ನಾನು ನನ್ನ ಅಂತರಾತ್ಮವನ್ನು ತಿರಸ್ಕಾರದಿಂದ ನೋಡಿದ ಕ್ಷಣಗಳು… : ಖಲೀಲ್ ಜಿಬ್ರಾನ್ | Sand and Foam

ಮೂಲ : ಖಲೀಲ್ ಜಿಬ್ರಾನ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ಏಳು ಬಾರಿ ನಾನು
ನನ್ನ ಅಂತರಾತ್ಮವನ್ನು ತಿರಸ್ಕಾರದಿಂದ ನೋಡಿದ್ದೆನೆ.

ಮೊದಲ ಬಾರಿ,
ಎತ್ತರವೊಂದನ್ನ ಏರಲು ವಿನಯದ ನಾಟಕ ಮಾಡಿದಾಗ.

ಎರಡನೇಯ ಬಾರಿ,
ಹೆಳವನ ಕಣ್ಣಮುಂದೆ ಕುಂಟುತ್ತ ಓಡಾಡಿದಾಗ.

ಮೂರನೆಯ ಬಾರಿ,
ಸುಲಭ ಮತ್ತು ಕಠಿಣಗಳಲ್ಲಿ, ಸುಲಭವನ್ನು ಆಯ್ಕೆ ಮಾಡಿಕೊಂಡಾಗ.

ನಾಲ್ಕನೇಯ ಬಾರಿ,
ತಾನು ತಪ್ಪು ಮಾಡಿ, ಎಲ್ಲರೂ ತಪ್ಪು ಮಾಡುವವರೇ ಎಂದು
ಸಮಾಧಾನ ಮಾಡಿಕೊಂಡಾಗ.

ಐದನೇಯ ಬಾರಿ,
ತನ್ನ ದೌರ್ಬಲ್ಯವನ್ನ ಸಹನೆಯ ಮುಖವಾಡದಲ್ಲಿ ಮುಚ್ಚಿ
ಆ ಸಹನೆಯನ್ನು ತನ್ನ ಶಕ್ತಿ ಎಂದು ಸಾರಿದಾಗ.

ಆರನೇಯ ಬಾರಿ,
ಮುಖದ ಕುರೂಪದ ಬಗ್ಗೆ ಅಪಹಾಸ್ಯ ಮಾಡಿ
ಆ ಅಪಹಾಸ್ಯವೂ ತನ್ನ ಮುಖವಾಡವೇ ಎನ್ನುವುದ
ಅರಿಯದೇ ಹೋದಾಗ.

ಮತ್ತು ಏಳನೇಯ ಬಾರಿ,
ಹೊಗಳಿಕೆಯ ಹಾಡೊಂದನ್ನ ಹಾಡಿದಾಗ ಮತ್ತು
ಹಾಗೆ ಹಾಡುವುದು ಸದ್ಗುಣ ಎಂದು ತಿಳಿದುಕೊಂಡಾಗ.

Leave a Reply