲೇಪಿಸಿದರೆ ಆ ಕ್ಷಣವೇ ನೋವು ಉಪಶಮನವಾಗುತ್ತದೆ ಎಂದರು.

ಅರಮನೆಯಲ್ಲಿ ಕಸಿವಿಸಿ ಶುರುವಾಯ್ತು. ಪಟ್ಟದರಸಿ ರುಕ್ಮಿಣಿ, `ನಾನು ಸ್ವಾಮಿಯನ್ನು ಪ್ರೀತಿಸುವಷ್ಟು ಬಹುಶಃ ಯಾರೂ ಪ್ರೀತಿಸಲಾರರು. ಆದರೆ ನನ್ನ ಪಾದದೂಳಿಯನ್ನ ಅವರ ತಲೆಗೆ ಲೇಪಿಸುವುದೇ? ಸಾಧ್ಯವಿಲ್ಲ’ ಎಂದುಬಿಟ್ಟಳು. ಉಳಿದೆಲ್ಲ ರಾಣಿಯರ ಕಥೆಯೂ ಅದೇ. ಕುಟುಂಬದ ಇತರ ಸದಸ್ಯರ ಪ್ರತಿಕ್ರಿಯೆಯೂ ಹಾಗೆಯೇ ಹೊಮ್ಮಿತು.

ಲ್ಲರೂ ಕೃಷ್ಣನನ್ನು ಪ್ರೀತಿಸುವವರೇ. ಆದರೆ ತಾನು, ಅವನೆಂಬ ದ್ವೈತವೇ ಅಡ್ಡಿ! ತೀರಾ ಕಾಲದೂಳನ್ನು ಕನ್ಹಯ್ಯನ ಹಣೆಗೆ ತಾಕಿಸುವುದೇ?  

ತಲೆನೋವು ತಾಳಲಾರದೆ ಕೃಷ್ಣ ಕೊನೆಗೆ, `ವೃಂದಾವನಕ್ಕೆ ಹೋಗಿ ಗೋಪಿಕೆಯರನ್ನಾದರೂ ಕೇಳಿನೋಡಿ. ತಲೆನೋವು ಸಹಿಸಲಾಗುತ್ತಿಲ್ಲ’ ಎಂದ.

ದೂತರು ವೃಂದಾವನಕ್ಕೆ ಓಡಿದರು. ಊರಹೊಲದಲ್ಲಿ ನಾಟಿ ಮಾಡುತ್ತಿದ್ದ ಗೋಪಿಕೆಯರಿಗೆ ವಿಷಯ ತಿಳಿಯಿತು. ಕೃಷ್ಣನಿಗೆ ತಲೆನೋವೆಂದು ಗಾಬರಿಯಾದರು. ಪ್ರೀತಿಸುವವರ ಪಾದದೂಳಿಯೇ ಮದ್ದು ಎಂದಾಗ ಸಮಾಧಾನಗೊಂಡರು. “ಅಷ್ಟೇ ತಾನೆ?” ಅನ್ನುತ್ತಾ ರಾಸವೃತ್ತದಂತೆ ಸುತ್ತುವರಿದು ಗುಂಪಾಗಿ ನಿಂತು ಕಾಲು ಕೊಡವಿದರು. ಅಲ್ಲೊಂದು ಪಾದದೂಳಿಯ ಪುಟ್ಟಬೆಟ್ಟವೇ ಎದ್ದುನಿಂತಿತು! ಕೃಷ್ಣನ ತಲೆನೋವು ಮಾಯವಾಯಿತು.

ಕೃಷ್ಣಪ್ರೇಮದಲ್ಲಿ ನಾ ಮೇಲು, ತಾ ಮೇಲೆಂದು ಪೈಪೋಟಿ ಮಾಡುತ್ತಿದ್ದ ಅರಮನೆಯ ರಾಣಿಯರಿಗೆ ಪಾಠ ಕಲಿಸಲು ಕೃಷ್ಣ ಹೂಡಿದ ನಾಟಕ ಅದಾಗಿತ್ತು.

ರಾಣಿಯರು ಕೃಷ್ಣನ ಮೇಲೆ ಅತ್ಯುನ್ನತ ಪ್ರೇಮ ಇರಿಸಿಕೊಂಡಿದ್ದರೂ ಅವರಲ್ಲಿ ಆತ ಬೇರೆ, ತಾವು ಬೇರೆಯೆಂಬ ಭೇದಬುದ್ಧಿ ಇತ್ತು. ಗೋಪಿಕೆಯರು ಮಾತ್ರ ಕೃಷ್ಣಪ್ರೇಮದ ಅನುಭಾವದಲ್ಲಿ ತಾದಾತ್ಮ್ಯಗೊಂಡಿದ್ದರು. ಪರಮಪ್ರೇಮವನ್ನು ಪಡೆಯುವುದೆಂದರೆ, ಪ್ರಿಯತಮನನ್ನೇ ಬದುಕುವುದು ಎಂದಲ್ಲವೆ? ಗೋಪಿಕೆಯರು ಹಾಗೆ ಬದುಕಿದ್ದರು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.