ಭಾಗವತ ಪುರಾಣ ಹೇಳಿದ ಈ 7 ಭವಿಷ್ಯಗಳು ನಿಜವಾಗಿವೆ!

ಭಾಗವತ ಪುರಾಣದಲ್ಲಿ ಕಲಿಯುಗದ ಬಗ್ಗೆ ಹೇಳಿದ್ದರಲ್ಲಿ 7 ಭವಿಷ್ಯಗಳು ನಿಜವಾಗಿರುವುದನ್ನು ನಾವೇ ಸ್ಪಷ್ಟವಾಗಿ ಅನುಭವಿಸಿದ್ದೇವೆ. ಯಾವುದು ಈ  ಭವಿಷ್ಯಗಳು? ಮುಂದೆ ನೋಡಿ….

1
ಧರ್ಮ, ಸತ್ಯಸಂಧತೆ, ಶುಚಿತ್ವ, ಸಹನೆ, ಮಾನವೀಯ ಅಂತಃಕರಣ, ಆಯುಷ್ಯ, ದೇಹದ ಶಕ್ತಿ, ನೆನಪಿನ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತದೆ.  
ಆಕರ : ಭಾಗವತ | 12.2.1

2
ಜನರ ಅದೃಷ್ಟ ಮತ್ತು ಯೋಗ್ಯತೆಗಳನ್ನು ಅವರ ಸಂಪತ್ತಿನಿಂದ ಅಳೆಯಲಾಗುತ್ತದೆ. ಶ್ರೀಮಂತರು ಮತ್ತು ಅಧಿಕಾರ ಹೊಂದಿದವರು ಮಾತ್ರ ಬಲಶಾಲಿಗಳೆಂದು ಪರಿಗಣಿಸಲ್ಪಟ್ಟು, ನ್ಯಾಯವೂ ಅಂಥವರಿಗೆ ಬೇಗ ಒಲಿಯುತ್ತದೆ. 
ಆಕರ : ಭಾಗವತ |12.2.2

3
ಗಂಡು – ಹೆಣ್ಣಿನ ಸಂಬಂಧಕ್ಕೆ ದೈಹಿಕ ಆಕರ್ಷಣೆ ಮುಖ್ಯವಾಗುತ್ತದೆ. ಸ್ತ್ರೀ ಮತ್ತು ಪೌರುಷ ಗುಣಗಳು ಕೇವಲ ಲೈಂಗಿಕ ಸಾಮರ್ಥ್ಯದಿಂದ / ಸೌಂದರ್ಯದಿಂದ ನಿರ್ಧಾರವಾಗುತ್ತದೆ. 
ಆಕರ : ಭಾಗವತ | 12.2.3

4
ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಸಾಧನೆಯನ್ನು ಹೊರಗಿನ ವೇಷ ಭೂಷಣಗಳಿಂದ ಅಳೆಯಲಾಗುತ್ತದೆ. ಹಣ ಸಂಪಾದನೆಯೇ ಜೀವನದ ಪ್ರಮುಖ ಗುರಿಯೆಂದು ಪರಿಗಣಿಸಲಾಗುತ್ತದೆ. 
ಆಕರ : ಭಾಗವತ |12.2.4

5
ಹಣವಿಲ್ಲದವನನ್ನು ಅಪವಿತ್ರ ಎಂದೂ, ಬೂಟಾಟಿಕೆಯನ್ನೇ ಸದ್ಗುಣ ಎಂದು ತಿಳಿಯಲಾಗುತ್ತದೆ. ದನಿ ಎತ್ತರಿಸಿ ಕೂಗಾಡುವವರನ್ನೇ  ಸತ್ಯವಂತರೆಂದು ನಂಬಲಾಗುತ್ತದೆ. ಸಂಸಾರ ನಡೆಸುವವರು ಮಾತ್ರವೇ ಜವಾಭ್ದಾರಿಯುಳ್ಳ ಮನುಷ್ಯರೆಂದು ಭಾವಿಸಲಾಗುತ್ತದೆ.  ಧಾರ್ಮಿಕ ತತ್ವಗಳ ಬಗ್ಗೆ ಮಾತಾಡುವುದೇ ಕೀರ್ತಿಯ ವಿಷಯವಾಗಿ ಮಾರ್ಪಾಡಾಗುತ್ತವೆ. 
ಆಕರ : ಭಾಗವತ |12.2.5 ; 12.2.6

6
ಭೂಮಿಯು ಭ್ರಷ್ಟ ಜನರಿಂದ ತುಂಬಿ ತುಳುಕುತ್ತದೆ. ಭೀಕರ ಬರಗಾಲ, ಕ್ಷಾಮ ಮತ್ತು ಮಿತಿಮೀರಿದ ಕಂದಾಯ/ತೆರಿಗೆಗಳು ಮನುಷ್ಯರನ್ನು ಸಂಕಷ್ಟಕ್ಕೆ ತಳ್ಳುತ್ತವೆ. ಚಳಿ, ಗಾಳಿ, ಬಿಸಿಲು, ಮಂಜು ಕವಿದ ವಾತಾವರಣ ತೀವ್ರಗೊಂಡು ಜನರು ಸಂಕಷ್ಟ ಎದುರಿಸುತ್ತಾರೆ. ಹಸಿವೆ ನೀರಡಿಕೆಗಳ ಭಾದೆ ತೀವ್ರಗೊಳ್ಳುತ್ತದೆ.
ಆಕರ : ಭಾಗವತ |12.2.7 ; 12.2.9 ; 12.2.10

7
ಮಾಲಿಕ ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ಹಣದ ಕೊರತೆ ಉಂಟಾದಾಗ ಸೇವಕ ಅವನನ್ನು ತೊರೆಯುತ್ತಾನೆ. ಸೇವಕ ಎಷ್ಟೇ ನಿಷ್ಠನಾಗಿದ್ದರೂ ಮಾಲಿಕ ವಿನಾಕಾರಣ ಅವನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಇಬ್ಬರಿಗೂ ತಮ್ಮ ಲಾಭವಷ್ಟೆ ಮುಖ್ಯವಾಗುತ್ತದೆ. 
ಆಕರ : ಭಾಗವತ |12.2.11

 

4 Comments

  1. ಅತ್ಯುತ್ತಮವಾದ ಲೇಖನ , ಸತ್ಯದಿಂದ ಕೂಡಿದ್ದಾಗಿದೆ

Leave a Reply