ತಿಳಿಬೆಳಗು : ದಿನಕ್ಕೊಂದು ಸುಭಾಷಿತ #1

ಈ ಸುಭಾಷಿತವು ವಿದ್ಯೆಯ ಮಹಿಮೆಯನ್ನು ಸೂಚಿಸುತ್ತದೆ. ವಿದ್ಯಾವಂತರ ಮಾತು ಬೆಳಕಿನಂತೆ, ಜೇನಿನಂತೆ, ಹುರುಪು ತುಂಬುವಂತೆ ಇರುತ್ತದೆ. (ಆದ್ದರಿಂದ, ವಿದ್ಯಾವಂತರಾಗೋಣ, ವಿದ್ಯಾವಂತರ ಸಹವಾಸ ಮಾಡೋಣ) ಅನ್ನುವುದು ಈ ಸುಭಾಷಿತದ ಅರ್ಥ. ವಿದ್ಯೆ ಪಡೆದವರು ವಿವೇಕಿಗಳೂ ವಿನಯವಂತರೂ ವಿಚಾರಪೂರ್ಣರೂ ಆಗಿರುತ್ತಾರೆ. ಅಂಥವರಿಂದ ಹೊಮ್ಮುವ ಮಾತು ಸಹಜವಾಗಿಯೇ ಹೃನ್ಮನಗಳನ್ನು ಸೆಳೆಯುತ್ತವೆ.  ಆದ್ದರಿಂದ ವಿದ್ಯೆಯ ಅಧಿದೇವತೆ ಸರಸ್ವತಿಗೆ ಶರಣೆಂದಿದ್ದಾರೆ ಸುಭಾಷಿತಕಾರರು.

AM subhashita 1

Leave a Reply