ಮನುಷ್ಯ ಪ್ರಾಣಿಯೇ, ಮೃಗವೇ? ಎರಡರ ನಡುವೆ ವ್ಯತ್ಯಾಸವೇನು? : ಓಶೋ

ಒಂದು ನಾಯಿ, ಅದು ನಾಯಿಯಾಗಿಯೇ ಹುಟ್ಟುತ್ತದೆ, ನಾಯಿಯಾಗೇ ಬದುಕುತ್ತದೆ, ನಾಯಿಯಾಗಿಯೇ ಸಾಯುತ್ತದೆ. ಆದರೆ ಮನುಷ್ಯನು ಹಾಗಲ್ಲ, ಮನುಷ್ಯನು ಶಾಂತಿಯನ್ನು ಸೂಚಿಸುವ ಬುದ್ಧ ಬೇಕಾದರು ಆಗಬಲ್ಲ, ರಕ್ತಪಾತ ನಡೆಸಿದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡ ಆಗಬಲ್ಲ. ಮನುಷ್ಯನಿಗೆ ಇವೆರಡರಲ್ಲಿ ಯಾವುದು ಬೇಕಾದರೂ ಆಗುವ ಸಾಮರ್ಥ್ಯವಿದೆ. ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಎಲ್ಲಾದರು ಸಿಗಲು ಸಾದ್ಯವೆ? ~ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ನಿರೂಪಣೆ : ಪ್ರಣವ ಚೈತನ್ಯ

ನಮ್ಮ ವಿಜ್ಞಾನವೇ ಹೇಳುವಂತೆ ಮನಯಷ್ಯನು ಒಂದು ಜಾತಿಯ ಪ್ರಾಣಿ. ಆದರೆ ಮನುಷ್ಯನು ಬೇರೆಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಹಾಗು ಚಾಲಾಕು ಪ್ರಾಣಿ ಅನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ. ಬೇರೆಲ್ಲ ಪ್ರಾಣಿಗಳನ್ನು ತನ್ನ ಗುಲಾಮರನ್ನಾಗಿ ಮಾಡಿಕೊಂಡು ಈ ಭೂಮಿಯನ್ನು ಆಳುತ್ತಿರುವ ಪ್ರಾಣಿ ಮನುಷ್ಯ. ಆದರೆ ಮನುಷ್ಯನು ತನ್ನ ಅತಿಬುದ್ದಿವಂತಿಕೆ ಹಾಗು ದುರಾಸೆಯಿಂದಾಗಿ ಎಲ್ಲ ಪ್ರಾಣಿಗಳಿಗಿಂತ ಕ್ರೂರನಾಗುತ್ತಿದ್ದಾನೆ.

ಒಂದು ನಾಯಿ, ಅದು ನಾಯಿಯಾಗಿಯೇ ಹುಟ್ಟುತ್ತದೆ, ನಾಯಿಯಾಗೇ ಬದುಕುತ್ತದೆ, ನಾಯಿಯಾಗಿಯೇ ಸಾಯುತ್ತದೆ. ಆದರೆ ಮನುಷ್ಯನು ಹಾಗಲ್ಲ, ಮನುಷ್ಯನು ಶಾಂತಿಯನ್ನು ಸೂಚಿಸುವ ಬುದ್ಧ ಬೇಕಾದರು ಆಗಬಲ್ಲ, ರಕ್ತಪಾತ ನಡೆಸಿದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡ ಆಗಬಲ್ಲ. ಮನುಷ್ಯನಿಗೆ ಇವೆರಡರಲ್ಲಿ ಯಾವುದು ಬೇಕಾದರೂ ಆಗುವ ಸಾಮರ್ಥ್ಯವಿದೆ. ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಎಲ್ಲಾದರು ಸಿಗಲು ಸಾದ್ಯವೆ?

ಒಮ್ಮೆ ಒಂದು ಕಾಡಿನಲ್ಲಿ ಐವತ್ತು ಸಾವಿರ ಮಂಗಗಳು ನೆಲೆಸಿದ್ದವು. ಆ ಮಂಗಗಳ ಸಾಮ್ರಾಜ್ಯಕ್ಕೆ ಒಂದು ದಿನ ಚಳಿಯ ಕಾಟ ಶುರುವಾಯಿತು, ಆ ಭಯಂಕರವಾದ ಚಳಿಯಿಂದ ಹಲವು ಮಂಗಗಳು ಸತ್ತು ಹೋದವು. ಆಗ ಉಳಿದ ಮಂಗಗಳು ತಾವು ಬದುಕುವುದಕ್ಕಾಗಿ ತಮ್ಮ ಚಿಕ್ಕಚಿಕ್ಕ ಮಕ್ಕಳನ್ನು ಸುಟ್ಟವು, ಅದರ ಸುತ್ತಲು ಕುಣಿದವು. ಇಂತಹ ಕಥೆಯನ್ನು ಕೇಳಿದರೆ ನಮಗೆ ಮಂಗಗಳು ಎಷ್ಟು ಮೂರ್ಖ ಪ್ರಾಣಿಗಳು ಎಂದು ಅನ್ನಿಸುತ್ತದೆ. ಆದರೆ ಇಂತಹದೆ ಒಂದು ದುರಂತ ನಿಜವಾಗಿಯು ಕಾರ್ತ್ ಹೇಜ್ ಎನ್ನುವ ಜಾಗವೊಂದರಲ್ಲಿ ಮನುಷ್ಯರಿಂದ ನಡೆದಿದೆ ಎಂದು ತಿಳಿದಾಗ ಮನುಷ್ಯರು ಎಷ್ಟು ಸ್ವಾರ್ಥ ಹಾಗು  ನೀಚ ಪ್ರಾಣಿಗಳು ಎಂದು ತಿಳಿದುಬರುತ್ತದೆ. ಹೌದು,  ಕಾರ್ತ್ ಹೇಜ್ ಎನ್ನುವ ಜಾಗದಲ್ಲಿ ಐವತ್ತು ಸಾವಿರ ಜನರು ಮುನ್ನೂರಕ್ಕು ಹೆಚ್ಚು ಮಕ್ಕಳನ್ನು ದೇವರಿಗೆ ಬಲಿ ನೀಡಿದ್ದರು. ಅವರ ಸ್ವಂತ ಮಕ್ಕಳನ್ನು ಸಹ!

ಈ ಪ್ರಪಂಚಕ್ಕೆ ಅಡಾಲ್ಫ್ ಹಿಟ್ಲರ್ ಮಾಡಿದ್ದನ್ನು ಮರೆಯುವುದು ಬಹಳ ಕಷ್ಟ. ಅದು ಎಂದಿಗೂ ಮರೆಯುವ ಸಂಗತಿಯಲ್ಲ. ಏಕೆಂದರೆ  ಈ ಜರ್ಮನ್  ಸರ್ವಾಧಿಕಾರಿಯು ಕೋಟಿ ಕೋಟಿ ಜೀವಗಳನ್ನು ಬಲವಂತದಿಂದ ಗ್ಯಾಸ್ ಚೇಂಬರಿನ ಒಳಗೆ ಹಾಕಿ ನರಳಿ ನರಳಿ ಸಾಯುವ ಹಾಗೆ ಮಾಡಿದ. ಅವನು ಸಾಯಿಸಿದವರೂ ಅವನ ಹಾಗೇ ಮನುಷ್ಯರೇ. ಈ ಇಡೀ ಭೂಮಂಡಲದಲ್ಲಿ ಎಷ್ಟೋ ತರಹದ ಜೀವಿಗಳಿವೆ, ಆದರೆ ಅವುಗಳಲ್ಲಿ ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿಯು ತನ್ನದೆ ಜಾತಿಯ ಇನ್ನೊಂದು ಪ್ರಾಣಿಯನ್ನು ಕೊಲ್ಲುವುದಿಲ್ಲ. ಜಗಳವಾಡುತ್ತವೆ ಆದರೆ ಕೊಲ್ಲುವುದಿಲ್ಲ.

ಮನುಷ್ಯನ  ಕಳೆದ ಹದಿನೈದು ಸಾವಿರ ವರ್ಷಗಳ ಇತಿಹಾಸದಲ್ಲಿ, ಎಷ್ಟೊ ಲಕ್ಷ ಯುದ್ದಗಳು ನಡೆದಿವೆ, ಅದರಲ್ಲಿ ಎಷ್ಟೊ ಕೋಟಿ ಕೋಟಿ ಜೀವಗಳು ಸಂಹಾರವಾಗಿದೆ. ಇವೆಲ್ಲ ಕೇವಲ ಒಬ್ಬ ಮನುಷ್ಯನ ಸ್ವಾರ್ಥಕ್ಕಾಗಿ, ಅಥವಾ ದ್ವೇಷಕ್ಕಾಗಿ.  ಈಗ ನಿಜವಾದ ಮೃಗ ಯಾರು? ನಾವು ಪ್ರಾಣಿಗಳಿಗೆ ಮೃಗಗಳು ಎನ್ನುವ ಮೊದಲು ನಾವೆಷ್ಟು ಕೆಟ್ಟ ಮೃಗಗಳು ಎಂದು ತಿಳಿದುಕೊಳ್ಳಬೇಕು.

ಯಾವಾಗ ಒಂದು ಜೀವಿ ತನ್ನ ಉಳಿವಿಗಾಗಿ ಬೇರೆ ಜೀವಿಯನ್ನು ಸಂಹಾರ ಮಾಡುತ್ತದೆಯೋ ಆಗ ಆ ಜೀವಿ ಮೃಗವಾಗುತ್ತದೆ. ಅದೇ ಜೀವಿ ಬೇರೆ ಜೀವಿಯ ಉಳಿವಿಗಾಗಿ ತನ್ನು ತಾನು ಸಂಹಾರ ಮಾಡಿಕೊಂಡು ಬೇರೆಯವರಿಗೆ ಸಹಾಯ ಮಾಡುತ್ತದೊ ಆಗ ಅದು ಪ್ರಾಣಿಯಾಗುತ್ತದೆ. ಇದುವೇ ಪರಿಸರದ ನಿಯಮ. ನಾವು ಮನುಷ್ಯರು ಇದನ್ನು ಅನುಸರಿಸಿಕೊಂಡು ಹೋದರೆ ಮಾತ್ರ ಎಲ್ಲ ಪ್ರಾಣಿಗಳಿಗಿಂತ ಬುದ್ದಿವಂತ ಪ್ರಾಣಿ ಎನ್ನುವ ಪಟ್ಟಕ್ಕೆ ಅರ್ಹವಾಗುತ್ತೇವೆ. ಎಂದು ಓಶೋ ತಮ್ಮ “ದಿ ಬಕ್ ಆಫ್ ಮ್ಯಾನ್” ಕೃತಿಯಲ್ಲಿ ಬಹಳ ಅದ್ಬುತವಾಗಿ ವಿವರಿಸಿದ್ದಾರೆ.

2 Comments

Leave a Reply