ಕ್ರಿಯಾಶೀಲ ಬೌದ್ಧೀಯತೆ

ಧ್ಯಾನ ಎಂದರೆ ಕೇವಲ ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ, ನಿಮ್ಮೊಳಗೆ ಹುಟ್ಟುತ್ತಿರುವ ಭಾವನೆಗಳ ಬಗ್ಗೆ ಅರಿವು ಹೊಂದುವುದಲ್ಲ, ನಿಮ್ಮ ಸುತ್ತಲಿನ ವಾತಾವರಣದ ಬಗ್ಗೆಯೂ ಅರಿವನ್ನು ಹೊಂದುವುದು… | Tich Nhat Hanh; ಕನ್ನಡಕ್ಕೆ: ಚಿದಂಬರ ನರೇಂದ್ರ

ಕೊನೆಯಬಾರಿ ನಾನು ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಭೇಟಿ ಮಾಡಿದ್ದು ಜಿನೀವಾದಲ್ಲಿ Peace on Earth ಅನ್ನೋ ಶಾಂತಿ ಸಮ್ಮೇಳನದಲ್ಲಿ. ಅಮೇರಿಕೆಯ ಹಿಂಸೆಯ ವಿರುದ್ಧ ತಮ್ಮ ಜೊತೆ ಬಹಿರಂಗವಾಗಿ ಕೈಗೂಡಿಸಿದ್ದಕ್ಕಾಗಿ ವಿಯೆಟ್ನಾಂ ನ ಜನತೆ ನಿಮಗೆ ಕೃತಜ್ಞರಾಗಿದ್ದಾರೆ ಎಂದು ನಾನು ಕಿಂಗ್ ಅವರಿಗೆ ಹೇಳುವುದು ಸಾಧ್ಯವಾಯಿತು. ನಮ್ಮ ಜೊತೆ ದನಿಗೂಡಿಸುತ್ತ ತಮ್ಮ ಜನರ ಪರವಾಗಿಯೂ ಅಪಾರ ಕಳಕಳಿಯಿಂದ ದನಿ ಎತ್ತುತ್ತಿರುವ ಕಿಂಗ್ ಅವರನ್ನ ವಿಯೆಟ್ನಾಂನ ಜನ ಬೋಧಿಸತ್ವ ಎಂದೇ ಗೌರವಿಸುತ್ತಾರೆ. ಆದರೆ ಕೇವಲ ಮೂರು ತಿಂಗಳ ನಂತರ ಅವರ ಹತ್ಯೆಯಾಯಿತು.

ಅರವತ್ತರ ದಶಕದಲ್ಲಿ ಜನ ತುಂಬ ಅಂತಃಕರಣದಿಂದಲೇ ನಮಗೆ ಸಹಾಯ ಮಾಡಿದರು ವಿಯೆಟ್ನಾಂದಲ್ಲಿನ ಅಮೇರಿಕೆಯ ದಬ್ಬಾಳಿಕೆಯ ಸ್ಥಿತಿಯನ್ನು ಕೊನೆಗೊಳಿಸಲು. ಆದರೆ ಅಮೇರಿಕೆಯಲ್ಲಿನ ಶಾಂತಿ ಚಳುವಳಿಗೆ ಸಾಕಷ್ಟು ಸಹನೆ ಇರಲಿಲ್ಲ. ತಮ್ಮ ನಿರೀಕ್ಷೆಯಂತೆ ಚಳುವಳಿ ಫಲ ನೀಡದಿದ್ದಾಗ ಜನ ಸಿಟ್ಟಾದರು ಹಿಂಸೆಯನ್ನು ಕೈಗೆತ್ತಿಕೊಂಡರು ಹಾಗಾಗಿ ಈ ಶಾಂತಿ ಚಳುವಳಿ ಹಿಂಸೆಗೆ ಸಾಕ್ಷಿಯಾಗಬೇಕಾಯಿತು.

ಅಹಿಂಸೆ ಮತ್ತು ಸಹಾನುಭೂತಿ ಯಾವುದೇ ಶಾಂತಿ ಚಳುವಳಿಯ ಮೂಲ ಆಧಾರಗಳು. ಯಾವಾಗ ನಿಮ್ಮೊಳಗೆ ಶಾಂತಿ ನೆಲೆಯಾಗಿಲ್ಲವೋ, ಯಾವಾಗ ಪೂರ್ಣ ತಿಳುವಳಿಕೆ, ಪ್ರೀತಿ, ಅಂತಃಕರಣ ನಿಮ್ಮ ಭಾಗವಾಗಿಲ್ಲವೋ ಆಗ ನಿಮ್ಮ ಯಾವುದೇ ಕ್ರಿಯೆ ಶಾಂತಿಯನ್ನು ಸ್ಥಾಪಿಸುವಲ್ಲಿ ಸಹಕಾರಿಯಾಗುವುದಿಲ್ಲ. ಶಾಂತಿಯ ಸ್ಥಾಪನೆ ಮೊದಲು ಶುರುವಾಗಬೇಕಿದ್ದು ನಮ್ಮೊಳಗಿಂದ ಎನ್ನುವುದು ಎಲ್ಲರಿಗೂ ಗೊತ್ತು ಆದರೆ ನಮ್ಮೊಳಗೆ ಶಾಂತಿಯನ್ನು ಹೊಂದುವುದು ಹೇಗೆ ಎನ್ನುವುದರ ಬಗ್ಗೆ ಮಾತ್ರ ಎಲ್ಲರಿಗೂ ಗೊಂದಲ.

