ಸಂಕಟದ ನಂತರ  ಒದಗಿ ಬರುವ ಅಮೃತದ ಹನಿಗಳು… : ಒಂದು ರೂಮಿ ಪದ್ಯ

ಮೂಲ : ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಒಂದು ಹೊಸ ಬಾಗಿಲು
ತಾನೇ ತಾನಾಗಿ ತೆರೆದುಕೊಳ್ಳುತ್ತದೆ.

ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ತೋಳು ಚಾಚಿ ಸ್ವಾಗತಿಸು.
ಅವನು ತನ್ನ ಜೊತೆಗೆ ತಂದ ಯಾತನೆಗಳ 
ಪಕ್ಕೆ ಹಿಂಡಿ ತಮಾಷೆ ಮಾಡು.

ದುಃಖಗಳು, 
ಚಿಂದಿ ಬಟ್ಟೆಯ ಕೌದಿಯ ಹಾಗೆ
ಬೇಕಾದಾಗ ಹೊದ್ದು ಕಳಚಿಟ್ಟು ಬಿಡಬೇಕು.

ಈ ಕಳಚುವಿಕೆ ಮತ್ತು 
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ 
ಒದಗಿ ಬರುವ ಅಮೃತದ ಹನಿಗಳು

Leave a Reply