ಮೂಲ : ಇಬ್ನ್ ಅರಬಿ | ಕನ್ನಡಕ್ಕೆ: ಸುನೈಫ್
ನನ್ನ ಹೃದಯಕೆ
ಹಲವು ರೂಪಗಳು;
ಚಿಗರೆಗಳ ಬಯಲು
ಸಂತರ ಕುಟೀರ
ಮೂರ್ತಿಗಳಿಗೆ ದೇವಾಲಯ
ಕಾಬಾವಿದು ತೀರ್ಥಯಾತ್ರಿಕರಿಗೆ
ತೌರಾತಿನ ಫಲಕಗಳು
ಕುರಾನಿನ ಪುಟಗಳು
ಎಲ್ಲವೂ ನನ್ನ ಹೃದಯ
ಮತ್ತು,
ಪ್ರೇಮವೇ ನನ್ನ ನಂಬಿಕೆ
ಪ್ರೇಮದ ಕಾರವಾನು ಹೊರಟ ದಿಕ್ಕು
ನನಗೆ ದಾರಿ ಮತ್ತು ಧರ್ಮ