ಕ್ರಿಯಾಶೀಲ Engaged Buddhism ಮಾತ್ರ ಇದಕ್ಕೆ ಪರಿಹಾರವಾಗಬಲ್ಲದು. ತಲೆ ಮೇಲೆ ಬಾಂಬ್ ಗಳು ಬೀಳುತ್ತಿರುವ ಹೊತ್ತಿನಲ್ಲಿ ಮೆಡಿಟೇಶನ್ ಹಾಲ್ ಲ್ಲಿ ಸುಮ್ಮನೇ ಧ್ಯಾನಿಸುತ್ತ ಕೂಡುವುದು ಸಾಧ್ಯವಿಲ್ಲ. ಧ್ಯಾನ ಎಂದರೆ ಕೇವಲ ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ, ನಿಮ್ಮೊಳಗೆ ಹುಟ್ಟುತ್ತಿರುವ ಭಾವನೆಗಳ ಬಗ್ಗೆ ಅರಿವು ಹೊಂದುವುದಲ್ಲ, ನಿಮ್ಮ ಸುತ್ತಲಿನ ವಾತಾವರಣದ ಬಗ್ಗೆಯೂ ಅರಿವನ್ನು ಹೊಂದುವುದು.

ನನ್ನ ಬೌದ್ಧ ಕಲಿಕೆಯ ಆರಂಭದಲ್ಲಿ ನಾವು ಯುವ ಸನ್ಯಾಸಿಗಳು ವಿಯೆಟ್ನಾಂ ದಲ್ಲಿ ನಡೆಯುತ್ತಿದ್ದ ಯುದ್ಧದ ಸ್ಥಿತಿ ಕಾರಣವಾಗಿ ಜನರು ಅನುಭವಿಸುತ್ತಿದ್ದ ಅಪಾರ ನೋವು, ತಲ್ಲಣಗಳಿಗೆ ಸಾಕ್ಷಿಯಾಗಿದ್ದೆವು. ಆದ್ದರಿಂದ ನಾವು ಜನರಲ್ಲಿ ಶಾಂತಿ ನೆಲೆಯಾಗುವಂತೆ ಬುದ್ಧಿಸಂ ನ ಹೇಗೆ ಆಚರಿಸುವುದು ಎನ್ನುವ ಪ್ರಯತ್ನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡೆವು. ಆದರೆ ಈ ಪ್ರಯತ್ನ ಅಷ್ಟು ಸುಲಭದ್ದಾಗಿರಲಿಲ್ಲ ಏಕೆಂದರೆ ಸಂಪ್ರದಾಯಗಳು ಅಷ್ಟು ಸುಲಭವಾಗಿ Engaged Buddhism ಗೆ ಅವಕಾಶ ಮಾಡಿಕೊಡುವುದಿಲ್ಲ. ಆಗ ನಾವೇ ಹೊಸ ಹೊಸ ಪ್ರಯೋಗಗಳನ್ನ ಮಾಡಬೇಕಾಯಿತು ಕ್ರಿಯಾತ್ಮಕವಾಗಿ ಬುದ್ಧಿಸಂ ನ ಜನರ ನಡುವೆ ಆಚರಣೆಗೆ ತರುವ ಸಲುವಾಗಿ. ಇದೇ Engaged Buddhism ನ ಹುಟ್ಟಿಗೂ ಕಾರಣವಾಯಿತು.

ಬುದ್ಧಿಸಂ ನಿಮ್ಮ ದಿನ ನಿತ್ಯದ ಬದುಕಿಗೆ ಸಂಬಂಧಿಸಿದ್ದು , ನಿಮ್ಮ ದುಗುಡಗಳಿಗೆ, ನಿಮ್ಮ ಸುತ್ತಲಿನ ಜನರ ಸಮಾಧಾನಗಳಿಗೆ ಸಂಬಂಧಿಸಿದ್ದು. ಮೈಂಡ್ ಫುಲ್ ಬ್ರೀದಿಂಗ್ ಮಾಡುತ್ತಲೇ ನಿಮ್ಮ ಎದುರು ಅಳುತ್ತಿರುವ ಗಾಯಗೊಂಡ ಮಗುವಿಗೆ ಆರೈಕೆ ಮಾಡುವುದು ನಿಮಗೆ ಸಾಧ್ಯವಾಗಬೇಕು. ನೀವು ಧ್ಯಾನದ ಕ್ರಿಯೆಯಲ್ಲಿ ಕಳೆದುಹೋಗಬಾರದು ಧ್ಯಾನದಲ್ಲಿ ನಿನ್ಮನ್ನು ನೀವು ಕಂಡುಕೊಳ್ಳಬೇಕು, ಧ್ಯಾನದ ಸ್ಪಿರೀಟ್ ನ್ನು ಮೈಗೂಡಿಸಿಕೊಳ್ಳಬೇಕು.


(Source: Shambhala Sun, 2008 Interview)

****************************

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply