ಕಠಿಣ ಪರಿಸ್ಥಿತಿಯಲ್ಲೂ ಸ್ಥಿರವಾಗಿರು : ಚಾಣಕ್ಯನೀತಿ

ಪ್ರಲಯೇ ಭಿನ್ನ ಮರ್ಯಾದಾ ಭವನ್ತಿ ಕಿಲ ಸಾಗರಾಃ | ಸಾಗರಾಃ ಭೇದಮಿಚ್ಛನ್ತಿ ಪ್ರಲಯೋ ಅಪಿ ನ ಸಾಧವಃ ||ಚಾಣಕ್ಯನೀತಿ||

“ಪ್ರಳಯ ಕಾಲದಲ್ಲಿ ಸಾಗರಗಳೂ ತಮ್ಮ ದಂಡೆ ಮೀರಿ ಹರೆಯುತ್ತವೆ. ಆದರೆ ಸತ್ಪುರುಷರು ಮಾತ್ರ ಎಂಥಾ ಪರಿಸ್ಥಿತಿಯಲ್ಲೂ ಬದಲಾಗುವುದಿಲ್ಲ” ಅನ್ನುತ್ತಾನೆ ಚಾಣಕ್ಯ.

ನಾವು ಬದುಕಿನ ಸಲುವಾಗಿ ಎಂದು ನೆವ ಹೇಳುತ್ತಾ ಒಂದಲ್ಲ ಒಂದು ಬಗೆಯಲ್ಲಿ ರಾಜಿ ಮಾಡಿಕೊಳ್ಳುತ್ತಲೆ ಇರುತ್ತೇವೆ. ಹೀಗೆ ಚೂರುಚೂರೆ ಹೊಂದಾಣಿಕೆ ಮಾಡಿಕೊಳ್ಳುತ್ತ ಕೊನೆಗೆ ನಾವು ನಾವಾಗಿ ಉಳಿದಿರುವುದೇ ಇಲ್ಲ!

ಭಗವಂತ ನಮ್ಮೆಲ್ಲರನ್ನೂ ವಿಭಿನ್ನವಾಗಿ ಸೃಷ್ಠಿಸಿದ್ದಾನೆ. ನಾವು ಪ್ರತಿಯೊಬ್ಬರಿಗೂ ನಮ್ಮದೇ ಅಸ್ತಿತ್ವವಿದೆ. ನಮ್ಮ ಮೂಲ ಸ್ವಭಾವದಲ್ಲಿ ಬದಲಾವಣೆ ಅಥವಾ ಹೊಂದಾಣಿಕೆ ನಮ್ಮ ಅಸ್ತಿತ್ವವನ್ನು ನಿರಾಕರಿಸಿಬಿಡುತ್ತದೆ. ನಾವು ಬೇರೆ ಯಾರದೋ ಬದುಕನ್ನು ಬದುಕುವುದಾದರೆ ನಾವೇಕೆ ಬದುಕು ನಡೆಸಬೇಕು? ನಾವು ನಮ್ಮ ಬದುಕನ್ನು ನಮ್ಮ ಬಗೆಯಲ್ಲಿ ನಡೆಸಬೇಕು.

ಇದು ಸಜ್ಜನಿಕೆ. ಇದು ತಿಳುವಳಿಕೆ. ಇದಕ್ಕೆ ಬೇಕಿರುವುದು ಬಲವಲ್ಲ, ಬುದ್ಧಿ. ಇಂತಹ ಬುದ್ಧಿಗಾಗಿ ಪ್ರಾರ್ಥನೆ ಮಾಡೋಣ. ಇದನ್ನು ಬೆಳೆಸಿಕೊಳ್ಳಲು ಪ್ರಯತ್ನ ಪಡೋಣ – ಇದು ಸುಭಾಷಿತದ ಆಶಯ.

Leave a Reply