ಯಾವಾಗ ಯಾವ ಶ್ಲೋಕ ಹೇಳಬೇಕು ? : ನಿತ್ಯಪಾಠ

ವಿವಿಧ ದೈನಂದಿನ ಚಟುವಟಿಕೆಗಳ ವೇಳೆ ಯಾವ ಶ್ಲೋಕಗಳನ್ನು ಹೇಳುವುದು ಉತ್ತಮ ಅನ್ನುವ ‘ನಿತ್ಯಪಾಠ’ ಇಲ್ಲಿದೆ. ಈ ಶ್ಲೋಕಗಳು ಆಯಾ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿಸಿವೆ…

ಬೆಳಿಗ್ಗೆ ಎದ್ದಕೂಡಲೇ ಕೈಗಳನ್ನು ನೋಡುತ್ತಾ:

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ
ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ

ಅರ್ಥ: ಅಗ್ರಭಾಗದಲ್ಲಿ ಲಕ್ಷ್ಮಿಯು ನೆಲೆಸಿರುವ, ಮಧ್ಯಭಾಗವು ಸರಸ್ವತಿಯ ನೆಲೆಯಾಗಿರುವ, ಮೂಲೆಗಳಲ್ಲಿ ಗೌರಿಯು ನೆಲೆಸಿರುವ ನನ್ನ ಹಸ್ತಗಳನ್ನು ನೋಡುತ್ತಾ, ಅವುಗಳಲ್ಲಿ ತ್ರಿದೇವಿಯರನ್ನು ಕಾಣುತ್ತಾ, ಅವರಿಗೆ ನಮಸ್ಕರಿಸುತ್ತೇನೆ.

ಬೆಳಿಗ್ಗೆ ಎದ್ದಕೂಡಲೇ ನೆಲವನ್ನು ಮುಟ್ಟುತ್ತಾ

ಸಮುದ್ರ ವಸನೇ ದೇವೀ ಪರ್ವತ ಸ್ತನಮಂಡಲೇ
ವಿಷ್ನುಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ

ಅರ್ಥ: ಸಮುದ್ರವನ್ನೇ ಸೀರೆಯಾಗಿ ಉಟ್ಟಿರುವ, ಪರ್ವತಗಳೆಂಬ ಸ್ತನಗಳಿಂದ ನದಿಗಳನ್ನು ಹರಿಸುತ್ತಿರುವ, ವಿಷ್ಣುಪತ್ನಿಯೇ (ಭೂದೇವಿಯೇ) ನಿನ್ನ ಮೇಲೆ ಕಾಲೂರುತ್ತಿದ್ದೇನೆ, ದಯವಿಟ್ಟು ನನ್ನ ಪಾದಸ್ಪರ್ಶವನ್ನು ಕ್ಷಮಿಸು.

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ

ಗಂಗೇಚ ಯಮುನೇಚೈವ ಗೋದಾವರೀ ಸರಸ್ವತೀ
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು

ಅರ್ಥ: ಪವಿತ್ರ ಸಪ್ತನದಿಗಳಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧೂ, ಕಾವೇರಿಯರೇ; ದಯವಿಟ್ಟು ನಾನು ಸ್ನಾನ ಮಾಡುತ್ತಿರುವ ಈ ನೀರಿನಲ್ಲಿ ಸಮ್ಮಿಲಿತಗೊಳ್ಳಿ (ಸಮ್ಮಿಲಿತಗೊಂಡು ನನ್ನನ್ನು ಪವಿತ್ರಗೊಳಿಸಿ)

ದೇವರ ಪ್ರಾರ್ಥನೆ ಮಾಡುವಾಗ

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪ ಸಂಭವಃ
ತ್ರಾಹಿಮಾಂ ಪುಂಡರೀಕಾಕ್ಷ ಶರಣಾಗತ ವತ್ಸಲ
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನ

ಅರ್ಥ: ನಾನು ಪಾಪಿ, ಪಾಪಕರ್ಮಗಳನ್ನು ಮಾಡಿದ್ದೇನೆ, ಪಾಪದಿಂದಲೇ ಹುಟ್ಟಿದ್ದೇನೆ. ಇಂತಹಾ ನಾನು ನಿನ್ನಲ್ಲಿ ಶರಣಾಗತನಾಗಿ ಬಂದಿದ್ದೇನೆ; ವಾತಸ್ಲ್ಯಮಯಿಯಾದ ಪುಂಡರೀಕಾಕ್ಷನೇ, ನನ್ನನ್ನು ಕಾಪಾಡು. ನೀನಲ್ಲದೆ ನನಗೆ ಅನ್ಯ ಗತಿಯಿಲ್ಲ. ಆದ್ದರಿಂದ, ಹೇ ಜನಾರ್ಧನ! ಕರುಣೆ ತೋರಿ ನನ್ನನ್ನು ರಕ್ಷಿಸು.

ಗುರುಹಿರಿಯರ ನಮನ

ಮಾತೃ ದೇವೋ ಭವ ಪಿತೃ ದೇವೋ ಭವ
ಆಚಾರ್ಯ ದೇವೋ ಭವ ಅತಿಧಿ ದೇವೋ ಭವ

ಅರ್ಥ: ತಾಯಿದೇವರಿಗೆ ನಮಸ್ಕಾರ; ದೇವಸ್ವರೂಪಿ ತಂದೆಗೆ ನಮಸ್ಕಾರ; ದೇವರೇ ಆದ ಆಚಾರ್ಯರಿಗೆ ನಮಸ್ಕಾರ; ಸೇವೆಯ ಅವಕಾಶ ನೀಡುವ ಅತಿಥಿ ದೇವರಿಗೆ ನಮಸ್ಕಾರ.

ಶಾಂತಿ ಮಂತ್ರಗಳು
ಓಂ ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯಾ ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ
ಅರ್ಥ: ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಸಾಗೋಣ. ಎಲ್ಲೆಡೆ ಶಾಂತಿ ನೆಲೆಸುವಂತಾಗಲಿ.
ನಾವು ಜೊತೆಯಾಗಿ ಸಾಗೋಣ; ಜೊತೆಯಾಗಿ ಉಣ್ಣೋಣ; ಜೊತೆಯಾಗಿ ಧೀರಕಾರ್ಯಗಳನ್ನು ಮಾಡೋಣ; ಜೊತೆಯಾಗಿ ಅಧ್ಯಯನ ನಡೆಸಿ ತೇಜಸ್ವಿಗಳಾಗೋಣ; ಎಂದಿಗೂ ಯಾರನ್ನೂ ದ್ವೇಷಿಸದೆ ಬಾಳೋಣ. ಎಲ್ಲೆಡೆ ಶಾಂತಿ ನೆಲೆಸುವಂತಾಗಲಿ.

ಮಲಗುವಾಗ
ರಾಮಃ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ
ಶಯನೇಯಂ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಶ್ಯತಿಃ
ಅರ್ಥ: ನಿತ್ಯವೂ ಮಲಗುವ ಮುನ್ನ ರಾಮ, ಸ್ಕಂದ (ಸುಬ್ರಹ್ಮಣ್ಯ), ಹನುಮಂತ, ವೈನತೇಯ (ಗರುಡ), ವೃಕೋದರ (ಗಣಪತಿ) ಇವರನ್ನು ನೆನೆಯುತ್ತೇನೆ; ಈ ದೇವತೆಗಳು ದುಸ್ವಪ್ನ ನಿವಾರಿಸಿ ಸುಖನಿದ್ರೆ ಕರುಣಿಸುತ್ತಾರೆ.

3 Comments

  1. ನಿಮ್ಮ ಅಂಕಣಗಳು ನಿಜಕ್ಕೂ ವ್ಯಕ್ತಿತ್ವವಿಕಸನಕ್ಕೆ ದಾರಿದೀಪ.

Leave a Reply