ರಾಮಕೃಷ್ಣ ಪರಮಹಂಸ – ವಿವೇಕಾನಂದರ ಸಂಭಾಷಣೆ : ವ್ಯಕ್ತಿತ್ವ ವಿಕಸನ ಪಾಠಗಳು

ಅದ್ಭುತ ಗುರು, ಅದ್ವಿತೀಯ ಶಿಷ್ಯ ಜೋಡಿಯಾದ ರಾಮಕೃಷ್ಣ ಪ್ರಮಹಂಸ ಮತ್ತು ವಿವೇಕಾನಂದರ ಸಂಭಾಷಣೆಗಳು ವ್ಯಕ್ತಿತ್ವ ವಿಕಸನ, ತನ್ಮೂಲಕ ಆತ್ಮವಿಕಸನಕ್ಕೆ ಇಂಬು ಕೊಡುವಂತೆ ಇರುತ್ತಿದ್ದವು. ಅಂತಹ ಸಂಭಾಷಣೆಗಳಲ್ಲಿ ಒಂದು ತುಣುಕನ್ನು ಆಯ್ದು ಇಲ್ಲಿ ನೀಡಿದ್ದೇವೆ. 

ಸ್ವಾಮಿ ವಿವೇಕಾನಂದ : ಗುರುದೇವ! ನನಗೆ ಬಿಡುವೇ ಸಿಗುತ್ತಿಲ್ಲ. ಬದುಕು ದುಸ್ತರವಾಗುತ್ತಿದೆ.
ರಾಮಕೃಷ್ಣ ಪರಮಹಂಸ : ಕೇವಲ ಚಟುವಟಿಕೆಗಳು ನಿನ್ನನ್ನು ವ್ಯಸ್ತವಾಗಿಡುತ್ತವೆ. ಅಲ್ಲಿ ಉತ್ಪಾದನೆ ನಡೆಯುತ್ತಿದ್ದರೆ, ನಿನಗೆ ಬಿಡುವು ದೊರೆಯುತ್ತದೆ. (ಸುಮ್ಮನೆ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇದ್ದರೆ ಸಮಯ ತಿನ್ನುತ್ತದೆ ಹೊರತು ಪ್ರಯೋಜನವಿಲ್ಲ. ಉತ್ಪಾದನೆಯ ಮೂಲಕ ಪ್ರಯೋಜನಕ್ಕೆ ಒದಗುವ ಕೆಲಸಗಳು ಸಮಯದ ಸದುಪಯೋಗವಾಗುತ್ತದೆಯಾದ್ದರಿಂದ, ನಮಗೆ ಅದು ಬಿಡುವಿನ ಆಹ್ಲಾದವನ್ನೂ ವಾಸ್ತವದ ಬಿಡುವನ್ನೂ ನೀಡುತ್ತವೆ)

ಸ್ವಾಮೀಜಿ : ಬದುಕು ಸಂಕೀರ್ಣವಾಗುತ್ತಿದೆ ಗುರುದೇವ
ಪರಮಹಂಸ: ಬದುಕಿನ ವಿಶ್ಲೇಷಣೆ ಮಾಡುವುದನ್ನು ನಿಲ್ಲಿಸು. ಸಂಕೀರ್ಣತೆಗೆ ಅದೇ ಮುಖ್ಯ ಕಾರಣ. ಅದನ್ನು ಬಿಟ್ಟು, ಕೇವಲ ಬದುಕುವುದನ್ನು ರೂಢಿ ಮಾಡಿಕೋ.

ಸ್ವಾಮೀಜಿ : ನಾವು ಮೇಲಿಂದ ಮೇಲೆ ದುಃಖಕ್ಕೆ ಒಳಗಾಗುತ್ತಲೇ ಇರುತ್ತೇವಲ್ಲ!
ಪರಮಹಂಸ : ಆತಂಕ ಪಡುವುದು ನಿನಗೆ ಅಭ್ಯಾಸವಾಗಿಬಿಟ್ಟಿದೆ. ಅದಕ್ಕೇ ಹಾಗನ್ನಿಸುತ್ತದೆ.

