ತಿಳಿವಳಿಕೆ ಮಾತ್ರವಲ್ಲ, ಅನುಸರಣೆ ಮುಖ್ಯ

ಶ್ರೂಯತಾಂ ಧರ್ಮ ಸರ್ವಸ್ವಂ ಶೃತ್ವಾ ಚ ಅವಧಾರ್ಯತಾಂ | ಆತ್ಮನಃ ಪ್ರತಿಕೂಲಾನಿ ನ ಪರೇಷಾಂ ಸಮಾಚರೇತ್ : ಎಷ್ಟು ಧರ್ಮಗಳನ್ನು ತಿಳಿದಿದ್ದರೆ ತಾನೆ ಏನು, ಅದನ್ನು ಅನುಸರಿಸದೆ ಹೋದರೆ ಯಾವ ಪ್ರಯೋಜನವೂ ಇಲ್ಲ ಅನ್ನುವುದು ಈ ಶ್ಲೋಕದ ಅರ್ಥ. 

ನಮ್ಮಲ್ಲಿ ಬಹುತೇಕರು ಶಾಸ್ತ್ರಗಳನ್ನು ಕಂಠಸ್ಥ ಮಾಡಿಕೊಂಡಿರುತ್ತಾರೆ. ಶ್ಲೋಕ ಸಂಖ್ಯೆ, ಪುಟ ಸಂಖ್ಯೆ ಸಹಿತ ಹೇಳುವಷ್ಟು ಪಾಂಡಿತ್ಯ ಹೊಂದಿರುತ್ತಾರೆ. ಅವರಿಗೆ ತಿಳಿವಳಿಕೆ ಇರುತ್ತದೆಯೇ ಹೊರತು ಅನುಸರಣೆಗೆ ಮನಸ್ಸಿರುವುದಿಲ್ಲ. ದುರ್ಯೋಧನ “ಜಾನಾಮಿ ಧರ್ಮಮ್ ನ ಮೇ ಪ್ರವೃತ್ತಿಃ ಜಾನ್ಯಾಮಧರ್ಮಮ್ ನ ಚ ಮೇ ನಿವೃತ್ತಿಃ” ಅನ್ನುತ್ತಾನಲ್ಲ, ಹಾಗೆ. ಧರ್ಮಾಧರ್ಮಗಳು ನನಗೆ ತಿಳಿದಿವೆ, ಅವುಗಳ ಅನುಸರಣೆಯಲ್ಲಾಗಲೀ ನಿರಾಕರಣೆಯಲ್ಲಾಗಲೀ ನನಗೆ ಆಸಕ್ತಿ ಇಲ್ಲ ಅನ್ನೋದು ದುರ್ಯೋಧನನ ನಿಲುವು. ಈ ಧೋರಣೆಯೇ ಮುಂದೆ ದುರ್ಯೋಧನ ಮಾತ್ರವಲ್ಲ, ಸಂಪೂರ್ಣ ಕುರು ಸಹೋದರರ ನಾಶಕ್ಕೆ ಕಾರಣವಾಯಿತು. 

ಆದ್ದರಿಂದ, ಅರಿಯುವುದು ಮಾತ್ರವಲ್ಲ, ಅನುಸರಣೆಗೆ ಹೆಚ್ಚಿನ ಮಹತ್ವ ಕೊಡೋಣ. ಇದು ಧರ್ಮಕ್ಕೆ ಮಾತ್ರ ಸೀಮಿತವಲ್ಲ. ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ ಸಂಗತಿಗಳು – ಪ್ರತಿಯೊಂದಕ್ಕೂ ಅನುಸರಿಸುವ ಮಾತು. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.