ಲಿಂಜಿ ಹೇಳಿದ್ದು : ಬುದ್ಧನೆಂಬುದಿಲ್ಲ, ಧರ್ಮವೆಂಬುದಿಲ್ಲ…

ಲಿಂಜಿ ಯಿಕ್ಸುಆನ್ | ಅನುವಾದ : ಅಲಾವಿಕಾ

RinzaiGigen

ನ್ನಲ್ಲಿ ಕೊಡಲು ಧರ್ಮದಂಥದೇನು ಇಲ್ಲ
ಕಾಯಿಲೆ ಗುಣಪಡಿಸುವೆ, ಗಂಟು ಬಿಡಿಸುವೆನಷ್ಟೆ.
ದಶ ದಿಕ್ಕುಗಳ ದಾರಿಯನುಗರೇ,
ಅವಲಂಬಿಸಬೇಡಿ ಯಾವುದರ ಮೇಲೂ.

ಬುದ್ಧನೆಂಬುವನಿಲ್ಲ,
ಧರ್ಮವೆಂಬುದಿಲ್ಲ,
ತರಬೇತಿ ಏನಿಲ್ಲ,
ಮತ್ತು
ಜ್ಞಾನೋದಯವೂ ಇಲ್ಲ.
ಯಾತರ ಬೆನ್ನತ್ತಿದ್ದೀರಿ ಬಿರುಸಾಗಿ?

ತಲೆ ಮೇಲೆ ತಲೆ ಹೊತ್ತುಕೊಂಡು,
ಕುರುಡು ಕಡು ಮೂರ್ಖರೇ!
ನಿಮ್ಮ ತಲೆ ಇರಬೇಕಾದಲ್ಲೇ ಸರಿಯಾಗಿದೆ.

~

ಲಿಂಜಿ ಯಿಕ್ಸುಆನ್‌ 9ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಬೌದ್ಧ ಸಂತ. ಚಾನ್ ಬುದ್ಧಿಸಮ್’ನ ಲಿಂಜಿ ಶಾಖೆಯ ಸಂಸ್ಥಾಪಕ. ನೇತಿ ಅಥವಾ ಭಂಜನೆ ಈತನ ಬೋಧನಾ ಮಾರ್ಗ. ‘ಬುದ್ಧ ಹೊರಗೆ ಕಂಡರೆ ಕೊಂದುಹಾಕು’ – ಇದು ಲಿಂಜಿಯ ಸುಪ್ರಸಿದ್ಧ ಹೇಳಿಕೆ. 

 

Leave a Reply