ಸ್ವಾಮೀಜಿ : ಸಜ್ಜನರು ಯಾಕೆ ಯಾವಾಗಲೂ ಕಷ್ಟಕ್ಕೀಡಾಗುತ್ತಾರೆ?
ಪರಮಹಂಸ : ವಜ್ರವು ಹೊಳಪು ಪಡೆಯಬೇಕಾದರೆ, ಅದನ್ನು ಕತ್ತರಿಸಲೇಬೇಕಾಗುತ್ತದೆ. ಬೆಂಕಿಯಲ್ಲಿ ಪುಟಕ್ಕಿಡದೆ ಚಿನ್ನ ಶುದ್ಧವಾಗದು. ಸಜ್ಜನರು ಹಾಗೇ, ವಿವಿಧ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ಅದನ್ನು ಕಷ್ಟಗಳೆಂದು ಕರೆಯಬೇಕಿಲ್ಲ. ಈ ಅನುಭವಗಳ ಮೂಲಕ ಅವರು ಪಾಠ ಕಲಿಯುತ್ತಾರೆಯೇ ಹೊರತು ಯಾತನೆ ಪಡುವುದಿಲ್ಲ.

ಸ್ವಾಮೀಜಿ: ಅಂದರೆ… ಈ ಬಗೆಯ ಅನುಭವಗಳು ಪ್ರಯೋಜನಕಾರಿ ಎಂದು ಹೇಳುತ್ತೀರೇನು?
ಪರಮಹಂಸ : ಖಂಡಿತ. ಅನುಭವವು ಕಠಿಣ ಹೃದಯದ ಶಿಕ್ಷಕನಂತೆ. ಮೊದಲು ಪರೀಕ್ಷೆ ನೀಡುತ್ತದೆ, ಅನಂತರ ಪಾಠ ಕಲಿಸುತ್ತದೆ.

ಸ್ವಾಮೀಜಿ : ಅದೆಷ್ಟು ಸಮಸ್ಯೆಗಳು ನಮ್ಮನ್ನು ಮುತ್ತಿಕೊಂಡಿರುತ್ತವೆ ಅಂದರೆ, ಕೆಲವೊಮ್ಮೆ ನಮಗೆ ನಾವು ಎತ್ತ ಸಾಗುತ್ತಿದ್ದೇವೆ ಎಂದೇ ಗೊತ್ತಾಗುವುದಿಲ್ಲ!
ಪರಮಹಂಸ : ನೀನು ಹೊರಗೆ ನೋಡಿದರೆ ನಿನಗೆ ಅದು ಗೊತ್ತಾಗುವುದಿಲ್ಲ. ನಿನ್ನ ಅಂತರಂಗದೊಳಹೊಕ್ಕು ನೋಡು. ಕಣ್ಣುಗಳು ದೃಷ್ಟಿ ನೀಡುತ್ತವೆ. ಹೃದಯವು ದಾರಿ ತೋರುತ್ತದೆ.

ಸ್ವಾಮೀಜಿ : ವೈಫಲ್ಯವು ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆ ಅನ್ನುವ ನಂಬಿಕೆಗೆ ಧಕ್ಕೆ ಉಂಟುಮಾಡುತ್ತದೆಯೇ?
ಪರಮಹಂಸ : ಸಾಫಲ್ಯ – ವೈಫಲ್ಯಗಳನ್ನು ನಿರ್ಧರಿಸುವವರು ಬೇರೆಯವರು. ಸಂತೃಪ್ತಿಯನ್ನು ನಿರ್ಧರಿಸುವವನು ನೀನೇ. ನಿನಗೆ ಯಾವುದು ಮುಖ್ಯವೆಂದು ಯೋಚನೆ ಮಾಡು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

4 Responses

 1. ದತ್ತ ೈತನ್ಯ

  ಸರ್ ದಯವಿಟ್ಟು ಅರಳಿಮರ ಒಂದು ವಾಟ್ಸಪ್ ಗುಂಪು ಮಾಡಿರಿ
  ಇದರಲ್ಲಿನ ವಿಚಾರಗಳನ್ನು ದಯವಿಟ್ಟು ಅಲ್ಲಿಯು ಪ್ರಕಟಿಸಿರಿ
  ಇದರಿಂದ ಹೆಚ್ಚಿನ ಸಹಾಯವಾಗುವುದು.
  ಗ್ರೂಪ್‌ ಸರಳ ಮತ್ತು ಸುಲಭ ಮಾಹಿತಿ ವಿನಿಮಯದ ಸಾಧನವಾಗಿದೆ. ಮತ್ತು ಹೆಚ್ಚು ಜನರನ್ನು ತಲುಪುತ್ತದೆ .

  Like

 2. ಅದ್ವೀತೀಯ ಶಿಷ್ಯ ನಾಗಿಲ್ಲದೇ ಇದ್ದರೂ ಈ ತರಹದ ಪ್ರಶ್ನೆಗಳು ಏಳುತ್ತಿರುತ್ತವೆ, ಬಗೆಹರಿಸಲು ಗುರುಗಳಿಲ್ಲ ಎಂಬ ಕೊರಗನ್ನು ನೀಗಸುವಂತಹ ಅಮೃತ ಸಂದೇಶಗಳು,

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.