ಪ್ರಜ್ಞಾವಂತಿಕೆ ಮುಖ್ಯ : ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಅದೃಢಂ ಚ ಹತಂ ಜ್ಞಾನಂ
ಪ್ರಮಾದೇನ ಹತಂ ಶ್ರುತಮ್ |
ಸಂದಿಗ್ಧೋ ಹಿ ಹತೋ ಮಂತ್ರೋ
ವ್ಯಗ್ರಚಿತ್ತೋ ಹತೋ ಜಪಃ ||

ಅರ್ಥ: ದೃಢವಲ್ಲದ ಜ್ಞಾನ ಪ್ರಯೋಜನವಿಲ್ಲ. ಕಲಿತ ವಿದ್ಯೆ, ಗಳಿಸಿದ ಕೀರ್ತಿಯೂ ನಮ್ಮ ತಪ್ಪಿನಿಂದ ಹಾಳಾಗುತ್ತದೆ. ಉಪದೇಶ ಪಡೆದ ಮಂತ್ರದಲ್ಲಿ ಸಂದೇಹ – ಅಪನಂಬಿಕೆ ಇದ್ದು, ಶ್ರದ್ಧೆ ಇಲ್ಲದಿದ್ದರೆ, ಮಂತ್ರವೂ ಸಿದ್ಧಿಸುವುದಿಲ್ಲ. ಹಾಗೆಯೇ, ಕಳವಳ ಕೋಪದಿಂದ ಕೂಡಿದ ಮನಸ್ಸಿನಿಂದ ಮಾಡುವ ಜಪವೂ ಫಲಿಸುವುದು. (ಆದ್ದರಿಂದ ಪ್ರತಿಯೊಂದು ಸಂದರ್ಭದಲ್ಲೂ ಎಚ್ಚರಿಕೆ ಹೊಂದಿರುವುದು ಬಹಳ ಮುಖ್ಯ. ಪ್ರಜ್ಞಾವಂತಿಕೆ ಮುಖ್ಯ)

Leave a Reply