ಜ್ಞಾನದ ಮುಳ್ಳನ್ನೂ ಎಸೆದುಬಿಡಿ! : ರಾಮಕೃಷ್ಣ ವಚನವೇದ

“ಅಜ್ಞಾನವೆಂಬ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆದುಬಿಡಿ. ಅನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿಬಿಡಿ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದು ಸಾಮಾನ್ಯ ಜ್ಞಾನ. ಅಜ್ಞಾನವೊಂದು ಮುಳ್ಳಾದರೆ, ಅದನ್ನು ತೆಗೆಯುವ ಜ್ಞಾನವೂ ಮುಳ್ಳೇ. ಏಕೆಂದರೆ, ಅಜ್ಞಾನದಂತೆ, ಜ್ಞಾನವೂ ಒಂದು ಹಂತದಲ್ಲಿ ನಮ್ಮನ್ನು ಬಾಧಿಸುತ್ತದೆ. ಜ್ಞಾನವು ಹದ ತಪ್ಪಿದರೆ ಅಹಂಕಾರಕ್ಕೆ ತಿರುಗುತ್ತದೆ. ಅಹಂಕಾರ ಪುನಃ ನಮ್ಮನ್ನು ಅಜ್ಞಾನದ ಸ್ಥಿತಿಗೆ ಹಿಂತಿರುಗಿಸುತ್ತದೆ. 

ಆದ್ದರಿಂದ, ಅಜ್ಞಾನದ ಮುಳ್ಳನ್ನು ತೆಗೆದುಹಾಕಲು ಜ್ಞಾನದ ಮುಳ್ಳನ್ನು ಬಳಸಬೇಕು. ಅನಂತರ ಅವೆರಡನ್ನೂ ಒಟ್ಟಿಗೇ ಅವಗಣಿಸಿ, ನಿತ್ಯ ಸಾಧನೆಯಲ್ಲಿ ತೊಡಗಬೇಕು ಅನ್ನುವುದು ಪರಮಹಂಸರ ಚಿಂತನೆ. 

ಜ್ಞಾನದ ಮುಳ್ಳನ್ನು ಹಾಗೇ ಬಿಟ್ಟುಕೊಂಡರೆ, ಅದು ಸದಾ ಕಾಲ, ಚುಚ್ಚಿದ ಮುಳ್ಳು ನೋಯಿಸುವಂತೆ “ನಾನು ಇದ್ದೇನೆ” ಎಂದು ತನ್ನನ್ನು ತೋರ್ಪಡಿಸಿಕೊಳ್ಳುತ್ತಲೇ ಇರುತ್ತದೆ. ಈ ತೋರ್ಪಡಿಕೆ ನಮ್ಮಲ್ಲಿ ‘ನಾನು ಜ್ಞಾನಿ’ ಎಂಬ ಅಹಂಭಾವಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಅಜ್ಞಾನವನ್ನು ತೆಗೆದು ಎಸೆದ ಕೂಡಲೇ ಜ್ಞಾನವನ್ನೂ ಎಸೆದುಬಿಡಿ… ಅಸ್ತಿತ್ವದಲ್ಲಿ ಒಂದಾಗಿ, ನಡಿಗೆ ಮುಂದುವರಿಸಿ. 

3 Comments

  1. ನಮಸ್ತೆ ಮೇಡಂ,
    ನಿಂದನೆ ಮತ್ತು ಸುಳ್ಳು ಆರೋಪಗಳನ್ನು ಕೇಳಿದಾಗ ಮನಸ್ಸಿಗೆ ನೋವು ಆಗುವುದು ಸಹಜ.ನಿಂದನೆಗೆ ಪ್ರತಿ ಯಾಗಿ ಕೀಳುಮಟ್ಟಕ್ಕೆ ಇಳಿಯುವುದಕ್ಕೂ ಆಗದೆ ಸುಮ್ಮನೆ ಇರುವುದಕ್ಕೂ ಆಗದೆ ಇರುವ ಮನಗಳಿಗೆ ನಿಮ ಈ ಲೇಖನ ಸಾಂತ್ವನದ ಕನ್ನಡಿಯಾಗಿದೆ. ಉತ್ತಮವಾಗಿ ಲೇಖನ. ಅಭಿನಂದನೆಗಳು

Leave a Reply