ರಥ ಸಪ್ತಮಿ ಆಚರಣೆ ಮಾಡುವುದು ಹೇಗೆ?

ಇಂದು (ಫೆಬ್ರವರಿ 19) ರಥಸಪ್ತಮಿ. ರಥ ಸಪ್ತಮಿ ಆಚರಣೆಯ ವಿಧಿ ವಿಧಾನಗಳನ್ನು ಇಲ್ಲಿ ಸರಳವಾಗಿ ನೀಡಲಾಗಿದೆ.

ರಥ ಸಪ್ತಮಿ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮೀ ದಿನದಂದು ಆಚರಿಸುತ್ತಾರೆ. ಇದು ಸೂರ್ಯ ದೇವನ ಹಬ್ಬ ಈ ದಿನ ಅರುಣೋದಯದ ಕಾಲದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಪೂಜೆ ಮಾಡುತ್ತಾರೆ. ಸ್ನಾನ ಮಾಡುವಾಗ ಎಕ್ಕದ ಗಿಡದ ಏಳು ಎಲೆಗಳನ್ನು ನೆತ್ತಿ, ಭುಜ, ತೊಡೆಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡುತ್ತಾರೆ. ಸ್ನಾನ ಮಾಡುವಾಗ ಹೇಳಬೇಕಾದ ಶ್ಲೋಕ: “ಸಪ್ತ ಸಪ್ತ ಮಹಾ ಸಪ್ತ, ಸಪ್ತ ದ್ವೀಪ ವಸುಂಧರಾ, ಸಪ್ತಾರ್ಕ ಪ್ರಣಮಾಧ್ಯಾಯ ಸಪ್ತಮೀ ರಥಸಪ್ತಮೀ”

ಸ್ನಾನದ ನಂತರ ಸೂರ್ಯನಿಗೆ ಅಷ್ಟೋತ್ತರ, ನೈವೇದ್ಯದಿಂದ ಪೂಜೆ ಮಾಡುತ್ತಾರೆ. ಸೂರ್ಯನಿಗೆ ಪ್ರಿಯವಾದ ಗೋಧಿ/ರವೆ ಪಾಯಸದ ನೈವೇದ್ಯ ಈ ದಿನದ ವಿಶೇಷ,

ಈ ದಿನ ಪೂಜೆ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡಿದಲ್ಲಿ ಎಲ್ಲಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆ. ರಥಸಪ್ತಮಿ ಬಹಳ ಶುಭಕರವಾದ ದಿನ ಎಂಬ ನಂಬಿಕೆಯಿದ್ದು ಈ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಸೂರ್ಯನು ರಥವನ್ನೇರಿ ಮೇಲೆ ಹೋದಂತೆ ನಮ್ಮ ಕಾರ್ಯಗಳಲ್ಲಿ, ಬಾಳಲ್ಲಿ ನಾವೂ ಯಶಸ್ಸು ಪಡೆಯುತ್ತೇವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಪದ್ಧತಿ ಬೆಳೆದುಬಂದಿದೆ.

ರಥಸಪ್ತಮಿಯಂದು ಮನೆಯ ಮುಂದೆ ಅಥವಾ ತುಳಸಿ ಕಟ್ಟೆಯ ಮುಂದೆ ರಂಗವಲ್ಲಿಯಿಂದ ರಥ ಬಿಡಿಸಿ ರಕ್ತ ಚಂದನದಿಂದ ಸಪ್ತಾಶ್ವ ರಥಾರೂಢನಾದ ಸೂರ್ಯ ಪ್ರತಿಮೆ ಚಿತ್ರಿಸಿ ಗಂಧ, ಪುಷ್ಪಾಕ್ಷತೆ, ಧೂಪ, ದೀಪ, ನೈವೇದ್ಯಗಳಿಂದ ಪೂಜಿಸಿ

ಮಣ್ಣಿನ ಕುಡಿಕೆಯಲ್ಲಿ ಹಾಲು ಹಾಕಿ ಸೂರ್ಯ ಪ್ರಕಾಶದ ಉಷ್ಣತೆಯಿಂದ ಇಲ್ಲವೆ ಕುರುಳು ಬೆಂಕಿಯಿಂದ ಉಕ್ಕಿಸುವ ವಾಡಿಕೆಯೂ ಇದೆ.

Leave a Reply