ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #24

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಶರಣಾಗತಿ ಎಂದರೆ
ಎದುರು ಮಂಡಿಯೂರುವುದಲ್ಲ,
ಬೇರೆಲ್ಲ ವಿಷಯಗಳಲ್ಲಿ ಅನಾಸಕ್ತರಾಗುವುದಲ್ಲ.
ವಿಧಿ ಎಂದು ಹತಾಶರಾಗುವುದಲ್ಲ,
ಎದುರಾಳಿಯೆದುರು ಶಸ್ತ್ರತ್ಯಾಗ ಮಾಡುವುದಲ್ಲ,
ಬದಲಾಗಿ
ಈ ಎಲ್ಲದಕ್ಕೆ ತದ್ವಿರುದ್ಧವಾದುದು
ಅಪಾರ ಧೈರ್ಯದ ವಿಷಯ.

ಶರಣಾಗತಿಯೊಳಗೆ
ಹುಟ್ಟುವ ಶಕ್ತಿಯೇ ನಿಜದ ಶಕ್ತಿ.

ಬದುಕಿನ ದಿವ್ಯ ಸ್ವಾರಸ್ಯಕ್ಕೆ ಶರಣಾಗುವವರು,
ಇಡೀ ಜಗತ್ತು ಒಂದರ ಮೇಲೊಂದು
ಉದ್ವಿಗ್ನ ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗಲೂ
ಅಚಲ ಪ್ರಶಾಂತತೆಯಲ್ಲಿ ಸ್ಥಿರವಾಗುವರು.

23ನೇ ನಿಯಮ ಇಲ್ಲಿ ನೋಡಿ: https://aralimara.com/2020/01/20/sufi-74/

1 Comment

Leave a Reply