ಪ್ರೇಮವೆಂದರೆ ತೀರ ಕಾಣದ ಕಡಲು; ರಮದಾನ್ ಕಾವ್ಯವ್ರತ | ಸೂಫಿ Corner

ಮೂಲ ~ ರಾಬಿಯಾ ಬಾಲ್ಖಿ | ಕನ್ನಡಕ್ಕೆ: ಸುನೈಫ್

ಪ್ರೇಮ‌ ಹೆಣೆದ ಬಲೆಗೆ
ಸಿಕ್ಕ ಮಿಗವು ನಾನು
ಪಾರಾಗುವ ಯತ್ನಗಳೆಲ್ಲ
ಸಮಯ ಹಾಳು

ಬಿಸಿರಕ್ತದ ಓಟದಲ್ಲಿ
ನನಗೇನು ತಿಳಿದಿತ್ತು;
ಮೂಗುದಾರ ಎಳೆದಷ್ಟೂ
ಚಲನೆ ನಿಧಾನವಾಗುವುದೆಂದು!

ಪ್ರೇಮವೆಂದರೆ ತೀರ
ಕಾಣದ ಕಡಲು
ಬುದ್ದಿವಂತ ಎಂದೂ
ಈಜಲಾರ ಅದನ್ನು

ಪ್ರೇಮಿಗೆ ನಿಯ್ಯತ್ತಿರಬೇಕು
ಕೊನೆಯ ತನಕ
ಮತ್ತು ಎದುರಿಸಬೇಕು
ಬದುಕಿನ ಕೆಟ್ಟ ಚಾಳಿಗಳನ್ನು

ಭೀಕರತೆಗಳು ಎದುರಾದರೆ
ನಯವಾಗಿಸಬೇಕು ಕಲ್ಪನೆಯಲ್ಲಿ
ಕುಡಿಯಬೇಕು ವಿಷವನ್ನು
ಜೇನಿನಂತೆ ಸವಿಯುತ್ತಾ

Leave a Reply