ಸಕಲ ಪಾಪಗಳನ್ನು ನಿವಾರಿಸುವ ಶ್ರೀಕೃಷ್ಣನ ದ್ವಾದಶ ನಾಮ : ನಿತ್ಯಪಾಠ

ಭಗವಾನ್ ಶ್ರೀ ಕೃಷ್ಣನು ತನ್ನ ಮಿತ್ರನೂ ಭಕ್ತನೂ ಆದ ಅರ್ಜುನನಿಗೆ ಸಕಲ ಪಾಪಹರವಾದ ತನ್ನ ಹನ್ನೆರಡು ಹೆಸರುಗಳನ್ನು ಬೋಧಿಸುತ್ತಾನೆ. ಕೃಷ್ಣಾರ್ಜುನ ಸಂವಾದದ ಈ ಭಾಗವು ಮಹಾಭಾರತದ ಅರಣ್ಯಪರ್ವದಲ್ಲಿ ಬರುತ್ತದೆ. ಈ ದ್ವಾದಶನಾಮ ಪಠಣದಿಂದ ಎಲ್ಲ ಪಾಪಗಳೂ ನಿವಾರಣೆಯಾಗಿ ನಮ್ಮ ಬದುಕು ಸುಖಶಾಂತಿಯಿಂದ ತುಂಬಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಶೃಣುಧ್ವಂ ಮುನಯಃ ಸರ್ವೇ ಗೋಪಾಲಸ್ಯ ಮಹಾತ್ಮನಃ |
ಅನಂತಸ್ಯಾಪ್ರಮೇಯಸ್ಯ ನಾಮದ್ವಾದಶಕಂ ಸ್ತವಮ್ ||
ಅರ್ಜುನಾಯ ಪುರಾ ಗೀತಂ ಗೋಪಾಲೇನ ಮಹಾತ್ಮನಾ |
ದ್ವಾರಕಾಯಾಂ ಪ್ರಾರ್ಥಯತೇ ಯಶೋದಾಯಾಶ್ಚ ಸನ್ನಿಧೌ ||
ಮಹಾತ್ಮರಲ್ಲಿ ಮಹಾತ್ಮನೂ ಅಪ್ರಮೇಯನೂ ಅನಂತನೂ ಆಗಿರುವ ಭಗವಾನ್ ಶ್ರೀಕೃಷ್ಣನೊಂದಿಗೆ ಅರ್ಜುನನು ಸಂವಾದಿಸುತ್ತಿದ್ದನು. ಈ ಸಂದರ್ಭದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಸರ್ವಪಾಪಗಳನ್ನು ಪರಿಹರಿಸುವ ತನ್ನ ಹನ್ನೆರಡು ಹೆಸರುಗಳನ್ನೂ ಅವುಗಳ ಮಹಿಮೆಯನ್ನೂ ವಿವರಿಸಿದನು.

ಶ್ರೀಕೃಷ್ಣ ಉವಾಚ ~
ಕಿಂ ತೇ ನಾಮಸಹಸ್ರೇಣ ವಿಜ್ಞಾತೇನ ತವಾರ್ಜುನ |
ಯಾನಿ ನಾಮಾನಿ ವಿಜ್ಞಾಯ ಸರ್ವಪಾಪೈಃ ಪ್ರಮುಚ್ಯತೇ |
ತಾನಿ ನಾಮಾನಿ ವಕ್ಷ್ಯಾಮಿ ಶ್ರುಣುಷ್ವ ತ್ವಂ ಮಹಾಮತೇ || 1 ||
ಶ್ರೀಕೃಷ್ಣ ಹೇಳುತ್ತಿದ್ದಾನೆ; ಎಲೈ ಅರ್ಜುನ!
ಯಾವ ಹೆಸರುಗಳ ಮಹಿಮೆಯನ್ನು ಅರಿಯುವುದರಿಂದ ಸಕಲ ಪಾಪಗಳೂ ದೂರವಾಗುವವೋ ಅವನ್ನು ಹೇಳುತ್ತೇನೆ ಕೇಳುವಂಥವನಾಗು.

