ಕುರುಡರು, ಕಿವುಡರು, ಮೂಕರು ಯಾರು!?: ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಕೋ ಅಂಧೋ ಯೋ ಅಕಾರ್ಯರತಃ ಕೋ ಬಧಿರೋ ಯೋ ಹಿತಾನಿ ನ ಶೃಣೋತಿ।
ಕೋ ಮೂಕೋ ಯಃ ಕಾಲೇ ಪ್ರಿಯಾಣಿ ವಕ್ತುಂ ನ ಜಾನಾತಿ॥ ನೀತಿದ್ವಿಷಷ್ಟಿಕಾ – 33 ॥

ಅರ್ಥ: ಕುರುಡರು ಯಾರು? ಕೆಟ್ಟ ಕೆಲಸಗಳನ್ನು ಮಾಡುವವರು. ಕಿವುಡರು ಯಾರು? ಹಿತವಚನವನ್ನು ಕೇಳಿಸಿಕೊಳ್ಳದವರು. ಮೂಕರು ಯಾರು? ಸರಿಯಾದ ಸಮಯಕ್ಕೆ ಮಾತಾಡಲು ಬರದೆ ಇರುವವರು!

ತಾತ್ಪರ್ಯ: ಮುಂದಿನ ದುಷ್ಪರಿಣಾಮಗಳನ್ನು ಮುಂಗಾಣದೆ ಇರುವವರು ಕುರುಡರು. ಯಾರು ಒಳ್ಳೆಯ ಮಾತುಗಳನ್ನು, ಹಿತವಚನಗಳನ್ನು ಕೇಳಿಸಿಕೊಂಡೂ ಕೇಳೀಸಿಕೊಳ್ಳದಂತೆ ಆಡುತ್ತಾರೋ ಅವರೇ ಕಿವುಡರು. ಯಾರಿಗೆ ಸಮಯಕ್ಕೆ ಸರಿಯಾಗಿ ಮಾತಾಡಲು, ಸರಿಯಾದ ಸಮಯದಲ್ಲಿ ಸುಮ್ಮನಿರಲು ಬರುವುದಿಲ್ಲವೋ ಅವರು ಮೂಕರು.

Leave a Reply