ಈ ದಿನದ ಸುಭಾಷಿತ, ಮಹಾಭಾರತದಿಂದ

ಇಂದಿನ ಸುಭಾಷಿತ…

ಸ್ಮರಂತಿ ಸುಕೃತಾನ್ಯೇವ ವೈರಾಣಿ ಕೃತಾನ್ಯಪಿ।
ಸಂತಃ ಪರಾರ್ಥಂ ಕುರ್ವಾಣಾ ನಾವೇಕ್ಷಂತೇ ಪ್ರತಿಕ್ರಿಯಾಮ್॥
ಮಹಾಭಾರತ । ಸಭಾಪರ್ವ 73:7

ಅರ್ಥ: ಸಜ್ಜನರು ಯಾವಾಗಲೂ ಒಳ್ಳೆಯದನ್ನು ಮಾತ್ರ ಸ್ಮರಿಸುತ್ತಾರೆ, ತಮಗೆ ಕೆಟ್ಟದನ್ನು ಮಾಡಿದವರನ್ನು ಮರೆತುಬಿಡುತ್ತಾರೆ. ಅವರು ಇನ್ನೊಬ್ಬರಿಗೆ ಹಿತ ಬಯಸಿ ನಡೆದುಕೊಳ್ಳುತ್ತಾರೆಯೇ ಹೊರತು ಬೇರೆಯವರು ತಮಗೆ ಪ್ರತ್ಯುಪಕಾರ ಮಾಡಲಿ ಎಂದು ನಿರೀಕ್ಷಿಸುವುದಿಲ್ಲ, ಪರೋಪಕಾರ ಅವರಿಗೆ ಸ್ವಭಾವಗತ.

ತಾತ್ಪರ್ಯ: ಸಜ್ಜನರು ಯಾರು ಏನು ಕೆಡುಕು ಮಾಡಿದರೂ ಮರೆಯುತ್ತಾರೆ ಅಂದರೆ ಅರ್ಥ ನಾವು ಅಂಥವರಿಗೆ ಏನು ಬೇಕಾದರೂ ಮಾಡಬಹುದು ಎಂದಲ್ಲ! ಮತ್ತೊಬ್ಬರು ನಮಗೆ ಕೆಡುಕು ಮಾಡಿದರೂ ಅದನ್ನು ಕ್ಷಮಿಸಿ ಮರೆತುಬಿಡುವ ಸಜ್ಜನಿಕೆ ನಾವು ಬೆಳೆಸಿಕೊಳ್ಳಬೇಕು ಎಂದು!! ಕಹಿಯನ್ನು ಮನಸಿನಲ್ಲಿ ಇಟ್ಟುಕೊಂಡಷ್ಟೂ ನಮ್ಮ ಬದುಕಿನ ಸ್ವಾದವೇ ಕೆಡುವುದು. ಆದ್ದರಿಂದ ಸವಿಯಾದ ನೆನಪುಗಳನ್ನಷ್ಟೆ ಉಳಿಸಿಕೊಂಡು, ಹಿತ ಉಂಟುಮಾಡಿದವರನ್ನಷ್ಟೆ ನೆನೆಯುತ್ತಾ, ನಾವೂ ಮತ್ತೊಬ್ಬರಿಂದ ಯಾವ ಅಪೇಕ್ಷೆಯನ್ನು ಇಟ್ಟುಕೊಳ್ಳದೆ ಕೈಲಾದ ಸಹಾಯ ಮಾಡಿದರೆ ಸಾಕು, ಜೀವನ ಯಾವ ಹೊರೆಯೂ ಇಲ್ಲದೆ ಸುಗಮವಾಗಿ ಸಾಗಲಿಕ್ಕೆ. ಆದ್ದರಿಂದ ಕಹಿಯನ್ನು ಅಲ್ಲಲ್ಲೇಬಿಟ್ಟು ಸಜ್ಜನಿಕೆಯ ಸವಿ ಮೈಗೂಡಿಸಿಕೊಂಡು ಮುನ್ನಡೆಯುವುದು ಉತ್ತಮ.

Leave a Reply