ಪ್ರಥಮಂ ತು ಹರಿಂ ವಿದ್ಯಾತ್ ದ್ವಿತೀಯಂ ಕೇಶವಂ ತಥಾ |
ತೃತೀಯಂ ಪದ್ಮನಾಭಂ ತು ಚತುರ್ಥಂ ವಾಮನಂ ತಥಾ || 2 ||
ಮೊದಲನೆಯದಾಗಿ ‘ಹರಿ’, ಎರಡನೆಯದು ಕೇಶವ; ಮೂರನೆಯದು ಪದ್ಮನಾಭ, ನಾಲ್ಕನೆಯದು ವಾಮನ.

ಪಂಚಮಂ ವೇದಗರ್ಭಂ ಚ ಷಷ್ಠಂ ತು ಮಧುಸೂದನಮ್ |
ಸಪ್ತಮಂ ವಾಸುದೇವಂ ಚ ವರಾಹಂ ಚಾಷ್ಟಮಂ ತಥಾ || 3 ||
ಐದನೆಯದು ವೇದಗರ್ಭ, ಆರನೆಯದು ಮಧುಸೂದನ. ಏಳನೆಯದು ವಾಸುದೇವ, ಎಂಟನೆಯದು ವರಾಹ.

ನವಮಂ ಪುಂಡರೀಕಾಕ್ಷಂ ದಶಮಂ ತು ಜನಾರ್ದನಮ್ |
ಕೃಷ್ಣಮೇಕಾದಶಂ ಪ್ರೋಕ್ತಂ ದ್ವಾದಶಂ ಶ್ರೀಧರಂ ತಥಾ ||4 ||
ಒಂಭತ್ತನೆಯದು ಪುಂಡರೀಕಾಕ್ಷ, ಹತ್ತನೆಯದು ಜನಾರ್ದನ. ಹನ್ನೊಂದನೆಯದು ಕೃಷ್ಣ, ಹನ್ನೆರಡನೆಯದು ಶ್ರೀಧರ.

ಏತದ್ದ್ವಾದಶ ನಾಮಾನಿ ಮಯಾ ಪ್ರೋಕ್ತಾನಿ ಫಲ್ಗುನ |
ಕಾಲತ್ರಯೇ ಪಠೇದ್ಯಸ್ತು ತಸ್ಯ ಪುಣ್ಯಫಲಂ ಶೃಣು || 5 ||

ಫಲ್ಗುಣ! ನನ್ನಿಂದ ಹೇಳಲ್ಪಟ್ಟ ಈ ಹನ್ನೆರಡು ಹೆಸರುಗಳನ್ನು ಯಾರು ದಿನದ ಮೂರು ಹೊತ್ತೂ ಪಠಿಸುತ್ತಾರೋ, ಅವರಿಗೆ ಪುಣ್ಯಫಲಗಳು ಲಭಿಸುವವು.
ಚಾಂದ್ರಾಯಣಸಹಸ್ರಸ್ಯ ಕನ್ಯಾದಾನಶತಸ್ಯ ಚ |
ಅಶ್ವಮೇಧಸಹಸ್ರಸ್ಯ ಫಲಮಾಪ್ನೋತಿ ಮಾನವಃ ||6 ||

ಈ ಹನ್ನೆರಡು ನಾಮಗಳ ಪಠಣದಿಂದ ಸಾವಿರ ಅಶ್ವಮೇಧ ಯಜ್ಞ ನಡೆಸಿದಷ್ಟು ಪುಣ್ಯ ದೊರೆತು, ಇನ್ನೂ ಅನೇಕ ಪ್ರಯೋಜನಗಳು ಉಂಟಾಗುವವು.

|| ಇತಿ ಶ್ರೀಮಹಾಭಾರತೇ ಅರಣ್ಯಪರ್ವಣಿ ಶ್ರೀಕೃಷ್ಣಾರ್ಜುನಸಂವಾದೇ ಶ್ರೀಕೃಷ್ಣದ್ವಾದಶನಾಮಸ್ತೋತ್ರಮ್ ||
|| ಇಲ್ಲಿಗೆ ಶ್ರೀಕೃಷ್ಣನು ಅರ್ಜುನನಿಗೆ ತನ್ನ ಹನ್ನೆರಡು ಹೆಸರುಗಳನ್ನು ಬೋಧಿಸಿದ ಕೃಷ್ಣಾರ್ಜುನ ಸಂವಾದ ಭಾಗವು ಮುಕ್ತಾಯಗೊಂಡಿತು ||

Leave a Reply