ಇಂದಿನ ಸುಭಾಷಿತ…
ಅಸ್ತೇಯಪ್ರತಿಷ್ಠಾಯಾಂ ಸರ್ವರತ್ನೋಪಸ್ಥಾನಮ್।।
ಪತಂಜಲಿ ಯೋಗ ಸೂತ್ರ । 2.37
ಅರ್ಥ: ಕಳ್ಳತನ ಎಲ್ಲಕ್ಕಿಂತ ದೊಡ್ಡ ಅಪರಾಧ. ಆದ್ದರಿಂದ ಕದಿಯದೆ ಇರುವುದು ಎಲ್ಲಕ್ಕಿಂತ ಉನ್ನತವಾದ ಮೌಲ್ಯವಾಗಿದೆ.
ತಾತ್ಪರ್ಯ: ಇಲ್ಲಿ ಕದಿಯುವುದು ಅಂದರೆ ಕೇವಲ ಐಹಿಕ ವಸ್ತುಗಳನ್ನು ಕದಿಯುವುದು ಎಂದಲ್ಲ. ಮನುಷ್ಯರ ಪ್ರತಿಯೊಂದು ಅಪರಾಧವೂ ಕಳ್ಳತನವೇ ಆಗಿದೆ. ಕೊಲೆ ಕೂಡಾ ಕಳ್ಳತನವೇ. ಕೊಲೆ ಮಾಡುವ ಮೂಲಕ ವ್ಯಕ್ತಿ ಮತ್ತೊಬ್ಬರ ಬದುಕಿನ ಹಕ್ಕನ್ನು ಕಸಿದಿರುತ್ತಾನೆ, ಸಂಬಂಧಿತರ ಸುಖವನ್ನು ಕದ್ದಿರುತ್ತಾನೆ. ಸುಳ್ಳು ಹೇಳುವ ವ್ಯಕ್ತಿ ಮತ್ತೊಬ್ಬರ ವಿಶ್ವಾಸವನ್ನು ಕಸಿದಿರುತ್ತಾನೆ. ಮೋಸ ಮಾಡುವ ವ್ಯಕ್ತಿ ಮತ್ತೊಬ್ಬರ ನಂಬಿಕೆಯನ್ನು ಕಸಿದಿರುತ್ತಾನೆ. ಆದ್ದರಿಂದ ಎಲ್ಲ ಅಪರಾಧಗಳ ಸಾರವೇ ಆಗಿರುವ ಯಾವ ಬಗೆಯ ಕಳ್ಳತನಕ್ಕೂ ನಮ್ಮ ಮನಸ್ಸು ಮುಂದಾಗಬಾರದು. ಈ ನಿಟ್ಟಿನಲ್ಲಿ ನಾವು ಸದಾ ಜಾಗೃತರಾಗಿರಬೇಕು.