ದೈವ ಪ್ರೀತಿ – 5 (continued……): Art of love #30

ದ್ವಂದ್ವಾತ್ಮಕ ತಾರ್ಕಿಕತೆ ಚೈನೀಸ್ ಮತ್ತು ಭಾರತೀಯ ಆಲೋಚನಾ ಪದ್ಧತಿಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿರುವಂಥದು. ಹಾಗೆಯೇ ಹೆರಾಕ್ಲಿಟಸ್ ನ ತತ್ವಜ್ಞಾನದಲ್ಲಿ ಮತ್ತು ದ್ವಂದ್ವಾತ್ಮಕ ತತ್ವಮೀಮಾಂಸೆಯ ಹೆಸರಿನಲ್ಲಿ ಮಾರ್ಕ್ಸ್ ಮತ್ತು ಹೇಗಲ್ ರ ಫಿಲಾಸೊಫಿಯಾಗಿದೆ… | ಎರಿಕ್ ಫ್ರಾಮ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಈ ಹಂತದಲ್ಲಿ ದೈವಪ್ರೀತಿಯ ಕುರಿತಾದ ಸಮಸ್ಯೆಯ ಇನ್ನೊಂದು ಆಯಾಮ ಹುಟ್ಟಿಕೊಳ್ಳುತ್ತದೆ. ಸಮಸ್ಯೆಯ ಸಂಕೀರ್ಣತೆಯನ್ನು ತಿಳಿದುಕೊಳ್ಳಲು ನಾವು ಈ ಆಯಾಮದ ಬಗ್ಗೆ ಚರ್ಚಿಸಲೇ ಬೇಕಾಗಿದೆ. ಈ ಚರ್ಚೆಗಾಗಿ ನಾನು, ಪೂರ್ವ (ಚೈನಾ ಮತ್ತು ಇಂಡಿಯಾ) ಮತ್ತು ಪಶ್ಚಿಮ ಗಳ ಧಾರ್ಮಿಕ ದೃಷ್ಟಿಕೋನಗಳಲ್ಲಿನ ವ್ಯತ್ಯಾಸಗಳನ್ನು ಪರಿಗಣಿಸುತ್ತಿದ್ದೇನೆ ; ಈ ವ್ಯತ್ಯಾಸವನ್ನು ತಾರ್ಕಿಕ ಪರಿಕಲ್ಪನೆಯ ಮೂಲಕ ವಿವರಿಸಬಹುದು. ಆರಿಸ್ಟಾಟಲ್ ನ ನಂತರ, ಪಾಶ್ಚಾಮಾತ್ಯ ಜಗತ್ತು ಆರಿಸ್ಟಾಟಲ್ ನ ತತ್ವಜ್ಞಾನದ ತಾರ್ಕಿಕ ತತ್ವಗಳನ್ನ ಅನುಸರಿಕೊಂಡು ಬಂದಿತು. ಈ ತರ್ಕದ ಆಧಾರ Law of Identity, Law of contradiction ಮತ್ತು Law of excluded middle.

Law of Identity ಯ ಪ್ರಕಾರ A ಎಂದರೆ A (A is A),
Law of contradiction ಪ್ರಕಾರ A ಎಂದರೆ A ಅಲ್ಲದ್ದು ಅಲ್ಲ ( A is not non A) ಮತ್ತು,
Law of excluded middle ಪ್ರಕಾರ, A ಎಂದರೆ A ಮತ್ತು A ಅಲ್ಲದ್ದು ಎರಡೂ ಒಟ್ಟಿಗೇ ಆಗುವುದು ಸಾಧ್ಯವಿಲ್ಲ , ಹಾಗೆಯೇ A ಯೂ ಆಗುವುದಿಲ್ಲ , A ಅಲ್ಲದ್ದೂ ಆಗುವುದಿಲ್ಲ ( A can not be A and non-A, neither A nor non-A).

ಈ ಕೆಳಗಿನ ವಾಕ್ಯದಲ್ಲಿ ಆರಿಸ್ಟಾಟಲ್ ತನ್ನ ನಿಲುವನ್ನು ಹೀಗೆ ಸ್ಪಷ್ಟ ಪಡಿಸಿದ್ದಾನೆ :
“ ಒಂದು ಸಂಗತಿ, ಅದೇ ಕಾಲದಲ್ಲಿ, ಅದೇ ಸಂಗತಿಗೆ, ಅದೇ ರೀತಿಯಲ್ಲಿ ಸಂಬಂಧಿತವೂ, ಸಂಬಂಧಿತ ವಾಗಿಲ್ಲದೆ ಇರುವುದೂ ಅಸಾಧ್ಯ. “ ; ಮತ್ತು ತಾತ್ವಿಕ ಆಕ್ಷೇಪಣೆಗಳಿಗೆ ಪುಷ್ಟಿಯಾಗಿ ಇನ್ನಾವುದೇ ಇತರ ಭಿನ್ನತೆಗಳನ್ನು ಸೇರಿಸಬಯಸಿದರೂ ನಾವು ಸೇರಿಸಬಹುದು. ಆಗ ಇದು ಎಲ್ಲ ತತ್ವಗಳಲ್ಲಿ ಅತ್ಯಂತ ಖಚಿತವಾದದ್ದು…..” (19)

ಆರಿಸ್ಟಾಟಲ್ ನ ತರ್ಕದ ಈ ಪ್ರಚಲಿತ ಸತ್ಯ ನಮ್ಮ ವಿಚಾರಕ್ರಮವನ್ನು ಎಷ್ಟು ಪ್ರಭಾವಿಸಿದೆ ಎಂದರೆ ನಾವು ಅದನ್ನು “ಸಹಜ” ಮತ್ತು “ಸ್ವಯಂವೇದ್ಯ” ಎಂದುಕೊಳ್ಳುತ್ತೇವೆ, ಮತ್ತು ನಮಗೆ X ಎಂದರೆ A ಮತ್ತು A ಅಲ್ಲ ಎನ್ನುವ ಸ್ಟೇಟಮೆಂಟ್ ಅನವಶ್ಯಕ ಅನಿಸುತ್ತದೆ. ( ಹೌದು, ಈ ಹೇಳಿಕೆ X ಎನ್ನುವ ಸಂಗತಿಗೆ ಸಂಬಂಧಿಸಿದ್ದು ಒಂದು ನಿರ್ದಿಷ್ಟ ಸಮಯದಲ್ಲಿ, ಈಗ ಇರುವ X ಗೆ ಅಲ್ಲ, ಮುಂದೆ ಬರುವ X ಗೂ ಅಲ್ಲ, ಅಥವಾ X ನ ಒಂದು ಅಂಶಕ್ಕೆ ಸಂಬಂಧಪಟ್ಟಂತೆ ಇನ್ನೊಂದು ಅಂಶಕ್ಕೆ ವ್ಯತಿರಿಕ್ತವಾಗಿ)

ಆರಿಸ್ಟಾಟಲ್ ನ ತರ್ಕಕ್ಕೆ ವಿರೋಧದಂತೆ ಇರುವುದು “ದ್ವಂದ್ವಾತ್ಮಕ ತರ್ಕ” (Paradoxical logic), ಅದರ ಪ್ರಕಾರ, A ಮತ್ತು A ಅಲ್ಲದ್ದು ಎರಡೂ ಪರಸ್ಪರ ವೈರುಧ್ಯಗಳಲ್ಲ. ದ್ವಂದ್ವಾತ್ಮಕ ತಾರ್ಕಿಕತೆ ಚೈನೀಸ್ ಮತ್ತು ಭಾರತೀಯ ಆಲೋಚನಾ ಪದ್ಧತಿಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿರುವಂಥದು. ಹಾಗೆಯೇ ಹೆರಾಕ್ಲಿಟಸ್ ನ ತತ್ವಜ್ಞಾನದಲ್ಲಿ ಮತ್ತು ದ್ವಂದ್ವಾತ್ಮಕ ತತ್ವಮೀಮಾಂಸೆಯ ಹೆಸರಿನಲ್ಲಿ ಮಾರ್ಕ್ಸ್ ಮತ್ತು ಹೇಗಲ್ ರ ಫಿಲಾಸೊಫಿಯಾಗಿದೆ. ದ್ವಂದ್ವಾತ್ಮಕ ತಾರ್ಕಿಕತೆಯ ಸಾಮಾನ್ಯ ತತ್ವವನ್ನು ಲೋವೋತ್ಸೇ ಸ್ಪಷ್ಟವಾಗಿ ವಿವರಿಸುತ್ತಾನೆ; “ ಖಚಿತವಾಗಿ ಸತ್ಯವಾಗಿರುವ ಪದಗಳು ದ್ವಂದ್ವಾತ್ಮಕ ಅನಿಸುತ್ತವೆ “ (20) ಮತ್ತು ಜುವಾಂಗ್ ತ್ಸೇ ಪ್ರಕಾರ, “ಯಾವುದು ಒಂದು ಆಗಿರುವುದೋ ಅದು ಒಂದು. ಯಾವುದು ಒಂದು ಆಗಿಲ್ಲವೋ ಅದೂ ಒಂದು “ (That which is one is one. That which is not-one is also one). ದ್ವಂದ್ವಾತ್ಮಕ ತಾರ್ಕಿಕತೆಯ ಈ ಸಮೀಕರಣ ಧನಾತ್ಮಕವಾದದ್ದು : ಅದು ಇದೆ ಮತ್ತು ಅದು ಇದೆ ಇಲ್ಲದೆಯೂ (it is & it is not). ದ್ವಂದ್ವಾತ್ಮಕ ತಾರ್ಕಿಕತೆಯ ಇನ್ನೊಂದು ಸಮೀಕರಣ ನೇತ್ಯಾತ್ಮಕವಾದದ್ದು, “ ಅದು, ಇದೂ ಅಲ್ಲ ಅದೂ ಅಲ್ಲ” ( it is neither this nor that). ಮೊದಲ ರೀತಿಯ ಅಭಿವ್ಯಕ್ತಿ, ತಾವೋ , ಹೆರಾಕ್ಲಿಟಸ್ ಮತ್ತು ಪುನಃ ಹೇಗಲ್ ನ ದ್ವಂದ್ವಾತ್ಮಕ ತತ್ವ ಮೀಮಾಂಸೆಯಲ್ಲಿ ಕಂಡುಬಂದರೆ, ಎರಡನೇಯ ಬಗೆಯ ಸಮೀಕರಣವನ್ನು ಭಾರತೀಯ ತತ್ವಜ್ಞಾನದಲ್ಲಿ ಗಮನಿಸಬಹುದು.

ಈ ಪುಸ್ತಕದ ವ್ಯಾಪ್ತಿಯನ್ನು ಮೀರಿದರೂ, ಆರಿಸ್ಟೊಟಲ್ ನ ತಾರ್ಕಿಕತೆ ಮತ್ತು ದ್ವಂದ್ವಾತ್ಮಕ ತಾರ್ಕಿಕತೆಯ ನಡುವಿನ ವ್ಯತ್ಯಾಸವನ್ನು ಇನ್ನೂ ಹೆಚ್ಚು ವಿವರಣಾತ್ಮಕವಾಗಿ ನೀಡಲು, ಈ ವಿಷಯವನ್ನು ಇನ್ನೂ ಹೆಚ್ಚು ಸ್ಪಷ್ಟಗೊಳಿಸಲು ನಾನು ಕೆಲವು ಉದಾಹರಣೆಗಳನ್ನು ಕೊಡುತ್ತೇನೆ. ಪಾಶ್ಚಿಮಾತ್ಯ ಆಲೋಚನೆಯಲ್ಲಿ ದ್ವಂದ್ವಾತ್ಮತ ತಾರ್ಕಿಕತೆ ತನ್ನ ಮೊದ ಮೊದಲಿನ ತಾತ್ವಿಕ ಅಭಿವ್ಯಕ್ತಿಯನ್ನ ಹೆರಾಕ್ಲಿಟಸ್ ನ ಫಿಲಾಸೊಫಿಯಲ್ಲಿ ಕಂಡುಕೊಳ್ಳುತ್ತದೆ. ಹೆರಾಕ್ಲಿಟಸ್, ಎರಡು ವೈರುಧ್ಯಗಳ ನಡುವಿನ ಬಿಕ್ಕಟ್ಟನ್ನು ಎಲ್ಲ ಅಸ್ತಿತ್ವದ ನೆಲೆ ಎಂದುಕೊಳ್ಳುತ್ತಾನೆ.

“ ಎಲ್ಲ ಒಂದಾಗಿರುವುದು ತನ್ನೊಳಗೇ ತಿಕ್ಕಾಟ ನಡೆಸುತ್ತಿದ್ದರೂ, ತನಗೆ ತಾನೇ ಸಾದೃಶ್ಯವಾಗಿರುತ್ತದೆ ಎನ್ನುವುದು ಅವಕ್ಕೆ ಗೊತ್ತಿರುವುದಿಲ್ಲ. ತಂತಿವಾದ್ಯದ bow ಮತ್ತು lyre ಗಳು ತಿಕ್ಕಾಟ ನಡೆಸುತ್ತ ಒಂದು harmony ಯನ್ನು ಸೃಷ್ಟಿ ಮಾಡುವಂತೆ.” (21)

ಅಥವಾ ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ ; ನಾವು ಅದೇ ನದಿಯೊಳಗೆ ಕಾಲಿಟ್ಟರೂ, ಅದು ಅದೇ ನದಿಯಲ್ಲ ; ಅದು, ನಾವು ಹೌದು ಮತ್ತು ಅದು, ನಾವಲ್ಲ ಕೂಡ” (22) ಅಥವಾ “ ಒಂದು ಸಂಗತಿ, ಸಾವು ಮತ್ತು ಬದುಕಾಗಿ, ನಿದ್ರೆ ಮತ್ತು ಎಚ್ಚರವಾಗಿ, ಹರೆಯ ಮತ್ತು ಮುಪ್ಪಾಗಿ ತಾನೇ ಸ್ವತಃ ಅಭಿವ್ಯಕ್ತಿಗೊಳ್ಳುತ್ತಿರುತ್ತದೆ.” (23)

ಲಾವೋತ್ಸೆಯ ತತ್ವಜ್ಞಾನದಲ್ಲಿ ಇದೇ ವಿಚಾರವು ಹೆಚ್ಚು ಕಾವ್ಯಾತ್ಮಕವಾಗಿ ಪ್ರಸ್ತುತಪಡಿಸಲ್ಪಟ್ಟಿದೆ. ತಾವೋಯಿಸ್ಟ್ ದ್ವಂದ್ವಾತ್ಮಕ ತಾರ್ಕಿಕತೆಯ ವಿಶಿಷ್ಟ ಉದಾಹರಣೆಯನ್ನ ಈ ಹೇಳಿಕೆಯಲ್ಲಿ ಗುರುತಿಸಬಹುದು :

“ ಹಗುರಾಗಿರುವುದಕ್ಕೆ ಗುರುತ್ವವೇ ಕಾರಣ; ನಿಶ್ಚಲವೇ ಚಲನೆಯನ್ನು ನಿಯಂತ್ರಿಸುವುದು. “ (24) ಅಥವಾ “ ತಾವೋ ಏನೂ ಮಾಡುವುದಿಲ್ಲವಾದ್ದರಿಂದ, ತಾವೋ ಮಾಡದಿರುವುದು ಏನೂ ಇಲ್ಲ.” (25) ಅಥವಾ “ ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ, ಆಚರಿಸುವುದು ಸುಲಭ; ಆದರೆ ಅರ್ಥ ಮಾಡಿಕೊಳ್ಳುವವರು, ಆಚರಿಸುವವರು ಜಗತ್ತಿನಲ್ಲಿ ಯಾರೂ ಇಲ್ಲ.” (26) ಭಾರತಿಯ ಮತ್ತು ಸಾಕ್ರೆಟಿಕ್ ಚಿಂತನೆಯಂತೆಯೇ ತಾವೋ ಚಿಂತನೆಯಲ್ಲಿ ಕೂಡ, ‘ನನಗೆ ಗೊತ್ತಿಲ್ಲ’ ಎನ್ನುವುದು ಆಲೋಚನೆ ಮುಟ್ಟಬಹುದಾದ ಅತ್ಯಂತ ದೊಡ್ಡ ಎತ್ತರ. ಗೊತ್ತಿದ್ದರೂ, ಗೊತ್ತಿಲ್ಲ ಎಂದು (think) ಕೊಳ್ಳುವುದು ಅತೀ ಎತ್ತರ (ಸಾಧನೆ); ಗೊತ್ತಿಲ್ಲದಿದ್ದರೂ ಗೊತ್ತು (and yet think) ಎಂದುಕೊಳ್ಳುವುದು ಕಾಯಿಲೆ.” (27) ಕೇವಲ ಈ ತತ್ವಜ್ಞಾನದ ಪರಿಣಾಮವಾಗಿಯೇ ಪರಮದೈವವನ್ನು ಹೆಸರಿಸಲು ಸಾಧ್ಯವಾಗುವುದಿಲ್ಲ. ಮತ್ತು ಆ ಪರಮ ಸತ್ಯವನ್ನ, ಆ ಆತ್ಯಂತಿಕವನ್ನ ಚಿಂತನೆಗಳಲ್ಲಿ, ಪದಗಳಲ್ಲಿ ಹಿಡಿದಿಡುವುದು ಅಸಾಧ್ಯವಾಗಿರುವುದು.

(19) Aristotle, Metaphysics, translated by Richard Hope, London. OUP, 1955
(20) Lao-tse, The Tao Teh King, The sacred Books of east, edited by F.Max Muller, vol XXXIX, London, OUP, 1927, p.120

**************************

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply