ಮೃತ್ತಿಕಾ ಇತ್ಯೇವ ಸತ್ಯಮ್ … : ಇಂದಿನ ಸುಭಾಷಿತ

ಅಂತರಂಗವಷ್ಟೆ ಸತ್ಯ, ಬಾಹ್ಯದ ತೋರುಗಾಣಿಕೆಯಲ್ಲ…. | ಇಂದಿನ ಸುಭಾಷಿತ

ಮೂಲದಲ್ಲಿ ಏನಿದೆಯೋ ಅದು ಮಾತ್ರವೇ ಸತ್ಯ. ರೂಪಾಕಾರಗಳು ಸತ್ಯವಲ್ಲ. ರೂಪಾಕಾರಗಳು ಭಗ್ನಗೊಳ್ಳಬಹುದು. ಕೃತಕವಾಗಿರಬಹುದು. ಸಾಂದರ್ಭಿಕವೂ ಆಗಿರಬಹುದು. ಆದ್ದರಿಂದ ಅವುಗಳ ಆಧಾರದ ಮೇಲೆ ಯಾವುದರ / ಯಾರ ಗುಣವನ್ನೂ ಅಳೆಯಲಾಗದು. ಆಯಾ ವ್ಯಕ್ತಿ / ವಸ್ತುಗಳ ಮೂಲ ಅರಿತರೆ, ಅವರನ್ನೂ ಯಥಾವತ್ತಾಗಿ ಅರಿಯುವುದು ಸುಲಭವಾಗುತ್ತದೆ.

ಮಣ್ಣಿನಿಂದ ಮಾಡಿದ ಗೊಂಬೆ / ಕುಂಭಗಳ ಆಕಾರ ಏನೇ ಇದ್ದರೂ ಯಾವ ಮಣ್ಣಿನಿಂದ ಮಾಡಿರುತ್ತಾರೆಯೋ ಅದರ ಮೇಲೆ ಅವುಗಳ ಗುಣಮಟ್ಟ ನಿರ್ಧಾರವಾಗುತ್ತದೆ. ಹಾಗೆಯೇ, ಹೊರಗು ಏನೇ ಇದ್ದರೂ ಅಂತರಂಗದಲ್ಲಿ ಏನಿದೆಯೋ ಅದೇ ಮುಖ್ಯವಾಗುತ್ತದೆ. ಅಂತರಂಗವಷ್ಟೆ ಸತ್ಯ, ಬಾಹ್ಯದ ತೋರುಗಾಣಿಕೆಯಲ್ಲ….

Leave a Reply